ರವಿ ಹಂಜ್ ಫೇಸ್ಬುಕ್ ಖಾತೆ ನಿಷೇಧಿಸಿದ ಕೇಂದ್ರ ಸರಕಾರ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಬಸವ ನಿಂದನೆ ಮಾಡಿ ಬಂಧನದ ಭೀತಿಯಿಂದ ರಾತ್ರೋರಾತ್ರಿ ಭಾರತ ಬಿಟ್ಟು ಚಿಕಾಗೋ ನಗರಕ್ಕೆ ಹಾರಿದ ರವಿ ಹಂಜ್ ಈಗ ತಮ್ಮ ಮುಖ್ಯ ಫೇಸ್ಬುಕ್ ಖಾತೆಯನ್ನೂ ಕಳೆದುಕೊಂಡಿದ್ದಾರೆ.

ಅವರು ಬಳಸುತ್ತಿದ್ದ ಎರಡೂ ಫೇಸ್ಬುಕ್ ಖಾತೆಗಳು ಈಗ ಲಭ್ಯವಿಲ್ಲ. ಒಂದನ್ನು ಕೇಂದ್ರ ಸರಕಾರ ನಿಷೇದಿಸಿದ್ದರೆ ಇನ್ನೊಂದನ್ನು ಅವರೇ ನಿರ್ಬಂಧಿಸಿದ್ದಾರೆ.

ಭಾರತದಿಂದ ಹಠಾತ್ ನಿರ್ಗಮನ

ಭಾರತದಲ್ಲಿದ್ದ ರವಿ ಹಂಜ್ ಸೋಮವಾರ ಒಂದು ವಿಡಿಯೋ ಮಾಡಿ ತಮ್ಮ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಅವರಿಗೆ ಕ್ಷಮೆ ಕೇಳಿದ್ದರು.

ಅದೇ ವಿಡಿಯೋದಲ್ಲಿ ತಾವು ಬರೆದಿರುವ ವಿವಾದಿತ ಪುಸ್ತಕ ‘ಬಸವ ಮಂಟಪ’ವನ್ನು ಬೇರೆ ಬೇರೆ ಊರುಗಳಲ್ಲಿ ಬಿಡುಗಡೆ ಮಾಡುಲಾಗುವುದೆಂದು ವಿಶ್ವಾಸದಿಂದ ಹೇಳಿದ್ದರು.

ಆದರೆ ಬಸವ ಅಭಿಮಾನಿಗಳ ಆಕ್ರೋಶ ಕಾವೇರಿ ಪೊಲೀಸ್ ದೂರುಗಳು ಬೀಳುತ್ತಿದ್ದಂತೆಯೇ, ಬಂಧನದ ಭೀತಿಯಿಂದ ಮರು ದಿನವೇ ಭಾರತ ಖಾಲಿ ಮಾಡಿದ್ದರು.

ಅವರು ಆ ಕಡೆ ಹೊರಟರೆ, ಅವರ ಮಾರ್ಗದರ್ಶಕ ವಿಶ್ವೇಶ್ವರ ಭಟ್ಟರು ಈ ಕಡೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಟ್ಟಿದ್ದಾರೆ.

ಫೇಸ್ಬುಕ್ ನಿಂದಲೂ ಹಠಾತ್ ನಿರ್ಗಮನ

ಒಂದು ವರ್ಷದಿಂದ ಫೇಸ್ಬುಕ್ ನಲ್ಲಿ ನಿರಂತರವಾಗಿ ಬಸವಾಭಿಮಾನಿಗಳನ್ನು ಪ್ರಚೋದಿಸುತ್ತಿದ್ದ ರವಿ ಹಂಜ್ ಖಾತೆಯನ್ನು ಬುಧವಾರ ಕೇಂದ್ರ ಸರಕಾರ ಭಾರತದಿಂದ ನಿಷೇದಿಸಿತು. (https://www.facebook.com/ravihanj/)

ನೆನ್ನೆ ಸಂಜೆ ಈ ಖಾತೆಯನ್ನು ನೋಡಲು ಪ್ರಯತ್ನಿಸಿದ ಸ್ನೇಹಿತರೊಬ್ಬರಿಗೆ ಈ ಸಂದೇಶ ಸಿಕ್ಕಿತು:

‘ಸರಕಾರದ ಮನವಿ ಮೇರೆಗೆ ಈ ಖಾತೆಯನ್ನು ಭಾರತದಲ್ಲಿ ನಿಷೇದಿಸಲಾಗಿದೆ,’ ಎಂಬುದು ಇದರ ಅರ್ಥ.

ಭಾರತದಲ್ಲಿ ಫೇಸ್ಬುಕ್ ಖಾತೆಯನ್ನು ನಿಷೇಧಿಸುವ ಅಧಿಕಾರವಿರುವುದು ಕೇಂದ್ರಕ್ಕೆ. ಲಿಂಗಾಯತರ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ಘಾಸಿಯನ್ನುಂಟು ಮಾಡುತ್ತಿದ್ದ ಈ ಖಾತೆಯನ್ನು ನಿಷೇಧಿಸುವ ನಿರ್ಣಯ ಕೇಂದ್ರ ಸರಕಾರವೇ ತೆಗೆದುಕೊಂಡಿದೆ.

ಈ ನಿರ್ಣಯ ತೆಗೆದುಕೊಂಡ ಸಮಯವನ್ನೂ ಗಮನಿಸಬೇಕು.

ಬುಧವಾರ ಬೆಳಗ್ಗೆ ಎಂ ಬಿ ಪಾಟೀಲರ ಸುದ್ದಿ ಗೋಷ್ಠಿಯ ನಂತರ ಬಸವ ಸಮಿತಿಯವರು ಪೊಲೀಸ್ ದೂರು ನೀಡಿದರು.

ಅದಾದ ನಂತರ ತಕ್ಷಣವೇ ಹಂಜಿನ ಖಾತೆಯನ್ನು ಯಾರ ಒತ್ತಡಕ್ಕೂ ಕಾಯದೆ ಕೇಂದ್ರ ತಾನಾಗಿಯೇ ನಿಷೇದಿಸಿತು.

ಅಂದರೆ ಲಿಂಗಾಯತರ ಆಕ್ರೋಶ ಯಾವ ಮಟ್ಟದಲ್ಲಿ ಸರಕಾರಕ್ಕೆ ಬಿಸಿ ಮುಟ್ಟಿಸಿದೆ ಎನ್ನುವುದನ್ನು ಗಮನಿಸಬೇಕು.

ನೆನ್ನೆ ರಾತ್ರಿ ಸಚಿವ ಈಶ್ವರ ಖಂಡ್ರೆಯವರು ಹಂಜಿನ ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳ ಬಗ್ಗೆ ಕೇಂದ್ರ ಸರಕಾರಕ್ಕೆ ಬರೆಯುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದರು.

ಅದಕ್ಕಿಂತ ಮುನ್ನವೇ ತಾನಾಗಿಯೇ ಕೇಂದ್ರ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಆದರೆ ನೆನ್ನೆ ಈ ಖಾತೆ ನಿಷೇದವಾಗಿದ್ದು ಭಾರತದಲ್ಲಿ ಮಾತ್ರ. ಅಂದರೆ ಭಾರತದ ಆಚೆಯ ಓದುಗರಿಗೆ ಅದಿನ್ನೂ ಲಭ್ಯವಿತ್ತು.

ಇಂದು ಅದು ಪೂರ್ತಿ ಬಂದ್ ಆಗಿದೆ. ಈಗ ನೀವು ಅದನ್ನು ಬೇರೆ ದೇಶದಿಂದಲೂ ನೋಡಿದರೆ ಈ ಸಂದೇಶ ಕಾಣುತ್ತದೆ.

ಅಂದರೆ ಬೇರೆ ದೇಶಗಳಲ್ಲಿ ಇರುವವರಿಗೂ ಈ ಖಾತೆ ಲಭ್ಯವಿಲ್ಲ. ಸರಕಾರದ ನಿಷೇಧದ ನಂತರ ಈ ಖಾತೆಯನ್ನು ರವಿ ಹಂಜ್ ಅವರೇ ಡಿಲೀಟ್ ಮಾಡಿರುವ ಸಾಧ್ಯತೆ ಇದೆ ಎಂದು ಫೇಸ್ಬುಕ್ ಹೇಳುತ್ತಿದೆ.

ಹಂಜ್ ಇನ್ನೊಂದು ಸಣ್ಣ ಫೇಸ್ಬುಕ್ ಖಾತೆಯನ್ನು ನಡೆಸುತ್ತಾರೆ. ಅದನ್ನು ನೆನ್ನೆಯಿಂದ ಲಾಕ್ ಮಾಡಿಕೊಂಡಿದ್ದಾರೆ.

https://www.facebook.com/p/Ravi-Hanj-100079548720542

ಅದೀಗ ಅವರ ಒಪ್ಪಿಗೆಯ ಸ್ನೇಹಿತರಿಗೆ ಮಾತ್ರ ಲಭ್ಯವಿದೆ. ಸಾರ್ವಜನಿಕರಿಗೆ ಅಲ್ಲಿರುವದನ್ನು ನೋಡಲು ಸಾಧ್ಯವಿಲ್ಲ.

ಸಾಮಾನ್ಯವಾಗಿ ಯಾವುದಾದರು ಭೀತಿಯಲ್ಲಿರುವವರು ಈ ರೀತಿ ಖಾತೆಯನ್ನು ಸಾರ್ವಜನಿಕರಿಗೆ ನಿರ್ಬಂಧಿಸುತ್ತಾರೆ.

ಆದರೆ ಬಸವಣ್ಣನವರನ್ನು ನಿಂದಿಸಿರುವ ಅವರ ಸಂದರ್ಶನದ ವಿಡಿಯೋ ವಿಶ್ವವಾಣಿ ಯೂಟ್ಯೂಬ್ ಖಾತೆಯಲ್ಲಿ ಹಾಗೆಯೇ ಇದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
4 Comments
  • ಇನ್ನೋಮ್ಮೆ ಭಾರತಕ್ಕೆ ಬರದಂತೆ ಆತನ ನಿಷೇಧಸ ಬೇಕು.ಜೈಬಸವ.

  • ಆತ ಬಸವಣ್ಣನವರ ಕುರಿತು ಮಾತನಾಡಿರುವ ಎಲ್ಲಾ ವಿಡಿಯೋಗಳನ್ನು ಡಿಲೀಟ್ ಮಾಡಬೇಕು

  • ವಿಶ್ವವಾಣಿ ಪತ್ರಿಕೆ ಎಲ್ಲಾ ಬಸವಬಿಮನಿಗಳು ಬಂದ ಮಾಡಿ

  • Facebook account ban ಮಾಡಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು

Leave a Reply

Your email address will not be published. Required fields are marked *