ಕಿವುಡ, ಮೂಕ ಹೆಣ್ಣುಮಕ್ಕಳ ಶಾಲೆಯಲ್ಲಿ ಬಸವ ಪಂಚಮಿ

ಸಿ.ಎಂ. ಬೂದಿಹಾಳ
ಸಿ.ಎಂ. ಬೂದಿಹಾಳ

ಗುರುಬಸವ ಬಳಗದ ನಾಲ್ಕು ವರ್ಷದಿಂದ ಮೌಲಿಕ ಕಾರ್ಯಕ್ರಮ

ಬೆಳಗಾವಿ: 

ಸಂಚಾರಿ ಗುರುಬಸವ ಬಳಗದಿಂದ ಬಸವ ಪಂಚಮಿ ನಿಮಿತ್ತ ಸೋಮವಾರ ವಿದ್ಯಾಗಿರಿಯ ಕಿವುಡು ಹಾಗೂ ಮೂಕ ಸರಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ ಹಣ್ಣು ಹಾಗೂ ಹಾಲು ವಿತರಣಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಅಶೋಕ ಚಂದರಗಿ ಅವರು ಮಾತನಾಡುತ್ತ, ಬಸವಾದಿ ಶರಣರ ವಚನಗಳು ಹಿಂದೆಯು, ಇಂದು ಹಾಗೂ ಮಂದೆಯು ಸಮಾಜಕ್ಕೆ ಪ್ರಸ್ತುತವಾಗಿವೆ.

ವಚನಗಳಲ್ಲಿರುವ ಮೌಲ್ಯಗಳು ಮಾನವನ ಸಾಮಾಜಿಕ ಪ್ರಗತಿಗೆ ಪೂರಕವಾಗಿವೆ ಎಂದು ಹೇಳುತ್ತ ಹಾಲನ್ನು ಮಕ್ಕಳಿಗೆ ವಿತರಿಸುವುದರ ಮುಖಾಂತರ ಸಂಚಾರಿ ಗುರುಬಸವ ಬಳಗವು ಬಸವ ಪಂಚಮಿ ಆಚರಿಸುತ್ತಿರುವ ಕಾರ್ಯವನ್ನು ಶ್ಲಾಘಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎಂ. ಬೂದಿಹಾಳ ಅವರು ಮಕ್ಕಳಿಗೆ ಹಾಲು ಹಣ್ಣು ವಿತರಿಸಿ ಮಾತನಾಡುತ್ತ, ಪ್ರತಿ ಸಮಸ್ಯೆಗೂ ಬಸವಾದಿ ಶರಣರ ವಚನಗಳಲ್ಲಿ ಪರಿಹಾರ ಸಿಗುತ್ತದೆ ಎಂದು ಹೇಳುತ್ತ ಕೆಲ ವಚನಗಳನ್ನು ಉದಾಹರಣೆಯೊಂದಿಗೆ ವಿವರಿಸಿದರು.

ವಿಶ್ವಗುರು ಬಸವಣ್ಣನವರು 12ನೆಯ ಶತಮಾನದಲ್ಲಿ ಅಸ್ಪಶ್ಯರನ್ನು, ದೀನ ದಲಿತರನ್ನು, ಶೋಷಣೆಗೆ ಒಳಪಟ್ಟ ಸ್ತ್ರೀಯರನ್ನು, ಸೌಲಭ್ಯ ವಂಚಿತರನ್ನು ತಮ್ಮ ಜೊತೆಗೆ ಸೇರಿಸಿಕೊಂಡು ಅನುಭವ ಮಂಟಪದ ಮುಖಾಂತರ ಅವರಲ್ಲಿ ಸಮಾನತೆಯ ಪ್ರಜ್ಞೆ ಮೂಡಿಸಿದರು. ತುಳಿತಕ್ಕೊಳಪಟ್ಟವರಿಗೆ ಜ್ಞಾನ ಕೊಟ್ಟು ಜಾತಿರಹಿತ ಲಿಂಗವಂತ ಧರ್ಮ ಉದಯಕ್ಕೆ ಕಾರಣರಾದರು ಎಂದು ಹೇಳಿದರು.

ಮುಂದೆ ಮಾತನಾಡುತ್ತ ಸಂಚಾರಿ ಗುರು ಬಸವ ಬಳಗವು ಮೂಢನಂಬಿಕೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ಸಂಚಾಲಕ ಮಹಾಂತೇಶ ತೋರಣಗಟ್ಟಿ ಅವರ ನೇತೃತ್ವದಲ್ಲಿ ವಚನಗಳ ಮುಖಾಂತರ ಸಮಸಮಾಜದ ತಿಳುವಳಿಕೆಯನ್ನು ನೀಡುತ್ತಿದ್ದಾರೆ. ಅಂಗವಿಕಲ, ಶ್ರವಣದೋಷ, ಅಂಧಮಕ್ಕಳ ಶಾಲೆ ಹಾಗೂ ಅನಾಥಾಲಯಗಳಿಗೆ ಭೆಟ್ಟಿಕೊಟ್ಟು ವಚನ ಸಾಹಿತ್ಯರೊಂದಿಗೆ ಅವರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಅಧೀಕ್ಷಕರಾದ ಶಂಕರಗೌಡ ಪಾಟೀಲ ಅವರು ಮಾತನಾಡಿ, ಸುಮಾರು ನಾಲ್ಕು ವರ್ಷಗಳಿಂದ ನಮ್ಮ ಶಾಲೆಯಲ್ಲಿ ಇಂತಹ ಮೌಲಿಕ ಕಾರ್ಯಕ್ರಮವನ್ನು ಸಂಚಾರಿ ಗುರುಬಸವ ಬಳಗದವರು ಮಾಡುತ್ತ ಬಂದಿದ್ದಾರೆ. ಇದೇ ರೀತಿ ಸಮಾಜಮುಖಿ ಕಾರ್ಯಕ್ರಮದಿಂದ ನಮ್ಮ ಶಾಲಾ ಮಕ್ಕಳಿಗೆ ನಮಗೆ ಸಂತಸ ನೀಡಿದೆ ಎಂದು ಹೇಳಿದರು.

ಶಾಲೆಯ ವಿಶೇಷ ಶಿಕ್ಷಕಿ ಸವಿತಾ ಹೊಳಿ ಅವರು ಸಂಜ್ಞಾ ಸಂಕೇತಗಳ ಮೂಲಕ ಅತಿಥಿಗಳ ಭಾಷಣಗಳನ್ನು ಅನುವಾದಿಸಿದರು.

ಪ್ರಾರಂಭದಲ್ಲಿ ಸಂಚಾರಿ ಗುರುಬಸವ ಬಳಗದ ಮಹಾಂತೇಶ ತೋರಣಗಟ್ಟಿ ಅವರು ಪ್ರಾಸ್ಥಾವಿಕವಾಗಿ ಮಾತನಾಡುತ್ತ, ಅಮೃತ ಸಮಾನವಾದ ಹಾಲು ಧರ್ಮದ ಹೆಸರಿನಲ್ಲಿ ಪೋಲಾಗಬಾರದೆಂದು ಪ್ರತಿವರ್ಷ ಬಸವಣ್ಣನವರು ಲಿಂಗೈಕ್ಯ ದಿನವಾದ ಇಂದು ಬಸವ ಪಂಚಮಿ ಎಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಆಯುಷ ಇಲಾಖೆಯ ಅಧಿಕಾರಿ ಡಾ. ಸುಚೇತಾ ದೇಸಾಯಿ ಅವರು ಮಕ್ಕಳಿಗೆ ಭೂಸ್ಟರ್ ಕಿಟ್ ವಿತರಿಸಿದರು. ಮಕ್ಕಳ ಆರೋಗ್ಯ ತಪಾಸಣೆಗೆ ಆಗಮಿಸಿದ್ದ ಕಂಕಣವಾಡಿ ಆಯರ್ವೇದ ಕಾಲೇಜಿನ ವೈದ್ಯರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ನ್ಯಾಯವಾದಿ ಬಿ.ಪಿ. ಜೇವನಿ ವಚನ ಪ್ರಾರ್ಥನೆ ನಡೆಸಿದರು. ಸಿದ್ರಾಮ ಸಾವಳಗಿ ಸ್ವಾಗತಿಸಿದರು. ಶಿವಾನಂದ ಲಾಳಸಿಂಗಿ ನಿರೂಪಿಸಿದರು. ಬಿ.ಡಿ ಪಾಟೀಲ ಶರಣು ಸಮರ್ಪಣೆ ಮಾಡಿದರು.

ಸಂಚಾರಿ ಗುರುಬಸವ ಬಳಗದ ಶರಣ ಶರಣೆಯರೊಂದಿಗೆ ಜಾಗತಿಕ ಲಿಂಗಾಯತ ಮಹಾಸಭಾದ ಎಫ್. ಆರ್. ಪಾಟೀಲ, ಈರಣ್ಣ ಚಿನಗುಡಿ, ಮುರಿಗೆಪ್ಪ ಬಾಳಿ, ಪ್ರವೀಣಕುಮಾರ ಚಿಕಲಿ ಹಾಗೂ ಲಿಂಗಾಯತ ಸಂಘಟನೆಯ ಸುರೇಶ ನರಗುಂದ ಮತ್ತು ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *