ಬಸವ ಜಯಂತಿ: ಚಿತ್ರದುರ್ಗದಲ್ಲಿ ರಂಗೋಲಿ, ಶಿವಶರಣರ ವೇಷಭೂಷಣ ಸ್ಪರ್ಧೆ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ :

ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಬಸವೇಶ್ವರರ ಜಯಂತಿ ಅಂಗವಾಗಿ ೧೯ರಂದು ಭಾನುವಾರ ರಂಗೋಲಿ, ಶಿವಶರಣರ ವೇಷಭೂಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ರಂಗೋಲಿ ಸ್ಪರ್ಧೆ ೧೯ರಂದು ಶುಕ್ರವಾರ ಬೆಳಿಗ್ಗೆ ೯ ಗಂಟೆಗೆ ಶ್ರೀಮಠದ ಆವರಣದಲ್ಲಿ ನಡೆಯಲಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಸ್ಪಧೆಯಲ್ಲಿ ಭಾಗವಹಿಸುವವರು ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು. ವಯಸ್ಸಿನ ಮಿತಿ ಇರುವುದಿಲ್ಲ. ರಂಗೋಲಿ/ಬಸವಾದಿ ಶಿವಶರಣರ ಚಿತ್ರ ಯಾವುದಾದರೂ ಹಾಕಬಹುದು. ಸ್ಪರ್ಧೆಯು ವೈಯಕ್ತಿಕವಾಗಿದ್ದು, ಒಬ್ಬರೇ ಭಾಗವಹಿಸಬೇಕು. ಕೇವಲ ರಂಗೋಲಿ ಪುಡಿ ಬಳಸಿ ರಂಗೋಲಿಯನ್ನು ಬಿಡಿಸಬೇಕು. ಹೂವು, ದೀಪ ಅಥವಾ ಬೇರೆ ಯಾವುದೇ ಪರಿಕರಗಳನ್ನು ಬಳಸುವಂತಿಲ್ಲ. ರಂಗೋಲಿ ಹಾಕಲು ಬೇಕಾದ ಪುಡಿ ಮತ್ತು ಬಣ್ಣವನ್ನು ತಾವೇ ತರತಕ್ಕದ್ದು. ರಂಗೋಲಿಯ ಗಾತ್ರವು ೪x೪ ಅಡಿಗಳಿಗೆ ಮೀರಬಾರದು. ಸ್ಪರ್ಧೆಯಲ್ಲಿ ೧ ಗಂಟೆ ಕಾಲಾವಕಾಶ ನೀಡಲಾಗುವುದು.

ಬಸವಾದಿ ಶಿವಶರಣರ ವೇಷಭೂಷಣ ಸ್ಪರ್ಧೆ:

೧೯ರಂದು ಶುಕ್ರವಾರ ಬೆಳಗ್ಗೆ ೯ಗಂಟೆಗೆ ಶ್ರೀಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ೧೨ನೇ ಶತಮಾನದ ಬಸವಾದಿ ಶಿವಶರಣರ ವೇಷಭೂಷಣ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ವಿದ್ಯಾರ್ಥಿಗಳು ಹಾಗೂ ವಯಸ್ಕರು ಭಾಗವಹಿಸಬಹುದಾಗಿದ್ದು, ಬಸವಾದಿ ಶಿವಶರಣರ ಗೌರವ ಘನತೆಗೆ ತಕ್ಕಂತೆ ವೇಷಭೂಷಣ ಧರಿಸತಕ್ಕದ್ದು. ಅಗತ್ಯ ವಸ್ತುಗಳನ್ನು ತಾವೇ ತರುವುದು. ಶರಣರ ವೇಷಧಾರಿಗಳು ಆಯಾ ಶರಣರ ಜನಪ್ರಿಯ ವಚನಗಳನ್ನು ಪ್ರಸ್ತುತ ಪಡಿಸುತ್ತ ಪರಿಚಯಿಸಬಹುದು. ಯಾವುದೇ ಅನುಚಿತ ಸಂಭಾಷಣೆಗೆ ಅವಕಾಶವಿರುವುದಿಲ್ಲ.

ಈ ಎರಡೂ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ೯೯೦೨೮೫೨೧೫೭, ೯೯೪೫೦೧೭೫೧೭, ೯೯೪೫೧೨೨೪೧೪ ನಂ.ಗಳಿಗೆ ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ವಿಜೇತರಿಗೆ ಸೂಕ್ತ ಬಹುಮಾನ ನೀಡಲಾಗುವುದು. ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು. ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ ಆಸಕ್ತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಶ್ರೀಮಠದ ಪ್ರಕಟಣೆಯಲ್ಲಿ ಕೋರಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *