ಬಸವಕಲ್ಯಾಣವೇ ಆಗಿರುವ ಟಣಕನಕಲ್ಲ ಗ್ರಾಮ

ಡಾ ಸಂಗಮೇಶ ಕಲಹಾಳ
ಡಾ ಸಂಗಮೇಶ ಕಲಹಾಳ

ಕೊಪ್ಪಳ:

ಒಂದು ಗ್ರಾಮದಲ್ಲಿ ನೂರಾರು ಮಕ್ಕಳು ವಚನ ಕಂಠಪಾಠ, ವಚನಗಳ ವಿಶ್ಲೇಷಣೆ, ವಚನಗಾಯನ, ವಚನ ನೃತ್ಯ, ಶರಣರ ಜೀವನ ಚರಿತ್ರೆ ವಾಚನ ಮತ್ತು ಶಿವಯೋಗದ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುವ ಕಾರ್ಯಕ್ರಮಗಳು ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವುದು ಬಸವಣ್ಣನವರ ಅನುಭವ ಮಂಟಪವೇ ಟಣಕನಕಲ್ಲ ಗ್ರಾಮದ ಭೂಮಿಯಲ್ಲಿ ತಲೆ ಎತ್ತಿದಂತಾಗಿದ್ದು ಹೆಮ್ಮೆ ತಂದಿದೆ ಎಂದು ಇಲಕಲ್ಲನ ಶ್ರೀ ವಿಜಯಮಹಾಂತೇಶ್ವರ ಮಠಾಧೀಶರಾದ ಪೂಜ್ಯ ಗುರುಮಹಾಂತ ಅಪ್ಪಗಳವರು ನುಡಿದರು.

ತಾಲೂಕಿನ ಟಣಕನಕಲ್ಲ ಗ್ರಾಮದ ರಾಷ್ಟ್ರೀಯ ಬಸವದಳ ಮತ್ತು ಕೊಪ್ಪಳದ ವಿಶ್ವ ಪರಮೋಚ್ಛ ಪ್ರಜ್ಞಾ ಪ್ರತಿಷ್ಠಾನಗಳ ಸಂಯುಕ್ತ ಆಶ್ರಯದಲ್ಲಿ ಈಚೆಗೆ ನಡೆದ “ರಾಷ್ಟ್ರೀಯ ಬಸವದಳದ ಮಕ್ಕಳ ಸಾಧನಾ ಸಮಾವೇಶ, ಶಿವಯೋಗದ ವೈಜ್ಞಾನಿಕ ಅಧ್ಯಯನದ ಉದ್ಘಾಟನೆ ಮತ್ತು ಶ್ರಾವಣ ಮಾಸದ ಮನ-ಮನಗಳಿಗೆ ಮನೆ-ಮನೆಗಳಿಗೆ ಬಸವ ಪ್ರಜ್ಞಾಜ್ಯೋತಿ ಕಾರ್ಯಕ್ರಮದ ಸಮಾರೋಪ ಸಮಾರಂಭ”ದಲ್ಲಿ ಅವರು ಆಶೀರ್ವಚನ ನೀಡುತ್ತ ಮಾತನಾಡುತ್ತಿದ್ದರು.

ಮಕ್ಕಳಲ್ಲಿ ಶರಣಪ್ರಜ್ಞೆ

ಮಕ್ಕಳಲ್ಲಿ ಶರಣಪ್ರಜ್ಞೆ ಬೆಳೆಯಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಮಾಜಿ ಶಾಸಕರಾದ ಕೆ. ಶರಣಪ್ಪನವರು ನುಡಿದರು.

ಅವರು ಟಣಕನಕಲ್ಲ ಗ್ರಾಮದಲ್ಲಿ ನಡೆದ ಮಕ್ಕಳ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ದೊಡ್ಡವರು ಶರಣತತ್ವ ಅಳವಡಿಸಿಕೊಂಡರೆ ತಮ್ಮ ಜೀವಿತದಲ್ಲಿ ಕಡಿಮೆ ಅವಧಿಯ ಅವಕಾಶ ಸಿಗುತ್ತದೆ. ಅದೇ ಮಕ್ಕಳಲ್ಲಿ ಬಸವತತ್ವ ಬೇರೂರಿದರೆ ಎರಡು ಮೂರು ಪೀಳಿಗೆಯವರೆಗೆ ಶರಣತತ್ವವನ್ನು ಮುಂದವರೆಸಿಕೊಂಡು ಹೋದಂತಾಗುವುದೆಂದರು.

ನಿವೃತ್ತ ಪ್ರಾಧ್ಯಾಪಕರೂ, ಹಿರಿಯ ಶರಣತತ್ವ ಚಿಂತಕರೂ ಮತ್ತು ವಯೋವೃದ್ಧ ಅನುಭಾವಿಗಳೂ ಆದ ಸಿ. ಹೆಚ್. ನಾರಿನಾಳರವರು ಮಾತನಾಡಿ; ಕಳೆದ ಐದು ದಶಕಗಳಲ್ಲಿ ನೋಡಲಾಗಿ ಮಕ್ಕಳಲ್ಲಿ ಶರಣತತ್ವ ಬೀಜ ಬಿತ್ತುತ್ತಿರುವ ಕಾರ್ಯ ಒಂದು ಅಭೂತಪೂರ್ವ ಕಾರ್ಯವಾಗಿದೆ.

ಬಿದ್ದುಹೋಗುವ ಮರಗಳಿಗೆ ನೀರೆರೆಯುವುದಕ್ಕಿಂತ, ಚಿಗುರುವ ನಾಳಿನ ನಾಗರಿಕರಾದ ಮಕ್ಕಳಲ್ಲಿ ಬಸವಬೀಜಗಳನ್ನು ಬಿತ್ತಬೇಕು. ಅಂತಹ ನಿಜವಾದ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಬಸವತತ್ವಗಳನ್ನು ಪ್ರಸಾರ ಮಾಡುವ ಕಾರ್ಯದಲ್ಲಿ ನೂರಾರು ಮಕ್ಕಳು ತೊಡಗಿರುವುದು ಒಂದು ಅದ್ಭುತವಾದ ಸಾಧನೆಯಾಗಿದೆ ಎಂದರು.

ಶಿವಯೋಗದ ವೈಜ್ಞಾನಿಕ ಅಧ್ಯಯನ

ಶಿವಯೋಗದ ವೈಜ್ಞಾನಿಕ ಅಧ್ಯಯನದ ಉಪಕರಣವನ್ನು ಉದ್ಘಾಟಿಸುತ್ತ ಹೊಸಪೇಟೆಯ ಡಿಗ್ರಿ ಕಾಲೇಜು ಪ್ರಾಂಶುಪಾಲರಾದ ಡಾ. ಟಿ. ಹೆಚ್. ಬಸವರಾಜ ಅವರು ಮಾತನಾಡುತ್ತ, ಒಂದು ಚಿಕ್ಕ ಗ್ರಾಮದಲ್ಲಿ ಶಿವಯೋಗದ ವೈಜ್ಞಾನಿಕ ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳುತ್ತಿರುವುದು ಐತಿಹಾಸಿಕ ಸಂದರ್ಭವಾಗಿದೆ. ಕ್ವಾಂಟಮ್ ಹೆಲ್ಥ್ ಅನಲೈಜರ್ ಉಪಕರಣವು ಪ್ರಾಥಮಿಕ ಹಂತದ ಸಂಶೋಧನೆಗೆ ಒಂದು ಸರಳ ಸಾಧನವಾಗಿದೆ ಎಂದರು.

ಇದರ ಸಂಪೂರ್ಣ ಲಾಭ ಪಡೆದು ಇಷ್ಟಲಿಂಗದ ವೈಜ್ಞಾನಿಕ ಪ್ರಭಾವವನ್ನು ಜಗತ್ತಿಗೆ ಸಾರುವ ಕೆಲಸವಾಗಲಿ ಎಂದು ಹಾರೈಸಿದರು.

ಜಗತ್ತಿಗೆ ಮಾದರಿ

ಆಯುರ್ವೇದ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಧಾರವಾಡದ ಡಾ. ಸಂಗಪ್ಪ ಕೋಟೂರ ಅವರು ಮಾತನಾಡಿ, ಬಸವತತ್ವಗಳು ಕೇವಲ ಗ್ರಾಂಥಿಕ, ಉಪನ್ಯಾಸ, ಭಾಷಣಗಳಿಗೆ ಸೀಮಿತವಾಗದೇ; ವಾಸ್ತವಿಕ ಆಚರಣೆಗಳಲ್ಲಿ ಬಂದಾಗ ಮಾತ್ರ ಆ ತತ್ವಗಳಿಗೆ ಮೌಲ್ಯ ಹೆಚ್ಚುತ್ತದೆ ಎಂದರು.

ಶರಣತತ್ವಗಳನ್ನು ಪ್ರತಿನಿತ್ಯ ಸಣ್ಣ ಸಣ್ಣದಾಗಿ ಜೀವನದ ಪ್ರಸಂಗಗಳಲ್ಲಿ ಅಳವಡಿಸುತ್ತ ಹೋದಾಗ ಅವು ಆಲದಮರದಂತೆ ಬೃಹದಾಕಾರ ಮತ್ತು ಜಗತ್ತಿನಾದ್ಯಂತ ಪ್ರಸಾರವಾಗಲು ಸುಲಭವಾಗುತ್ತದೆ ಎಂದು ನುಡಿದರು. ಟಣಕನಕಲ್ಲ ಗ್ರಾಮ ಜಗತ್ತಿಗೆ ಮಾದರಿಯಾಗಲಿ ಎಂದು ಹಾರೈಸಿದರು.

ಅನುಭವ ಮಂಟಪ ಮುಂದೇನು?

ಜಾಗತಿಕ ಲಿಂಗಾಯತ ಮಹಾಸಭಾ ಇತ್ತೀಚೆಗೆ ಬೆಳಗಾವಿಯಲ್ಲಿ “ಲಿಂಗಾಯತ ಧರ್ಮದ ಆಚರಣೆಗಳು” ಮತ್ತು “ಅನುಭವ ಮಂಟಪ ಕಟ್ಟಡ ಮುಗಿದ ನಂತರ ಮುಂದೇನು?” ಈ ಎರಡು ಗ್ರಂಥಗಳನ್ನು ಬಿಡುಗಡೆ ಮಾಡಿತ್ತು. ಈ ಎರಡೂ ಗ್ರಂಥಗಳನ್ನು ಪೂಜ್ಯರು ಮತ್ತು ಗಣ್ಯರು ಇಲ್ಲಿ ಮರುಬಿಡುಗಡೆ ಮಾಡಿದರು.

ಟಣಕನಕಲ್ಲ ಗ್ರಾಮದ ರಾಷ್ಟ್ರೀಯ ಬಸವದಳ ಮತ್ತು ಕೊಪ್ಪಳದ ವಿಶ್ವ ಪರಮೋಚ್ಛ ಪ್ರಜ್ಞಾ ಪ್ರತಿಷ್ಠಾನಗಳ ಸದಸ್ಯರು ಶೀಘ್ರದಲ್ಲಿ ಅನುಭವ ಮಂಟಪ ಭವನ ನಿರ್ಮಾಣ ಕಾರ್ಯ ಪ್ರಾರಂಭಿಸುವ ಸಂಕಲ್ಪ ವ್ಯಕ್ತ ಮಾಡಿದರು. ಇಲಕಲ್ಲಿನ ಪರಮಪೂಜ್ಯರು ತಮಗೆ ಗ್ರಾಮಸ್ಥರು ಸಲ್ಲಿಸಿದ್ದ ಭಕ್ತಿಕಾಣಿಕೆಯನ್ನು ಅನುಭವ ಮಂಟಪದ ನಿರ್ಮಾಣಕ್ಕೆ ಆರಂಭಿಕ ಮೊತ್ತವಾಗಿ ನೀಡಿ ಉತ್ತೇಜನ ನೀಡಿದರು.

ಕಂಪ್ಲಿಯ ಬಸವತತ್ವ ಅನುಯಾಯಿಗಳು ಮತ್ತು ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಅಕ್ಕಿ ಗಿರಣಿ ಮಾಲಿಕರ ಸಂಘದ ರಾಜ್ಯ ಉಪಾಧ್ಯಕ್ಷರು ಆದ ಕೆ. ಎಂ. ಹೇಮಯ್ಯಸ್ವಾಮಿ ;  ವಿಜಯನಗರ ಜಿಲ್ಲೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ರಾದ ಬಸವರಾಜ ಮಾವಿನಳ್ಳಿ ; ಟಣಕನಕಲ್ಲ ಗ್ರಾಮದ ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಪರಪ್ಪ ಗೊಂದಿಹೊಸಳ್ಳಿ ; ಪ್ರಧಾನ ಕಾರ್ಯದರ್ಶಿ ಶಿವಬಸಯ್ಯ ವೀರಾಪುರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಇವರೆಲ್ಲರಿಗೆ ಗೌರವ ಸನ್ಮಾನ ಸಲ್ಲಿಸಲಾಯಿತು.

ಬಸವತತ್ವ ಚಿಂತಕರಾದ ಅಮರೇಶಪ್ಪ ಗಡಿಹಳ್ಳಿ ಸೋಮಸಾಗರ, ಅಮರೇಶಪ್ಪ ಬಳ್ಳಾರಿ ಮರಕಟ್ಟು, ರೇಣುಕಪ್ಪ ಮಂತ್ರಿ ಗುಳೆ, ಬಸವರಾಜ ಇಂಗಳದಾಳ ಕೋಳಿಹಾಳ, ನಾಗನಗೌಡ್ರು ಜಾಲಿಹಾಳ ಮಾಟಲದಿನ್ನಿ, ಶರಣಪ್ಪ ಗುದಗಿ ಹಾರ್ಮೋನಿಯಂ ಗುರುಗಳು ಗುನ್ನಾಳ, ರುದ್ರಪ್ಪಾ ಹಳ್ಳಿ ಹಿರೇಸೂಳಿಕೇರಿ, ಶರಣಪ್ಪ ಉಳ್ಳಾಗಡ್ಡಿ ಹಿರೇಬೊಮ್ಮನಾಳ ವೇದಿಕೆಯಲ್ಲಿ ಗೌರವ ಉಪಸ್ಥಿತರಾಗಿದ್ದರು.

ಕೊಪ್ಪಳದ ಹಿರಿಯ ಶರಣರಾದ ಎಲ್. ಹೆಚ್. ಪಾಟೀಲ, ಪಂಪಾಪತಿ ಹೊನ್ನಳ್ಳಿ, ಬಸವರಾಜಪ್ಪ ಇಂಜಿನಿಯರ, ವಿಶ್ವನಾಥ ನಿಲೂಗಲ್ಲ, ಸುಂಕಪ್ಪ ಅಮರಾಪೂರ, ನೀಲಕಂಠಪ್ಪ ಮೆಣಸಗೇರಿ, ಮುತ್ತಣ್ಣ ಬೀರಲದಿನ್ನಿ, ವೀರಭದ್ರಪ್ಪ ನಂದ್ಯಾಲ, ಶಿವಕುಮಾರ ಕುಕನೂರು, ರಾಜೇಶ ಸಸಿಮಠ, ಶಿವಸಂಗಪ್ಪ ವಣಗೇರಿ, ಶೇಖರ ಇಂಗಳದಾಳ, ವಿಶಾಲಾಕ್ಷಿ ಸಸಿಮಠ, ಸುಜಾತಾ ಗುರು ಹಲಗೇರಿ, ಸಾವಿತ್ರಿ ಮುಜುಮದಾರ, ಗಾಳೆಪ್ಪ ಕಡೆಮನಿ ಮತ್ತು ಕೆ. ಬಾಲಪ್ಪ, ನಿವೃತ್ತ ತಹಸೀಲದಾರರು ಗಂಗಾವತಿ ಇವರುಗಳು ವೇದಿಕೆಯಲ್ಲಿದ್ದರು.

ವೇದಿಕೆಯಲ್ಲಿ ಇವರೆಲ್ಲರಿಗೆ ಗೌರವ ಸನ್ಮಾನ ಸಲ್ಲಿಸಲಾಯಿತು.

ಹಿರಿಯ ಲಿಂಗೈಕ್ಯ ಚೇತನಗಳಿಗೆ ಶರಣ ಶೃದ್ಧಾಂಜಲಿ :

ಹಿಂದೆ 35-40 ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯಾದ್ಯಂತ ಬಸವತತ್ವವನ್ನು ಬೇರೂರಿಸಿದ ಹಿರಿಯ ಲಿಂಗೈಕ್ಯ ಚೇತನಗಳಿಗೆ ಶರಣ ಶೃದ್ಧಾಂಜಲಿ ಅರ್ಪಿಸಲಾಯಿತು.

ಡಾ. ಬಸಯ್ಯ ಸಸಿಮಠ ಪರವಾಗಿ ಗವೀಶ ಸಸಿಮಠ ಅವರಿಗೆ, ಬಸವರಾಜ ಬನ್ನಿಕೊಪ್ಪ ಪರವಾಗಿ ಲಲಿತಮ್ಮ ಬಸವರಾಜ ಬನ್ನಿಕೊಪ್ಪ ಅವರಿಗೆ, ಕೊಟ್ರಪ್ಪಾ ಶೇಡದ ಪರವಾಗಿ ರಾಚಮ್ಮ ಕೊಟ್ಟಪ್ಪ ಶೇಡದ ಅವರಿಗೆ, ನಂದಯ್ಯಸ್ವಾಮಿ ಹಿರೇಮಠ, ಮಂಗಳಾಪೂರ ಹಾಗೂ ಈರಮ್ಮ ನಂದಯ್ಯಸ್ವಾಮಿ ಹಿರೇಮಠ ಅವರ ಪರವಾಗಿ ಮಂಜುನಾಥ ಹಿರೇಮಠ ಅವರಿಗೆ, ಶಾಂತಾಬಾಯಿ ದೇಶಪಾಂಡೆ, ವಣಗೇರಿ ಪರವಾಗಿ ಮಂಜುಳಾ ಬಾಪೂಗೌಡ ಪಾಟೀಲ ಅವರಿಗೆ ಗೌರವಿಸಿ ಲಿಂಗೈಕ್ಯ ಚೇತನಗಳಿಗೆ ನಮನ ಸಲ್ಲಿಸಲಾಯಿತು.

ಬಸವತತ್ವ ಪ್ರಸಾರನಿರತ ಗಣ್ಯರಿಗೆ, ಮಾರ್ಗದರ್ಶಕರಿಗೆ ಮತ್ತು ಕಾರ್ಯಕರ್ತರಿಗೆ ಸನ್ಮಾನ, ಗೌರವಾನ್ವಿತ ಟಣಕನಕಲ್ಲ ಗ್ರಾಮದ ಗುರು-ಹಿರಿಯರು ಮತ್ತು ಮಾರ್ಗದರ್ಶಕರೂ ಆದ ಶಿವಣ್ಣ ಹಂದ್ರಾಳ, ಹುಚ್ಚಪ್ಪ ಭೋವಿ,  ದೇವಪ್ಪ ಸಿದ್ದಪ್ಪ ಹಂದ್ರಾಳ, ಹನಮಗೌಡ ದ್ಯಾಮನಗೌಡ. ಮಾಲಿಪಾಟೀಲ, ಗಿಡ್ಡಪ್ಪ ಮುದ್ಲಾಪೂರ, ಸಿದ್ದಪ್ಪ ಹದ್ದಿನ, ಹನುಮಂತಪ್ಪ ಯಡ್ಡೋಣಿ,  ಶಿವಮೂರ್ತಿಗೌಡ ಸಣ್ಣಗೌಡ್ರು, ಮೈಲಾರಪ್ಪ ಮಜ್ಜಿಗಿ, ಮಂಜುನಾಥ ಚಂದಾಲಿಂಗಪ್ಪ ಹಂದ್ರಾಳ, ಮಂಜುನಾಥ ಉಡಚಪ್ಪ ಹಂದ್ರಾಳ, ಉಡಚಪ್ಪ ಗೊಂದಿಹೊಸಳ್ಳಿ, ಸಣ್ಣೆಪ್ಪಾ ಹದ್ದಿನ, ಗಂಗಪ್ಪ ಮುದ್ಲಾಪೂರ, ಗವಿಸಿದ್ದಪ್ಪ ಬಿಸರಳ್ಳಿ, ಗವಿಸಿದ್ದಪ್ಪ ಸಂಗಪ್ಪ ಬಿಸರಳ್ಳಿ, ವೀರೇಂದ್ರಗೌಡ ದ್ಯಾಮನಗೌಡ ಪಾಟೀಲ, ಮಾರುತಿ ಭೋವಿ, ಮಾರ್ಕಂಡಪ್ಪ ಜಮೆದಾರ, ನಿಂಗಜ್ಜ ಈರಪ್ಪ ಪೋಲಿಸಪಾಟೀಲ, ಈಶಪ್ಪ ಗುಂಡಹನುಮಪ್ಪ ಬಿಸರಳ್ಳಿ, ಗುರುಸಿದ್ದಯ್ಯ ಹಿರೇಮಠ. ವಣಗೇರಿ, ದೇವಪ್ಪ ಕೋಳೂರು ವನಜಭಾವಿ, ಬೀರಪ್ಪ ಬಾಳಪ್ಪ ಹದ್ದಿನ, ಸಂಗಪ್ಪ ಕಲಭಾವಿ, ಫಕೀರಜ್ಜ ಅಡಿವೆಪ್ಪನವರ ಹಟ್ಟಿ, ಶೇಕಪ್ಪ ಲೇಬಗೇರಿ, ಲಲಿತಮ್ಮ. ಗುರಿಕಾರ ಮುರಡಿ, ದುರ್ಗಪ್ಪ ಮಾಸ್ತರ ಬಡಿಗೇರ ಹನಮನಹಳ್ಳಿ, ರಾಜೇಶ್ವರಿ ಕಾತರಕಿ ಮುಂಡರಗಿ, ಈರಮ್ಮ ಕೊಳ್ಳಿ ಕೊಪ್ಪಳ ಇವರುಗಳನ್ನು ಸಹ ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಬಸವೇಶ್ವರ ಭಾವಚಿತ್ರ ಮೆರವಣಿಗೆ

ಸಮಾರಂಭದ ಪೂರ್ವದಲ್ಲಿ ಟಣಕನಕಲ್ಲ ಗ್ರಾಮದಲ್ಲಿ ಬಸವ ಭಾವಚಿತ್ರ, ವಚನಸಾಹಿತ್ಯ ಮತ್ತು ಬಸವ ಪ್ರಜ್ಞಾಜ್ಯೋತಿ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುತ್ತಿ ಸಮಾರಂಭ ಸ್ಥಳಕ್ಕೆ ತಲುಪಿತು.

ಮೆರವಣಿಗೆಯಲ್ಲಿ ಭಜನೆ, ವಚನಗಾಯನ, ಬಸವತತ್ವ ಸಂದೇಶಗಳ ಘೋಷಣೆಗಳು ಮೊಳಗಿದವು. ಪಾಲ್ಗೊಂಡ ಜನರು, ಮಹಿಳೆಯರು ಮತ್ತು ಮಕ್ಕಳು ಬಸವ ಧ್ವಜಗಳನ್ನು, ಬಸವತತ್ವ ಸಂದೇಶಗಳ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಕುಣಿದಾಡಿ ಸಂಭ್ರಮಿಸಿದರು.

ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ‘ಮಾಸಿಕ ಶರಣ ಸಂಗಮ ಕಾರ್ಯಕ್ರಮಗಳಲ್ಲಿ’ಒಟ್ಟು 191 ಮಕ್ಕಳು ವಚನ ಕಂಠಪಾಠ, ವಚನಗಳ ವಿಶ್ಲೇಷಣೆ, ವಚನಗಾಯನ, ವಚನನೃತ್ಯ, ಶರಣರ ಜೀವನ ಚರಿತ್ರೆ ವಾಚನ ಮತ್ತು ಶಿವಯೋಗದ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುವ ಅನುಭಾವದ ಸಂವಾದಗಳಲ್ಲಿ ಪಾಲ್ಗೊಂಡಿದ್ದು ; ಅವರೆಲ್ಲರಿಗೂ ಪ್ರಮಾಣ ಪತ್ರಗಳು, ವಚನಸಾಹಿತ್ಯದ ಅಮೂಲ್ಯ ಗ್ರಂಥಗಳು ಮತ್ತು ನಗದು ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸಲಾಗಿದೆ.

ಬಸವಜ್ಯೋತಿ ಕಾರ್ಯಕ್ರಮ

2026 ನೇ ಶ್ರಾವಣಮಾಸದಲ್ಲಿ ಒಟ್ಟು 40 ಮನೆಯವರು ಸ್ವಯಂಪ್ರೇರಣೆಯಿಂದ ಮುಂದೆ ಬಂದು ತಮ್ಮ ಮನೆಯಲ್ಲಿ ಅರಿವಿನ ಮನೆ ಕಾರ್ಯಕ್ರಮ ನಡೆಸಿಕೊಟ್ಟರು.

4-5 ವರ್ಷಗಳ ಹಿಂದೆ 8-10 ಕುಟುಂಬಗಳು ಬಸವತತ್ವ ಅನುಯಾಯಿಗಳಾಗಿದ್ದರೆ, ಈ ವರ್ಷ ಅಂತಹ ಕುಟುಂಬದವರ ಸಂಖ್ಯೆ 45-50 ರವರೆಗೆ ಹೆಚ್ಚಿದ್ದು ಒಂದು ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ಒಂದು ವರ್ಷದಲ್ಲಿ ಬಸವತತ್ವ ಅನುಯಾಯಿ ಕುಟುಂಬಗಳು ಸ್ವಯಂಪ್ರೇರಣೆಯಿಂದ 100 ಗಡಿ ದಾಟುವ ನಿರೀಕ್ಷೆಯಿದೆ.

ಪ್ರತಿಯೊಬ್ಬರ ಮನೆಯಲ್ಲಿ ವಚನ ಪ್ರಾರ್ಥನೆ, ಸಾಮೂಹಿಕ ಇಷ್ಟಲಿಂಗ ಅರ್ಚನೆ, ಶರಣರ ಜೀವನ ಚರಿತ್ರೆ ವಾಚನ, ಚಿಕ್ಕದಾಗಿ ಅನುಭಾವ ಮತ್ತು ಶಿವಯೋಗದ ಅನುಭವಗಳನ್ನು ಹಂಚಿಕೊಳ್ಳುವ ವಿಧಿವಿಧಾನಗಳು ನಡೆದವು.

ಈ ಎಲ್ಲ ದಿನಗಳ ಕಾರ್ಯಮಗಳ ನೇತೃತ್ವವನ್ನು ಶಿವಬಸಯ್ಯ ವೀರಾಪೂರ ಮತ್ತು ಬಸಮ್ಮ ವೀರಾಪೂರ ದಂಪತಿಗಳು ವಹಿಸಿದ್ದರು.

ಶ್ರಾವಣ ಮಾಸ ಪರ್ಯಂತ ಒಂದೂ ದಿನ ಬಿಡದೇ ಬಸವಜ್ಯೋತಿ ಕಾರ್ಯಕ್ರಮಕ್ಕೆ ಹಾಜರಾದ ಬಸಮ್ಮ ಶೇಖರಪ್ಪ ಬಿಸನಳ್ಳಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಶರಣಮ್ಮ ಕಲ್ಮಂಗಿ, ಮಂಜುಳಾ ಸೋಮನಾಳ, ಪುಷ್ಪಾ ಹಿರೇಮಠ, ಗವಿಸಿದ್ದಪ್ಪ ಪಲ್ಲೇದ, ಈರಮ್ಮ ಕುಕನೂರು, ಬಸವರಾಜ ಪೋಲೀಸಪಾಟೀಲ ಇವರುಗಳು ಶ್ರಾವಣ ಮಾಸದಲ್ಲಿ ಮನೆಗಳಿಗೆ ಬಂದು ಭಾಗವಹಿಸಿದ್ದಕ್ಕೆ ಸನ್ಮಾನಿಸಲಾಯಿತು.

ದಾಸೋಹಿಗಳಿಗೆ ಸನ್ಮಾನ

ಸರ್ವಕಾರ್ಯಕ್ರಮಗಳ ಪ್ರಾಯೋಜಕ ದಾಸೋಹಿಗಳಾದ ಮಂಜುಳಾ ಬಾಪೂಗೌಡ ಪಾಟೀಲ ಮತ್ತು ಸರೋಜಿನಿ ಸಂಗಮೇಶ ಕಲಹಾಳ ಅವರನ್ನು ಪೂಜ್ಯ ಇಲಕಲ್ಲಿನ ಶ್ರೀ ಗುರುಮಹಾಂತ ಮಹಾಸ್ವಾಮಿಗಳವರು ಸನ್ಮಾನಿಸಿ ಆಶೀರ್ವದಿಸಿದರು.

ಕೊಪ್ಪಳದ ಹಿರಿಯ ಬಸವತತ್ವ ಚಿಂತಕರು ಮತ್ತು ಅನುಭಾವಿಗಳಾದ ಬಸನಗೌಡ್ರು ಪಾಟೀಲ ವಣಗೇರಿಯವರು ಸಭಾಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಬಸವದಳ ಉಪಾಧ್ಯಕ್ಷರಾದ ಬಾಪೂಗೌಡ ಪಾಟೀಲ ಅವರು ಸ್ವಾಗತಿಸಿದರು. ಬಸವದಳ ಪ್ರಧಾನ ಕಾರ್ಯದರ್ಶಿ ಶಿವಬಸಯ್ಯ ವೀರಾಪೂರ ವರದಿ ವಾಚನ ಮಾಡಿದರು. ಗೌರವಾಧ್ಯಕ್ಷರಾದ ಡಾ. ಸಂಗಮೇಶ ಕಲಹಾಳ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ಹನುಮೇಶ ಕಲ್ಮಂಗಿ ಅವರು ಕಾರ್ಯಕ್ರಮ ಸಂಚಾಲನೆ ಮಾಡಿದರು.

ಗವಿಸಿದ್ದಪ್ಪ ಪಲ್ಲೇದ ಪ್ರಸಾದ ಸಿದ್ಧತೆಯನ್ನು ಚೆನ್ನಾಗಿ ನಿರ್ವಹಿಸಿದರು. ಶಿವಪ್ಪ ಹೊಸೂರು, ಶಂಕ್ರಪ್ಪ ಬಿಸನಳ್ಳಿ, ಮಲ್ಲಪ್ಪ ಬುರಡಿ, ಶಿವಪ್ಪ ಪೋಲಿಸಪಾಟೀಲ, ನಿಂಗಪ್ಪ ಬಿಸನಳ್ಳಿ, ಉಡಚಪ್ಪ ಬಿಸನಳ್ಳಿ, ಉಡಚಪ್ಪ ಹಂದ್ರಾಳ, ಮಂಜುನಾಥ ಹಂದ್ರಾಳ, ರಾಮಪ್ಪ ಕಟ್ಟಿ, ಮಂಜಪ್ಪ ಹಂದ್ರಾಳ, ಬಸವರಾಜ ಪೋಲೀಸಪಾಟೀಲ, ಮಂಜುಳಾ ಸೋಮನಾಳ, ವೀರಭದ್ರಪ್ಪ ನಂದ್ಯಾಲ ಎಲ್ಲರೂ  ಸ್ವಯಂಪ್ರೇರಿತರಾಗಿ ಸಮಾರಂಭದ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಕೊಪ್ಪಳದ ವಿಶ್ವಗುರು ಬಸವೇಶ್ವರ ಟ್ರಸ್ಟ್, ಕೊಪ್ಪಳದ ಗಾಣದ ಕಣ್ಣಪ್ಪ ಶಿವಾನುಭವ ಸಮಿತಿ, ಕೊಪ್ಪಳ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ, ಕೊಪ್ಪಳ ಜಿಲ್ಲಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕೊಪ್ಪಳ ಶಿವಶರಣೆ ನೀಲಾಂಬಿಕಾತಾಯಿ ಮಹಿಳಾ ಪ್ರತಿಷ್ಠಾನ, ಕೊಪ್ಪಳ ನವಪ್ರಗತಿ ಮಹಿಳಾ ಮಂಡಳ ಮತ್ತು ಟಣಕನಕಲ್ಲ ಗ್ರಾಮದ ಎಲ್ಲ ಗುರು ಹಿರಿಯರು ಇವರುಗಳು ಸಹಕಾರದೊಂದಿಗೆ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.

ಟಣಕನಕಲ್ಲ ಗ್ರಾಮದ ರಾಷ್ಟ್ರೀಯ ಬಸವದಳ ಮತ್ತು ಕೊಪ್ಪಳದ ವಿಶ್ವ ಪರಮೋಚ್ಛ ಪ್ರಜ್ಞಾ ಪ್ರತಿಷ್ಠಾನಗಳ ಪದಾಧಿಕಾರಿಗಳು ಮತ್ತು ಸದಸ್ಯರು ಸರ್ವ ಕಾರ್ಯಕ್ರಮಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
3 Comments
  • ಧನ್ಯವಾದಗಳು. ಶರಣು ಶರಣಾರ್ಥಿಗಳು ಬಸವ ಮಿಡಿಯಾ 💐🌹👍👍🙏🙏🙏🙏

  • ಶ್ಲಾಘನೀಯ ಸಾಧನೆ ಅಣ್ಣಯ್ಯಾ. ಮಕ್ಕಳಲ್ಲಿ ಶಿವಯೋಗದ ಸಾಧನೆ ಅದ್ಬುತ. ಇದು ಮತ್ತೊಂದು ಕಲ್ಯಾಣವಾಗಲಿ.

  • ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ.ಮಕ್ಕಳಲ್ಲಿ ಬ‌ಸವ ತತ್ವವನ್ನು ಸಾರುವ ಮೂಲಕ ಒಳ್ಳೆಯ ಕಾರ್ಯಕ್ರಮವಾಗಿದೆ.

Leave a Reply

Your email address will not be published. Required fields are marked *