ಗದಗ:
ಧರ್ಮಗುರು ಬಸವಣ್ಣನವರ ಜಯಂತಿ ಅಂಗವಾಗಿ ತೋಂಟದಾರ್ಯಮಠ, ಜಾತ್ರಾ ಮಹೋತ್ಸವ ಸಮಿತಿ, ಬಸವಪರ ಸಂಘಟನೆಗಳು, ಸರ್ವ ಕಾಯಕ ಸಮುದಾಯಗಳ ಸಹಯೋಗದಲ್ಲಿ ಅದ್ದೂರಿಯಾಗಿ, ಬೃಹತ್ ಮೆರವಣಿಗೆ ನಡೆಸಲಾಯಿತು.
ತೋಂಟದಾರ್ಯ ಮಠದಿಂದ ಆರಂಭವಾದ ಈ ಮೆರವಣಿಗೆಯ ಆರಂಭದಲ್ಲಿ ವಿಶ್ವಗುರು ಬಸವಣ್ಣನವರ ಮೂರ್ತಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಪೂಜ್ಯ ಡಾ. ಸಿದ್ಧರಾಮ ಮಹಾಸ್ವಾಮಿಗಳು, ಅಪರ ಜಿಲ್ಲಾಧಿಕಾರಿಗಳಾದ ದುರಗೇಶ ಕೆ. ಆರ್. ಪುಷ್ಪಾರ್ಪಣೆ ಮಾಡಿ ಚಾಲನೆ ನೀಡಿದರು.

ಮೆರವಣಿಗೆ ನಗರದ ಪ್ರಮುಖ ವೃತ್ತಗಳ ಮೂಲಕ ಸಾಗಿ, ಮರಳಿ ತೋಂಟದಾರ್ಯ ಮಠಕ್ಕೆ ಆಗಮಿಸುವ ಮೂಲಕ ಸಮಾಪ್ತವಾಯಿತು. ಈ ಸಂದರ್ಭದಲ್ಲಿ ಆಯಾ ವೃತ್ತಗಳ ಮೂರ್ತಿಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಮೆರವಣಿಗೆಯಲ್ಲಿ ಬಸವಾಭಿಮಾನಿಗಳು, ಬಸವ ಭಕ್ತರು, ಬಸವಧ್ವಜ ಹಿಡಿದು ಉತ್ಸಾಹದಿಂದ ಜಯಘೋಷ ಮಾಡಿದರು. ಈ ಸಂದರ್ಭದಲ್ಲಿ ಜಗ್ಗಲಿಗೆ, ಕರಡಿ ಮಜಲು ತಂಡದವರಿಂದ ಕಲಾ ಸೇವೆ ಜನರ ಮನತಣಿಸಿತು.

ಗದುಗಿನ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ, ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳ, ಬಸವಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ದಲಿತ ಸಂಘರ್ಷ ಸಮಿತಿ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ, ಶರಣ ಕುಂಬಾರ ಗುಂಡಯ್ಯ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಡಿವಾಳ ಮಾಚಯ್ಯ, ವಕ್ಕಲಿಗ ಮುದ್ದಣ್ಣ, ಲಿಂಗಾಯತ ಬಣಜಿಗ ಸಮಾಜ, ಜ.ತೋ. ಮಠದ ಭಕ್ತರು, ಸರ್ವಸಮಾಜ, ಸಮುದಾಯಗಳ ಶರಣರು ಹಾಗೂ ಗದುಗಿನ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ನೀಡಿದವು.

ಜಾತ್ರಾ ಕಮೀಟಿ ಅಧ್ಯಕ್ಷ ವಿನಾಯಕ ಮಾನ್ವಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ಬಸವದಳದ ಅಧ್ಯಕ್ಷ ವಿ.ಕೆ. ಕರೇಗೌಡ್ರ, ಬಸವಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ. ಶಿವಾನಂದ ಪಟ್ಟಣಶೆಟ್ಟರ, ಮ್ಯಾನೇಜರ ಎಂ.ಎಸ್. ಅಂಗಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಕೆಯ ಬಸವರಾಜ ಬಳ್ಳಾರಿ, ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ. ಎ. ಬಳಿಗೇರ, ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಧಾ ಹುಚ್ಚಣ್ಣವರ, ಜಾಲಿಂಮದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀದೇವಿ ಎಸ್. ಶೆಟ್ಟರ, ಶಿವಲೀಲಾ ಅಕ್ಕಿ, ನಾಗೇಶ ಸವಡಿ, ರಾಚಪ್ಪ ಚವಡಿ, ಮಹೇಶ ಮಡಿವಾಳರ, ಬಸವರಾಜ ಮಡಿವಾಳರ, ಜಕ್ಕಪ್ಪ ಕುಂಬಾರ, ಪ್ರಕಾಶ ಘೋಡಕೆ, ದಲಿತ ಸಂಘಟನೆಗಳ ಎಸ್. ಎನ್. ಬಳ್ಳಾರಿ, ಮುತ್ತು ಬಿಳೆಯಲಿ, ಶರೀಫ ಬಿಳೆಯಲಿ, ರಾಜು ಕುರಡಗಿ, ಚಂದ್ರು ತಡಸದ, ಶೇಖಣ್ಣಾ ಕಳಸಾಪೂರ, ದಾನಯ್ಯ ಗಣಾಚಾರಿ ಸೇರಿದಂತೆ ವಿವಿಧ ಸಮಾಜ, ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ನೂರಾರು ಸಂಖ್ಯೆಯಲ್ಲಿ ಭಾಗಿಗಳಾಗಿದ್ದರು.
