ವಿಜಯಪುರ
“ಬಸವ ಮಂಟಪ” ಪುಸ್ತಕದ ಲೇಖಕ ರವಿ ಹಂಜ್ ಅವರು ಅಣ್ಣ ಬಸವಣ್ಣನವರ ಕುರಿತು ಆಕ್ಷೇಪಾರ್ಹ ಮತ್ತು ನಿಂದನಾರ್ಹ ಮಾತುಗಳನ್ನು ಆಡಿರುವುದರ ವಿರುದ್ಧ ಈಚೆಗೆ ನಗರದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪರಶುರಾಮ ಲಂಬು ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಮಹಾಒಕ್ಕೂಟದ ಪದಾಧಿಕಾರಿಗಳು ಹಾಗೂ ಬಸವ ಅಭಿಮಾನಿಗಳು ಅಪಾರ ಪ್ರಮಾಣದಲ್ಲಿ ಭಾಗವಹಿಸಿ ಹಂಜ್ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡರಾದ ಅಡಿವೆಪ್ಪ ಸಾಲಗಲ್ ಅವರು, ಹನ್ನೆರಡನೆಯ ಶತಮಾನದಿಂದಲೂ ನಿರಂತರವಾಗಿ ಬಸವಣ್ಣನವರ ಆದರ್ಶ ಹಾಗೂ ಲಿಂಗಾಯತ ಧರ್ಮದ ಮೇಲೆ ದಾಳಿ ನಡೆಯುತ್ತಲೇ ಇದೆ, ಆದರೆ ಇದಾವುದಕ್ಕೂ ಜಗ್ಗದೆ ನಿಂತಿರುವ ಬಸವಧರ್ಮ ಅಚಲವಾಗಿ ನಿಂತು ಲಿಂಗಾಯತ ವಿರೋಧಿಗಳಿಗೆ ನಡುಕ ಹುಟ್ಟಿಸಿದೆ.
ಅದಕ್ಕಾಗಿ ಈ ತರಹದ ಮಾತುಗಳನ್ನು ಆಡುತ್ತಿರುವ ರವಿ ಹಂಜ್ ಅವರನ್ನು ಕೂಡಲೇ ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಚನ್ನು ಕಟ್ಟಿಮನಿ, ಅಪ್ಪು ಗುಣಕಿ, ಸುರೇಶ ಘೋಣಸಗಿ, ರಮೇಶ ಕವಲಗಿ, ಸೋಮು ರಣದೇವಿ, ಶ್ರೀಧರ ಆಲ್ಯಾಳ, ಗೋಪಿ ಚಲವಾದಿ, ಮತೀನ ದೇವಧರ ಮತ್ತತರ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
