‘ಶರಣರಿಗೆ ಅಂತರಂಗ, ಬಹಿರಂಗ ಎರಡೂ ಒಂದೇ ಆಗಿತ್ತು’

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ:

ಶ್ರಾವಣ ಮಾಸದ ನಿಮಿತ್ಯ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಮಾರ್ಗದರ್ಶನದಲ್ಲಿ ಪೂಜ್ಯ ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ಭಾಲ್ಕಿ ತಾಲೂಕಿನ ಏಣಕೂರು ಗ್ರಾಮದಲ್ಲಿ ಶ್ರಾವಣ ಸಂಭ್ರಮ ಕಾರ್ಯಕ್ರಮ ನಡೆಯಿತು.

ಸಾನಿಧ್ಯ ವಹಿಸಿದ ಪೂಜ್ಯರು, ಶರಣರ ವಿಚಾರದಲ್ಲಿ ಅಂತರಂಗ ಮತ್ತು ಬಹಿರಂಗ ಎರಡೂ ಒಂದೇ ಆಗಿದೆ. ಮನುಷ್ಯನಿಗೆ ಶುದ್ಧವಾದ ಮನಸ್ಸು ಮತ್ತು ಸಮಾಜದಲ್ಲಿನ ಪ್ರಾಮಾಣಿಕ ನಡತೆ ಅತ್ಯಗತ್ಯ. ಕೇವಲ ಹೊರಗಿನ ಆಡಂಬರ ಮುಖ್ಯವಲ್ಲ. ಒಳಗಿನ ಶುದ್ಧತೆಯೇ ನಿಜವಾದ ಭಕ್ತಿ.

ಮನಸ್ಸಿನಲ್ಲಿ ದುರಾಸೆ, ಕೋಪ, ಅಸೂಯೆ ಮುಂತಾದ ಕೆಟ್ಟ ಗುಣಗಳನ್ನು ಬಿಟ್ಟು ದಯೆ, ಕರುಣೆ, ಪ್ರೀತಿಯನ್ನು ಬೆಳೆಸಿಕೊಳ್ಳುವುದೇ ಅಂತರಂಗ ಶುದ್ಧಿ, ಕಾಯಕದಲ್ಲಿ ಪ್ರಮಾಣಿಕತೆ ಸತ್ಯಶುದ್ಧ ಕಾಯಕ ಮತ್ತು ಇತರರಿಗೆ ಮೋಸ ಮಾಡದಿರುವುದೇ ಬಹಿರಂಗ ಶುದ್ಧಿಯಾಗಿದೆ.

ವ್ಯಕ್ತಿಯ ನಡತೆ ಸಮಾಜಕ್ಕೆ ಮಾದರಿಯಾಬೇಕು. ದೇವರು ಸೃಷ್ಟಿಸಿದ ಈ ಪ್ರಕೃತಿ ಹಾಳು ಮಾಡಬಾರದು. ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೆ ಶರೀರ ಆರೋಗ್ಯವಾಗಿಟ್ಟುಕೊಳ್ಳಬೇಕು. ಬೇರೆಯವರಿಗೆ ಕಣ್ಣೀರು ಬರಸದೇ ಕಣ್ಣಿರು ಒರೆಸುವ ಕಾರ್ಯ ಮಾಡಿದರೆ ದೇವರು ಮೆಚ್ಚುತ್ತಾನೆ ಎಂದು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಪೂರ್ವದಲ್ಲಿ ಏಣಕೂರು ಗ್ರಾಮಸ್ಥರೆಲ್ಲರೂ ಶ್ರೀ ಬಸವೇಶ್ವರ ವೃತ್ತಕ್ಕೆ ಹೋಗಿ ವಿಶ್ವಗುರು ಬಸವಣ್ಣನವರ ಮೂರ್ತಿಗೆ ಪೂಜೆ ಸಲ್ಲಿಸಿ, ಎಲ್ಲರೂ ಪೂಜ್ಯರಿಗೆ ಸ್ವಾಗತ ಕೋರಿ ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ಸ್ವಾಗತ ಮಾಡಿಕೊಂಡರು. ಮಕ್ಕಳಿಂದ ಬಸವಗುರುಪೂಜೆ ನೆರವೇರಿಸಲಾಯಿತು. ಗ್ರಾಮದ ಹಿರಿಯರಾದ ಬಾಬುರಾವ ಹಂಚೆ, ಕಾಶಪ್ಪ ಸೋನಾರ, ರಾಜಕುಮಾರ ಮಾನಕಾರ ಅವರು ಪೂಜ್ಯರಿಗೆ ಗೌರವ ಸಲ್ಲಿಸಿದರು.

ರಾಜಕುಮಾರ ಕೊನಗುತ್ತೆ, ಶಾಂತಪ್ಪ ಸಜ್ಜನಶೆಟ್ಟಿ, ಗುರುಬಸಯ್ಯ ಸ್ವಾಮಿ, ಮಲ್ಲಯ್ಯ ಸ್ವಾಮಿ, ವಿಠಲರಾವ ಚಿಟಗುಪ್ಪೆ, ಚನ್ನಬಸಪ್ಪ ಹಚ್ಚೆ, ವೈಜಪ್ಪ ರೆಡ್ಡಿ, ಅನೀಲಕುಮಾರ ಪಾಟೀಲ, ಮೌಲಾನಾಸಾಬ ಮಿರಕಲ್ಲೆ, ರಾಜಕುಮಾರ ಓತಗೆ, ಸಂತೋಷ ತಳವಾಡೆ, ವೀರಭದ್ರಪ್ಪ ತೆಲಗಾಣಿ, ಸತೀಶ ತೇಲಂಗ, ಪ್ರದೀಪ ಬಿರಾದಾರ, ಉಮೇಶ ತಳವಾಡೆ, ಸತೀಶ ಸಜ್ಜನ, ಶಿವು ಓತಗೆ, ಗುರುಸಿದ್ಧಯ್ಯ ಕಿಣಗಿ, ರಮೇಶ ಪಟ್ಟೆ, ಬಾಬುರಾವ ಮದಕಟ್ಟಿ, ಸಂಗಮೇಶ ಬಿರಾದಾರ, ಅಶೋಕ ತುಮ್ಮನಪಳ್ಳೆ, ಶಾಂತವೀರ ತುಮ್ಮನಪಳ್ಳಿ, ಸಂತೋಷ ಕೊನಗುತ್ತೆ, ಮಹೇಶ ಕೊನಗುತ್ತೆ, ಚಂದು ಕೊನಗುತ್ತೆ ಶರಣು ತೆಲಗಾಣಿ, ಗುರುರಾಜ, ಶಿವಕುಮಾರ, ರಾಜಕುಮಾರ, ಸಂಜು ಮೇತ್ರೆ, ಸಿದ್ದು ಕಡಗ ಮುಂತಾದವರು ಉಪಸ್ಥಿತಿರಿದ್ದರು.

ಸುಶೀಲಮ್ಮ ಕಗಡ, ರಾಜಕುಮಾರ ಮಾನಕಾರ, ರಾಜಕುಮಾರ ಕೊನಗುತ್ತೆ ಹಾಗೂ ಪ್ರಭುರಾವ ತೆಲಗಾಣಿ ಅವರಿಂದ ದಾಸೋಹ ಸೇವೆ ನಡೆಯಿತು. ಗ್ರಾಮದ ಚಿಕ್ಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕೊನೆಗೆ ಬಸವ ಆಸ್ತಿ ರೂಪಕ ನೋಡುಗರ ಮನ ರಂಜಿಸಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *