ಬಡ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ:

ಹಿರೇಮಠ ಸಂಸ್ಥಾನ ಭಾಲ್ಕಿಯಲ್ಲಿ 499 ನೆಯ ಮಾಸಿಕ ಶಿವಾನುಭವಗೋಷ್ಠಿ ಹಾಗೂ 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಹಾನಗಲ್ಲ ಕುಮಾರೇಶ್ವರ ಪ್ರಸಾದ ನಿಲಯದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಿತು.

ಸಾನಿಧ್ಯ ವಹಿಸಿ, ಪೂಜ್ಯರು ಅಮೃತ ಮಹೋತ್ಸವ ನಿಮಿತ್ಯ ಎಲ್ಲ ಭಕ್ತರು ಸೇವೆ ಸಲ್ಲಿಸಿ ಸಮಾರಂಭ ಯಶಸ್ವಿಗೊಳಿಸಿರುವುದು ನಮಗೆ ಸಂತೋಷ ತಂದಿದೆ. ಲಿಂಗೈಕ್ಯ ಶಂಕರೆಪ್ಪ ಕರಕಾಳೆ ಅವರ ಸ್ಮರಣಾರ್ಥವಾಗಿ ಬಡ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡುತ್ತಿರುವ ಕರಕಾಳೆ ಪರಿವಾರದವರ ಸೇವೆ ಶ್ಲಾಘನೀಯವಾದದ್ದು ಎಂದು ನುಡಿದರು.

ಪೂಜ್ಯ ಸಿದ್ಧಬಸವ ಸ್ವಾಮಿಗಳು, ಬಸವಪ್ರಿಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಚಂದ್ರಕಾಂತ ಪಾಟೀಲ ಅಧ್ಯಕ್ಷತೆ ವಹಿಸಿದರು.

ತಾರಾಬಾಯಿ ಶಂಕರೆಪ್ಪ ಕರಕಾಳೆ ಪರಿವಾರದವರಿಂದ ಬಸವಗುರು ಪೂಜೆ ನಡೆಯಿತು. ರಮೇಶ ಕರಕಾಳೆ ಉಪಸ್ಥಿತರಿದ್ದರು.

ಅಮೃತ ಮಹೋತ್ಸದಲ್ಲಿ ಸೇವೆ ಸಲ್ಲಿಸಿದ, ಚಂದ್ರಕಾಂತ ಪಾಟೀಲ, ಮಧುಕಾಂತ ಪಾಟೀಲ, ರಾಜಕುಮಾರ ಜಲ್ಲೆ, ಶಿವಕುಮಾರ ಕಮಠಾಣಿ, ಸಂಗಮೇಶ ವಾಲೆ, ಸಂಜುಕುಮಾರ ಕರಕಾಳೆ, ಪ್ರಶಾಂತ ಕಾಕನಾಳೆ, ಅಂಗೇಶ, ನರಸಪ್ಪ, ಪ್ರಭು ಪಾಟೀಲ, ಶರಣಪ್ಪ ಆನಂದವಾಡಿ, ಮನೋಜ ಅಷ್ಟೂರೆ, ರಾಜಕುಮಾರ ಜಾಯಗಾಂವ, ಸಂಗಪ್ಪ ಸೋಲಪೂರೆ, ಸೋಮನಾಥ ಪಾಟೀಲ ಮುಂತಾದವರಿಗೆ ಪೂಜ್ಯರಿಂದ ಸನ್ಮಾನಿಸಲಾಯಿತು.

ದೀಪಕ ಠಮಕೆ, ಸಾಕ್ಷಿ ದತ್ತು ಕರಕಾಳೆ ನಿರೂಪಿಸಿದರು. ಸಿಂಧು ಮತ್ತು ಅಮೂಲ್ಯ ಕರಕಾಳೆ ಅವರಿಂದ ವಚನ ಗಾಯನ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *