ರವಿ ಹಂಜ್, ವಿಶ್ವೇಶ್ವರ ಭಟ್ಟ ವಿರುದ್ಧ ಇಂದು ಮೂರು ಸಚಿವರ ಸುದ್ದಿ ಗೋಷ್ಠಿ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಣ್ಣನವರ ಅವಹೇಳನ ಮಾಡಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಬೆಂಗಳೂರು

ಸಾಂಸ್ಕೃತಿಕ ನಾಯಕ ಬಸವಣ್ಣನವರ ಬಗ್ಗೆ ಅಂಕಣಕಾರ ರವಿ ಹಂಜ್ ವಿಶ್ವೇಶ್ವರ ಭಟ್ಟರ ಸಾರಥ್ಯದ ವಿಶ್ವವಾಣಿಯಲ್ಲಿ ನೀಡಿರುವ ಅವಹೇಳನಕಾರಿ ಹೇಳಿಕೆಗಳನ್ನು ಪ್ರತಿಭಟಿಸಲು ರಾಜ್ಯವಿಡೀ ಬಸವಾಭಿಮಾನಿಗಳು ಸಜ್ಜಾಗುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ರಾಜ್ಯದ ಮೂರು ಮಂತ್ರಿಗಳ ಹಾಗೂ ಒಬ್ಬರು ಪ್ರಭಾವಿ ಶಾಸಕರ ನೇತೃತ್ವದಲ್ಲಿ ಇಂದು ನಗರದಲ್ಲಿ ಮಹತ್ವದ ಸುದ್ದಿ ಗೋಷ್ಠಿ ನಡೆಯಲಿದೆ.

ಬೆಳಿಗ್ಗೆ 11:00 ಗಂಟೆಗೆ ಬಸವ ಸಮಿತಿಯ ಸಂಗಮ ಹಾಲ್ ನಲ್ಲಿ ಸಚಿವರಾದ ಎಂ.ಬಿ. ಪಾಟೀಲ, ಬಸವರಾಜ ರಾಯರೆಡ್ಡಿ, ಶರಣ ಪ್ರಕಾಶ ಪಾಟೀಲರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಅವರ ಜೊತೆ ಆಳಂದ ಶಾಸಕ ಬಿ.ಆರ್. ಪಾಟೀಲ, ಬಸವ ಸಮಿತಿಯ ಅರವಿಂದ ಜತ್ತಿ, ಮಾಜಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ, ಉಪಮೇಯರ್ ಸಿ ಎಸ್ ಪುಟ್ಟರಾಜು, ಚಿಂತಕ ಡಾ. ಜೆ.ಎಸ್. ಪಾಟೀಲರು ಸುದ್ದಿ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

ಆಯೋಜಕರು ಕಳಿಸಿರುವ ಪ್ರಕಟಣೆಯಲ್ಲಿ “ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಮಹಾತ್ಮ ಬಸವಣ್ಣನವರ ಕುರಿತು ಪುಸ್ತಕ ಪ್ರಕಟಿಸಿ, ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದು, ವಿಡಿಯೋಗಳನ್ನು ಪ್ರಸಾರ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಬಸವಣ್ಣನವರ ವ್ಯಕ್ತಿತ್ವ, ಚಿಂತನೆ, ವಚನ ಸಾಹಿತ್ಯ ಹಾಗೂ ಸಮಾನತೆಯ ತತ್ವಗಳಿಗೆ ಧಕ್ಕೆ ತರುವಂತಹ ವಿಚಾರಗಳ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸುವುದರ ಜೊತೆಗೆ, ಇಂತಹ ಕೃತ್ಯಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸುವ ಉದ್ದೇಶದಿಂದ ಕರ್ನಾಟಕದ ಲಿಂಗಾಯತ ಸಮುದಾಯದ ಪ್ರಮುಖರು ಹಾಗೂ ಬಸವಪರ ಚಿಂತಕರು ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ,” ಎಂದು ತಿಳಿಸಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
6 Comments
  • ಬಸವಣ್ಣನವರಿಗೆ ಅವಮಾನ ಮಾಡಿರುವ ವಿಚಾರವಾಗಿ ಶಾಸಕರುಗಳು ಸಿಡಿದೆದ್ದಿರುವುದು ಬಹಳ ಸಂತೋಷ. ಇವರಿಗೆ ಧನ್ಯವಾದಗಳು 🙏.
    ಕನ್ನೇರಿ, ಭಟ್ಟ, ಹಂಜಿ ಇವರಷ್ಟೇ ಅಲ್ಲದೆ ಯಾರೇ ಮಾತನಾಡಿದರು ಈ ರೀತಿ ಪ್ರತಿಭಟನೆ ಆಗಬೇಕಿದೆ. ಹಾಗೂ ಇಂತವರಿಗೆ ನಮ್ಮೊಳಗೇ ಇದ್ದು ಸಹಕಾರ ನೀಡುವವರಿಗೂ ಬುದ್ದಿಕಲಿಸಬೇಕಿದೆ

  • ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ ಅದಾಗಿಯೂ ಇಂತಹ ಹೇಳಿಕೆಗಳು ಬಸವಣ್ಣನವರಿಗೆ ಕರ್ನಾಟಕಕ್ಕೆ ಮಾಡುವ ಅಪಮಾನ ಎಂದೇ ಭಾವಿಸಿ ಸರ್ಕಾರ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಿ

  • ಹುಂಜ ನ ವಿರುದ್ಧ ಸಿಡಿದೆದ್ದಿರುವ ಎಲ್ಲಾ ರಾಜಕೀಯ ನಾಯಕರಿಗೆ ಮತ್ತು ಬಸವ ಅನುಯಾಯಿಗಳಿಗೆ ಶರಣು ಶರಣಾರ್ಥಿಗಳು.. ಅಂಥವರಿಗೆ ಕ್ಷಮೆಯೇ ಇಲ್ಲ 🙏🙏

  • ವಿಶ್ವಮಾನವ ಬಸವಣ್ಣನವರ ಬಗ್ಗೆ ಅವಹೇಳನ ಮಾತನಾಡಿದ ರವಿ ಹಂಜ ಮತ್ತು ವಿಶ್ವೇಶ್ವರ ಭಟ್ ವಿರುದ್ಧ ಮಾತನಾಡಲು ಬಯಸಿರವ ಮಾನ್ಯ ಮಂತ್ರಿಗಳಾದ ಶರಣ ಶರಣಪ್ರಕಾಶ ಪಾಟೀಲ, ಶರಣ ಎಂ ಬಿ ಪಾಟೀಲ, ಶರಣು ಬಸವರಾಜ ರಾಯರೆಡ್ಡಿ ಹಾಗು ಶರಣು ಅಲ್ಲಮಪ್ರಭು ಪಾಟೀಲ ಅವರಿಗೆ ಭಕ್ತಿ ಪೂರ್ವಕ ಶರಣು ಶರಣಾರ್ಥಿ ಜೈಬಸವ

  • ಯಾವುದೋ ಕೇರಿ ಹುಂಜ ತಮ್ಮ ಏರಿಯಾದಲ್ಲಿ ಅಷ್ಟೇ ಕೂಗಾಡಬೇಕಿತ್ತು ಅದು ಬಿಟ್ಟು ರಾಜ್ಯದ ತುಂಬೆಲ್ಲ ಕೂಗಾಡ್ತಾ ಇದೆ ಆದುದರಿಂದ ಕೂಡಲೇ ಬಸವ ಲಿಂಗಾಯತ ಧರ್ಮದ ಎಲ್ಲ ಸಮುದಾಯದವರು ಒಟ್ಟಾಗಿ ಹೋರಾಟ ಮಾಡಬೇಕು ಅದಕ್ಕೆ ಬುದ್ಧಿ ಕಲಿಸಬೇಕು. ಓಂ ಶ್ರೀ ಗುರು ಬಸವ ಲಿಂಗಾಯ ನಮಃ

Leave a Reply

Your email address will not be published. Required fields are marked *