ಹೊಸಪೇಟೆ: ಹಂಜ್, ಭಟ್ಟರ ವಿರುದ್ಧ ಸರ್ವ ಸಂಘಟನೆಗಳ ಉಗ್ರ ಪ್ರತಿಭಟನೆ

‘ಬಸವೇಶ್ವರರಿಗೆ ಮಾಡಿದ ಅವಹೇಳನ ಸಹಿಸಲು ಸಾಧ್ಯವಿಲ್ಲ‘

ಹೊಸಪೇಟೆ (ವಿಜಯನಗರ) :

ರವಿ ಹಂಜ್, ವಿಶ್ವೇಶ್ವರ ಭಟ್ಟರ ವಿರುದ್ಧ ವಿವಿಧ ಸಮುದಾಯ, ಸಂಘಟನೆ, ಪಕ್ಷಗಳ ಒಗ್ಗಟ್ಟಿನ ಪ್ರತಿಭಟನೆ ಬುಧವಾರ ನಡೆಯಿತು.

ಜಾಗತಿಕ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಮಾಜದ ಜತೆಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘದ ವಿವಿಧ ಬಣಗಳು, ಅಂಬೇಡ್ಕ‌ರ್ ಸಂಘ, ಮಾನವ ಬಂಧುತ್ವ ವೇದಿಕೆ, ಕಾಂಗ್ರೆಸ್, ಬಿಜೆಪಿಯ ಹಲವು ನಾಯಕರು ಪಾಲ್ಗೊಳ್ಳುವ ಮೂಲಕ ವಿಶ್ವಗುರು ಬಸವೇಶ್ವರರಿಗೆ ಮಾಡಿದಂತಹ ಅವಹೇಳನವನ್ನು ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಒಕ್ಕೊರಲಿನಿಂದ ಸಾರಿದರು.

ಬಸವೇಶ್ವರ ವೃತ್ತದಲ್ಲಿ ಅಶ್ವಾರೂಢ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಪ್ರತಿಭಟನಾ ಜಾಥಾ ಆರಂಭವಾಯಿತು. ಅಂಬೇಡ್ಕರ್ ವೃತ್ತ ತಲುಪಿ ಅಲ್ಲಿಯೇ ಪ್ರತಿಭಟನಾ ಸಭೆ ನಡೆದು, ಕೀಳು ಮನಸ್ಸಿನ ಲೇಖಕ ರವಿ ಹಂಜ್ ಮತ್ತು ಪ್ರಕಾಶಕ ವಿಶ್ವೇಶ್ವರ ಭಟ್ಟರ ವಿರುದ್ಧ ಘೋಷಣೆ ಕೂಗಲಾಯಿತು.
ಸಂವಿಧಾನದ ಪೀಠಿಕೆ ಓದುವ ಮೂಲಕ ಪ್ರತಿಭಟನಾ ಸಭೆಗೆ ಚಾಲನೆ ನೀಡಲಾಯಿತು.

ಚಾಚಿಗೊಂಡನಹಳ್ಳಿ ತೊಂಟದಾರ್ಯ ಶಾಖಾಮಠದ ಶಿವಮಹಾಂತ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನವನ್ನು ಯಾರೂ ಮಾಡಬಾರದು ಎಂದರು. ಕಾರ್ಮಿಕ ಮುಖಂಡ ಎಸ್.ವೈ. ಗುರುಶಾಂತ ಮಾತನಾಡಿ, ಈ ಕೃತಿ ರಚನೆಯ ಹಿಂದೆ ದೊಡ್ಡ ಷಡ್ಯಂತ್ರ ಇದ್ದಂತಿದೆ, ಸಮಾಜದಲ್ಲಿ ಸೌಹಾರ್ದ ಭಾವನೆಗೆ ಧಕ್ಕೆ ತರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಅಗತ್ಯ ಎಂದರು.

ವಿವಿಧ ಸಂಘಟನೆಗಳ ಮುಖಂಡರಾದ ಗೊಗ್ಗ ಚನ್ನಬಸವರಾಜ, ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷರಾದ ಎಸ್ ಮಾವಿನಹಳ್ಳಿ ಬಸವರಾಜ, ಸಹಕಾರ್ಯದರ್ಶಿ ಅಕ್ಕಿ ಮಲ್ಲಿಕಾಜು೯ನ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಜಾಲಿ ಬಸವರಾಜ, ರೇವಣ್ಣ ಸಿದ್ದಪ್ಪ, ಜಾಲಿ ಪ್ರಕಾಶ, ಮೃತ್ಯುಂಜಯ ರುಮಾಲೆ, ಬಿ.ಕೆ.ಜಿ. ನಾಗನಗೌಡ, ಶರಣು ಸ್ವಾಮಿ, ಕೆ. ಕೊಟ್ರೇಶ, ಪೂಜಾರಿ ದುರುಗಪ್ಪ, ಸಂದೀಪ್ సింಗ್, ನಿಂಬಗಲ್ ರಾಮಕೃಷ್ಣ, ಹುಡಾ ಅಧ್ಯಕ್ಷ ಎಚ್‌.ಎನ್‌. ಎಫ್. ಮೊಹಮ್ಮದ್ ಇಮಾಂ ನಿಯಾಜಿ, ಸಾಹಿತಿ ಪೀರಬಾಷಾ, ಬಣ್ಣದಮನೆ ಸೋಮಶೇಖರ, ವಿನಾಯಕ ಶೆಟ್ಟರ, ಸಿ.ಆ‌ರ್. ಭರತಕುಮಾರ, ಸ್ಲಂ ವೇಕಟೇಶ, ಕಿಚಡಿ ಕೊಟ್ರೇಶ್, ಕೋರಿಶೆಟ್ಟಿ ಲಿಂಗಪ್ಪ, ಖಾಜಾ ಹುಸೇನ್ ನಿಯಾಜಿ, ಪಿ.ವಿ. ವೇಂಕಟೇಶ, ಗುಜ್ಜಲ ಗಣೇಶ, ಮಂಜುನಾಥ, ಸಣ್ಣಮಾರಣ್ಣ, ನಂದೀಶ ದಂಡೆ, ಜೆ. ಶಿವಕುಮಾರ, ಆರ್. ಭಾಸ್ಕರರೆಡ್ಡಿ, ಟಿ.ನಾಗರಾಜ್, ಬಸವ ಬಳಗದ ಡಾ. ಸುಮಂಗಳಮ್ಮ, ಮೀನಾಕ್ಷಿ ಜಂಗಮಣಿ, ಸೌಭಾಗ್ಯ ಲಕ್ಷ್ಮೀ, ಪಾವನಿ ಮೇಟ್ರಿ, ಅನ್ನಪೂರ್ಣಮ್ಮ, ಪಿ. ಮಂಜುಳ, ವಿಜಯಲಕ್ಷ್ಮಿ, ಭಾರತಿ, ಮಂಜುಳಾ ಲಿಂಗರಾಜ, ಮಮತ ನಾಗರಾಜ ಸೇರಿದಂತೆ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
Leave a comment

Leave a Reply

Your email address will not be published. Required fields are marked *