ಜೈ ಬಸವೇಶ, ಜೈ ಮುರುಗೇಶ: ಸಾವಿರಾರು ಭಕ್ತರ ಸೆಳೆದ ಉತ್ಸವದ ಮೆರವಣಿಗೆ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ :

ಶರಣ ಸಂಸ್ಕ್ರತಿ ಉತ್ಸವದ ಅಂಗವಾಗಿ ಮೆರವಣಿಗೆಯನ್ನು ಶ್ರೀಮಠದ ಅವರಣದಿಂದ ಹಮ್ಮಿಕೊಳ್ಳಲಾಗಿತ್ತು.

ಶ್ರೀ ಮಠದ ಆದಿಕರ್ತೃ ಮುರಿಗಿ ಶಾಂತವೀರ ಮಹಾಸ್ವಾಮಿಗಳ ಮೂರ್ತಿಯನ್ನು ಹೂವಿನ ಅಲಂಕಾರಗಳಿಂದ ಕಂಗೊಳಿಸುತ್ತಿದ್ದು, ಸಾರೋಟಿನಲ್ಲಿ ಈ ಮೆರವಣೆಗೆಯನ್ನು ಪೂಜ್ಯ ರಾವಂದೂರು ವಿರಕ್ತಮಠದ ಶ್ರೀ ಮೋಕ್ಷಪತಿ ಮಹಾಸ್ವಾಮಿಗಳು, ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು.

ಈ ಸುಸಂದರ್ಭದಲ್ಲಿ ನಾಡಿನ ಹಲವು ಕಡೆಯಿಂದ ಅಗಮಿಸಿದ ವಿವಿಧ ಮಠಾಧೀಶರು ಹಾಗೂ ವಿವಿಧ ಸಮುದಾಯದ ಮಠಾಧೀಶರು ಮತ್ತು ಅನೇಕ ಗಣ್ಯರು ಈ ಮೆರವಣಿಗೆಗೆ ಸಾಕ್ಷೀಕರಿಸಿದ್ದರು. ಹಾಗೆಯೇ ಶ್ರೀ ಮಠದಿಂದ ಬೈಕ್ ರ‍್ಯಾಲಿಯನ್ನು ಅಯೋಜಿಸಲಾಗಿತ್ತು.

ಪೂಜ್ಯ ಡಾ ಬಸವಕುಮಾರ ಸ್ವಾಮಿಗಳು ಚಾಲನೆ ನೀಡುವ ಮೂಲಕ ಈ ರ‍್ಯಾಲಿಯಲ್ಲಿ ಭಾಗವಹಿಸಿದ ಸಾವಿರಾರು ಯುವಕರಿಗೆ ಬಸವಾದಿ ಶರಣರ ಸಂದೇಶವನ್ನು ನೀಡುತ್ತ, ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯು ನಗರದ ಜೆಎಂಐಟಿ ವೃತ್ತ, ಗಾಂಧಿ ವೃತ್ತ, ಅನೆಬಾಗಿಲು ಮುಖಾಂತರ ಚಿಕ್ಕಪೇಟೆ, ಉತ್ಸಾವಾಂಬ ದೇವಸ್ಥಾನ ಮಾರ್ಗವಾಗಿ ಕೋಟೆಯ ದ್ವಾರವನ್ನು ತಲುಪಿತು. ಸಾವಿರಾರು ಭಕ್ತರು ಜೈ ಬಸವೇಶ, ಜೈ ಮುರುಗೇಶ ಘೋಷಣೆ ಕೂಗುತ್ತ ಸಂಭ್ರಮದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಡಾ. ಬಸವಪ್ರಭು ಸ್ವಾಮಿಗಳು, ಮಾದಾರ ಚನ್ನಯ್ಯ ಸ್ವಾಮಿಗಳು, ಶ್ರೀಮಲ್ಲಿಕಾರ್ಜುನ ಸ್ವಾಮಿಗಳು, ಬಸವರಮಾನಂದ ಸ್ವಾಮಿಗಳು, ಬಸವಮಹಾಂತ ಸ್ವಾಮಿಗಳು, ಚನ್ನಗಿರಿಯ ಹಾಲಸ್ವಾಮಿ ವಿರಕ್ತಮಠದ ಡಾ. ಬಸವಜಯಚಂದ್ರ ಮಹಾಸ್ವಾಮಿಗಳು, ಚಿದರಳ್ಳಿಯ ಶಿದ್ದರಹಳ್ಳಿ ಪಾರಮಾರ್ಥ ಗವಿಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಸಿರಸಂಗಿಯ ಮುರುಘಾಮಠದ ಬಸವಮಹಾಂತ ಮಹಾಸ್ವಾಮಿಗಳು, ಶಿಕಾರಿಪುರದ ಶ್ರೀ ಮುರುಘಾಮಠದ ಚನ್ನಬಸವ ಮಹಾಸ್ವಾಮಿಗಳು, ದೊಡ್ಡಮೇಟಿಕುರ್ಕಿಯ ಶಶಿಶೇಖರ ಸಿದ್ದಬಸವ ಮಹಾಸ್ವಾಮಿಗಳು, ನಿಪ್ಪಾಣಿಯ ಮುರುಘೇಂದ್ರ ಮಠದ ಬಸವ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ರಾಣೆಬೆನ್ನೂರಿನ ವಿರಕ್ತಮಠದ ಗುರುಬಸವ ಮಹಾಸ್ವಾಮಿಗಳು, ಹೆಗ್ಗುಂದದ ವನಕಲ್ಲು ಮಲ್ಲೇಶ್ವರ ಮಠದ ಬಸವರಮಾನಂದ ಮಹಾಸ್ವಾಮಿಗಳು, ಕೊಡ್ಲಿಪೇಟೆಯ ಕಲ್ಲಳ್ಳಿ ಮಠದ ರುದ್ರಮುನಿ ಮಹಾಸ್ವಾಮಿಗಳು, ಕವಲತ್ತು ಬಸವ ಕೇಂದ್ರದ ಮುಕ್ತಾಯಕ್ಕನವರು, ಹೂವಿನಮಡುವಿನ ಮುರುಘಾಮಠದ ಹಾಲಮಹಾಸ್ವಾಮಿಗಳು, ನರಸಿಂಹರಾಜಪುರದ ಬಸವಯೋಗಪ್ರಭು ಮಹಾಸ್ವಾಮಿಗಳು, ತಿಳುವಳ್ಳಿ ಕಲ್ಮಠದ ಬಸವ ನಿರಂಜನ ಮಹಾಸ್ವಾಮಿಗಳು, ಕಮಡೊಳ್ಳಿಯ ಗುರುಲೋಚನೇಶ್ವರ ವಿರಕ್ತಮಠದ ರಾಚೋಟೇಶ್ವರ ದೇವರು, ಅಗಡಿಯ ಪ್ರಭುಸ್ವಾಮಿ ಮಠದ ಗುರುಸಿದ್ದ ಮಹಾಸ್ವಾಮಿಗಳು, ಬ್ಯಾಡಗಿ ಮುಪ್ಪಿನ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು, ಅಗಡಿ ಅಕ್ಕಿಮಠದ ಗುರುಲಿಂಗ ಮಹಾಸ್ವಾಮಿಗಳು, ಗೋಕಾಕಿನ ಶೂನ್ಯ ಸಂಪಾದನಾ ಮಠದ ಮುರುಘಾರಾಜೇಂದ್ರ ಮಹಾಸ್ವಾಮಿಗಳು, ಸೋಮಾಪುರ ಸಿದ್ದಾರೂಡ ಮಠದ ಜಯದೇವ ಮಹಾಸ್ವಾಮಿಗಳು, ಕಲಬುರಗಿಯ ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ, ರಾಮದುರ್ಗ ತಾಲೂಕಿನ ಹೊಸಕೇರಿಯ ನೀಲಲೋಚನ ತಾಯಿ, ಬೇಲೂರಿನ ಗುರುಬಸವೇಶ್ವರ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು, ಮಹಾರಾಷ್ಟ್ರದ ಗಡಿಂಗ್ಲಜ್ ಜಡಿಯ ಸಿದ್ದೇಶ್ವರ ಆಶ್ರಮದ ಮಹಾಂತ ಜಡಿಸಿದ್ದೇಶ್ವರ ಮಹಾಸ್ವಾಮಿಗಳು, ಚಿತ್ರದುರ್ಗದ ಗುರುಕುಲ ಮುರುಘಾಮಠದ ಬಸವ ಮುರುಘೇಂದ್ರ ಮಹಾಸ್ವಾಮಿಗಳು, ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಮಹಾಸ್ವಾಮಿಗಳು, ಬಸವಕಲ್ಯಾಣ ಅನುಭವ ಮಂಟಪದ ಸುಗುಣಾತಾಯಿ, ಕನ್ನಮಂಗಲದ ಅಕ್ಕಮಹಾದೇವಿ ಆಶ್ರಮದ ಅಕ್ಕ ನಾಗಲಾಂಬಿಕಾ ತಾಯಿ, ಹೊಸದುರ್ಗ ಬಸವಾಶ್ರಮದ ಅಕ್ಕಮಹಾದೇವಿ ತಾಯಿ, ಐರಾಣಿ ಮನೆಮಠದ ಗಜದಂಡ ಮಹಾಸ್ವಾಮಿಗಳು, ಹಿರೇಹೊನ್ನಿಹಳ್ಳಿ ಬಸವ ಮಹಾಮನೆಯ ಚನ್ನಬಸವ ಮಹಾಸ್ವಾಮಿಗಳು, ಆಡಳಿತ ಮಂಡಳಿ ಸದಸ್ಯರಾದ ಎಸ್.ಎನ್. ಚಂದ್ರಶೇಖರ ಹಾಗೂ ಇತರ ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *