ಕಲಬುರಗಿ:
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕಲಬುರಗಿ ಜಿಲ್ಲಾ ಘಟಕ ಹಾಗೂ ಕದಳಿ ಮಹಿಳಾ ವೇದಿಕೆಯ ವತಿಯಿಂದ ಅಕ್ಟೋಬರ್ 26, 27ರಂದು ಹಮ್ಮಿಕೊಂಡ ರಾಜ್ಯಮಟ್ಟದ 12ನೇ ಕದಳಿ ಮಹಿಳಾ ಸಮಾವೇಶದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಚಿಂತಕಿ ಡಾ. ಮೀನಾಕ್ಷಿ ಬಾಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಿರಿಯ ಉಪಾಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ, ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ವಡ್ದನಕೇರಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಡಾ. ಶಾಂತಾ ಅಷ್ಟಗಿ, ಸಮ್ಮೇಳನ ಸಮಾವೇಶದ ಖಜಾಂಚಿಗಳಾದ ಬಸವರಾಜ್ ಮರಬದ್ ಸಮಾವೇಶದ ಉಪಾಧ್ಯಕ್ಷರಾದ ಡಾ. ಗಣಪತಿ ಶಿಂದೆ, ಕಾರ್ಯದರ್ಶಿಗಳಾದ ಶಾಂತಲಿಂಗ ಪಾಟೀಲ ಕೋಳಕೂರ, ಸಂಚಾಲಕರಾದ ಡಾ. ಶರಣಬಸಪ್ಪ ವಡ್ಡನಕೇರಿ ಚಿಂತಕಿ ಕೆ. ನೀಲಾ ಹಾಗೂ ಕದಳಿ ಮಹಿಳಾ ವೇದಿಕೆಯ ಡಾ. ಶಿವಲೀಲಾ ಚಟ್ನಳ್ಳಿ, ಡಾ. ಗೀತಾ ಆರ್ ಮಾಸಿಮಾಡೆ, ಬಸವರಾಜ ಜನಕಟ್ಟಿ, ಸಾವಿತ್ರಿ ಪಟ್ಟಣ ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.