‘ಅನುಭವ ಮಂಟಪದ ಅಪರೂಪದ ಶರಣ ದಂಪತಿಗಳಾಗಿದ್ದ ಅಪ್ಪಣ್ಣ, ಲಿಂಗಮ್ಮ’

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ:

ಹಿರೇಮಠ ಸಂಸ್ಥಾನದಲ್ಲಿ 501 ನೆಯ ಮಾಸಿಕ ಶಿವಾನುಭವಗೋಷ್ಠಿ ಹಾಗೂ ಶರಣ ಹಡಪದ ಅಪ್ಪಣ್ಣ-ಲಿಂಗಮ್ಮ ಅವರ ಜಯಂತಿ ಆಚರಿಸಲಾಯಿತು.

ಸಾನಿಧ್ಯ ವಹಿಸಿ ಪೂಜ್ಯ ಗುರುಬಸವ ಪಟ್ಟದ್ದೇವರು ಆಶೀರ್ವಚನ ನೀಡುತ್ತ, ವಿಶ್ವಗುರು ಬಸವಣ್ಣನವರ ಅತ್ಯಂತ ಆತ್ಮೀಯ ಶರಣರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರಾಗಿದ್ದರು. ಹಡಪದ ಅಪ್ಪಣ್ಣನವರು ಬಸವಣ್ಣನವರ ನೆರಳಾಗಿ ಬಾಳಿದರು. ಅವರ ಆಪ್ತರಾಗಿ ಅವರೆಲ್ಲ ಕಾರ್ಯಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದಿನ ಭಾಷೆಯಲ್ಲಿ ಹೇಳಬೇಕಾದರೆ ಬಸವಣ್ಣನವರ ಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣನವರು ಕಾರ್ಯನಿರ್ವಹಿಸಿದರು.

ಶರಣ ಚರಿತ್ರೆಯ ಅನೇಕ ಪ್ರಸಂಗಗಳಲ್ಲಿ ಹಡಪದ ಅಪ್ಪಣ್ಣನವರ ಉಲ್ಲೇಖ ದೊರೆಯುತ್ತದೆ. ಹಡಪದ ಅಪ್ಪಣ್ಣ-ಲಿಂಗಮ್ಮ ಅಪರೂಪದ ದಂಪತಿಗಳಾಗಿ ಅನುಭವ ಮಂಟಪದಲ್ಲಿ ಅನುಭಾವವನ್ನು ಪಡೆದು ಶ್ರೇಷ್ಠ ಶಿವಯೋಗಿಗಳಾಗಿದ್ದರು. ಅವರುಗಳು ಪಡೆದ ಲಿಂಗಾನುಭಾವ ತಮ್ಮ ವಚನಗಳ ಮೂಲಕ ಬರೆದಿಟ್ಟಿದ್ದಾರೆ. ಅವರ ವಚನಗಳು ಅಧ್ಯಾತ್ಮ ಜೀವನಕ್ಕೆ ಹಾಗೂ ಶಿವಯೋಗ ಸಾಧನೆಗೆ ದಾರಿದೀಪವಾಗಿವೆ.

ಬಸವಣ್ಣನವರು ಕೊನೆಗೆ ಕಲ್ಯಾಣ ಬಿಡುವ ಪ್ರಸಂಗ ಬಂದಾಗ ಬಸವಣ್ಣನವರ ಜೊತೆ ಕೂಡಲಸಂಗಮಕ್ಕೆ ಹೋದವರು ಹಡಪದ ಅಪ್ಪಣ್ಣನವರು ಒಬ್ಬರು ಎಂದು ಚರಿತ್ರೆ ಹೇಳುತ್ತದೆ. ಈ ಪ್ರಸಂಗದಿಂದ ಅಪ್ಪಣ್ಣ ಮತ್ತು ಬಸವಣ್ಣನವರ ನಡುವಿದ್ದ ಆತ್ಮೀಯ ಸಂಬಂಧ ಗೊತ್ತಾಗುತ್ತದೆ ಎಂದರು.

ಪ್ರೊ. ಶಂಭುಲಿಂಗ ಕಾಮ ಅನುಭಾವ ನೀಡಿದರು. ಅಧ್ಯಕ್ಷತೆಯನ್ನು ಗುಂಡಪ್ಪ ಸಂಗಮಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಮೇಶ ಕುರುಬಖೇಳಗಿ ಆಗಮಿಸಿದರು.

ನೀಲಾಂಬಿಕಾ ಪ್ರಕಾಶ ಹಡಪದ ಅವರು ಬಸವಗುರುಪೂಜೆ ಮಾಡಿದರು. ಸಂತೋಷ ಹಡಪದ ಅವರು ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು. ಶ್ರೀದೇವಿ ಶಾಂತಯ್ಯಸ್ವಾಮಿ ಹಾಗೂ ಡಾ. ಬಸವಜ್ಯೋತಿ ಗುಂಡಪ್ಪ ಸಂಗಮಕರ ಅವರಿಂದ ವಚನ ಸಂಗೀತ ನಡೆಯಿತು. ಸುಮೀತ ಬೀರಪ್ಪ ಪೂಜಾರಿ ಹಾಗೂ ವಿರೇಶ ಶಿವರಾಜ ನಿಂಬೂರೆ ವಿದ್ಯಾರ್ಥಿಗಳು ಭಾಷಣ ಮಾಡಿದರು. ಅಕ್ಕಬಳಗದ ಶರಣೆಯರಿಂದ ವಚನ ಭಜನೆ ನಡೆಯಿತು. ಶರಣೆ ಸುಗಂದಬಾಯಿ ಗೋವಿಂದರಾವ ಹಡಪದ ಅವರಿಂದ ಭಕ್ತಿ ದಾಸೋಹ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *