ಬೈಲಹೊಂಗಲ:
ವ್ಯೂಮಕಾಯ ಅಲ್ಲಮಪ್ರಭುಗಳು ನಾಡಿನ ತುಂಬಾ ಸಂಚರಿಸಿ ಅನೇಕ ಸಾಧಕರ ಅಹಂಕಾರ ನಿರಸನಗೊಳಿಸಿದ ಪ್ರಸಂಗಗಳಲ್ಲಿ ಅವರ ಆರೋಗಣೆ ಪ್ರಮುಖವಾದದ್ದು.
ಬಹಿರಂಗದ ಪ್ರಸಾದಕ್ಕಿಂತ ಅಂಗತ್ರಯಗಳನ್ನು ಲಿಂಗತ್ರಯ ಮಾಡಿಕೊಂಡು ತನು ಮನ ಧನವೇ ಮಹಾ ಪ್ರಸಾದವಾಗಿ ಪರಮಾತ್ಮನಿಗೆ ಅರ್ಪಿತವಾದಾಗ ಸಾಧಕನ ಸಾಧನೆ ಸಾರ್ಥಕ ಪಡೆಯುತ್ತದೆ, ಅಹಂಕಾರ ನಿರಸನವಾಗುತ್ತದೆ ಎಂದು ಅಂತೂರಬೆಂತೂರು ಬೂದಿಸ್ವಾಮಿ ಮಠದ ಪೂಜ್ಯ ಕುಮಾರಸ್ವಾಮಿಗಳು ಹೇಳಿದರು.
ಪತ್ರಿ ಬಸವೇಶ್ವರ ಅನುಭವ ಮಂಟಪದ ಬಸವ ಜಯಂತಿ, ಜಾತ್ರಾ ಮಹೋತ್ಸವದ ಎರಡನೇ ದಿನದ ಗೋಷ್ಠಿಯಲ್ಲಿ ಅನುಭಾವ ನೀಡಿದರು.
ನ್ಯಾಯಮಾದಿಗಳ ಸಂಘದ ಉಪಾಧ್ಯಕ್ಷ ಅದರ್ಶಪ್ಪ ಸಿದ್ರಾಮಣಿ ಕಾರ್ಯಕ್ರಮ ಉದ್ಘಾಟಿಸಿದರು. ಅಶೋಕ ಸಾಲಿ, ಶ್ರೀಯಾ ಪಾಟೀಲ ವಚನ ಪಠಿಸಿ ಚಿಂತನೆಗೈದರು. ನೇಗಿಲಯೋಗಿ ಪರಿಶ್ರಮ ರೈತ ಸಂಘ, ಬೆಂಗಳೂರು ರಾಜ್ಯಾಧ್ಯಕ್ಷ ಶಂಕರ ಬೋಳನ್ನವರ ಅವರನ್ನು ಸನ್ಮಾನಿಸಲಾಯಿತು. ಸುವರ್ಣ ಬಿಜಗುಪ್ಪಿ ಅಧ್ಯಕ್ಷತೆ ವಹಿಸಿದ್ದರು. ‘

ಬೆಳಿಗ್ಗೆ ಡಾ. ಅರವಿಂದ ಜಕನೂರ, ಡಾ. ಮಂಜುನಾಥ ಮುದುಕನಗೌಡರ, ಡಾ. ಅಶೋಕ ದೊಡವಾಡ, ಡಾ. ವಾಣಿಶ್ರೀ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಿಕೊಟ್ಟರು.
ಕಾಡಪ್ಪ ರಾಮಗುಂಡಿ ಸ್ವಾಗತಿಸಿದರು. ಸಾವಿತ್ರಿ ಹೊತ್ತಿಗಿಮಠ ವಂದಿಸಿದರು. ವಿದ್ಯಾ ನೀಲಪ್ಪನವರ ನಿರೂಪಿಸಿದರು.
