ಹೋರಾಟ ನಿಂತಿಲ್ಲ, ಜೂನ್ 28 ಬಸವ ಕಲ್ಯಾಣಕ್ಕೆ ಬನ್ನಿ: ಮೀನಾಕ್ಷಿ ಬಾಳಿ ಕರೆ

ಬಸವ ಮೀಡಿಯಾ
ಬಸವ ಮೀಡಿಯಾ

‘ಪ್ರತಿಭಟನೆ ಮಾಡೇ ಮಾಡ್ತೀವಿ, ಎಲ್ಲಾ ಜಿಲ್ಲೆಗಳಿಂದ ಬಸವ ಅನುಯಾಯಿಗಳು ಬರುತ್ತಾರೆ’

ಬೀದರ್

ಕಲಬುರಗಿ ಪೀಠದ ತೀರ್ಪಿನ ನಂತರ ಬಸವಕಲ್ಯಾಣದಲ್ಲಿ ನಡೆಯಬೇಕಿದ್ದ ಜೂನ್ 28ರ ಪ್ರತಿಭಟನೆಯನ್ನು ಕೆಲವು ಮಠಾಧೀಶರು, ಮುಖಂಡರು ರದ್ದು ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಇಂದು ಬೀದರಿನಲ್ಲಿ ಬಸವಪರ ಹಾಗು ಪ್ರಗತಿಪರ ಸಂಘಟನೆಗಳ ಮುಖಂಡರು ಸುದ್ದಿಗೋಷ್ಠಿ ನಡೆಸಿ ಬಸವ ಕಲ್ಯಾಣದಲ್ಲಿ ಆಯೋಜಿತವಾಗಿರುವ ಬಸವಾದಿ ಶರಣರ ಹೆಸರಿನಲ್ಲಿ ನಡೆಯುತ್ತಿರುವ ಹಿಂದೂ ಸಮಾವೇಶವನ್ನು ಪ್ರತಿಭಟಿಸಲು ಕರೆ ಕೊಟ್ಟರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಂತಕಿ ಮೀನಾಕ್ಷಿ ಬಾಳಿ ಆರೆಸ್ಸೆಸ್ ಕೆಲವು ಲಿಂಗಾಯತ ಮಠಾಧೀಶರನ್ನು ಬಳಸಿಕೊಂಡು ಶರಣರ ತತ್ವ ತಿರುಚುವ ಹುನ್ನಾರ ನಡೆಸುತ್ತಿದೆ. ಆ ಕಾರಣಕ್ಕಾಗಿ ಶಹಾಪುರ, ಗದಗದಲ್ಲಿ ಈ ಹಿಂದೂ ಸಮಾವೇಶಗಳನ್ನು ವಿರೋಧಿಸಿದ್ದೇವೆ, ಹಾಗೆಯೆ ಬಸವ ಕಲ್ಯಾಣದಲ್ಲಿ ವಿರೋಧಿಸುತ್ತೇವೆ, ಎಂದು ಹೇಳಿದರು.

“ಜೂನ್ 28 ಬಸವ ಕಲ್ಯಾಣದಲ್ಲಿ ಪ್ರತಿಭಟನೆ ಮಾಡೇ ಮಾಡ್ತೀವಿ. ಎಲ್ಲಾ ಜಿಲ್ಲೆಗಳಿಂದ ಬಸವ ಅನುಯಾಯಿಗಳು ಬರುತ್ತಾರೆ, ನಮ್ಮ ಹೋರಾಟ ನಿಂತಿಲ್ಲ. ಇದು ವೈಯಕ್ತಿಕ ಸಂಘರ್ಷ ಅಲ್ಲ, ಸೈದ್ಧಾಂತಿಕ ಸಂಘರ್ಷ,” ಎಂದು ಹೇಳಿದರು.

ಆರೆಸ್ಸೆಸ್ ಬೇರೆ ಬೇರೆ ಮುಖವಾಡ ಹಾಕಿಕೊಂಡು ಬರುತ್ತದೆ, ಅದರ ನಿಜ ಸ್ವರೂಪ ಅರ್ಥ ಮಾಡಿಕೊಳ್ಳದಷ್ಟು ಕಲ್ಯಾಣ ಕರ್ನಾಟಕದ ಜನ ದಡ್ಡರಲ್ಲ, ಎಂದು ಹೇಳಿದರು.

ಚಿಂತಕಿ ಕೆ ನೀಲ ಮಾತನಾಡಿ, ಶರಣರಿಗೆ ಎಳೆಹೂಟೆ ಶಿಕ್ಷೆ ನೀಡಿದವರು ಇಂದು ಬಸವಾದಿ ಶರಣರ ಹೆಸರಿಯಲ್ಲಿ ಹಿಂದೂ ಸಮಾವೇಶ ಮಾಡುತ್ತಿದ್ದಾರೆ. ಹಿಂದೂ ಸಮಾವೇಶ ಮಾಡಲು ಅಭ್ಯಂತರವಿಲ್ಲ, ಆದರೆ ಬಸವಾದಿ ಶರಣರ ಹೆಸರ ದುರ್ಬಳಕೆಗೆ ವಿರೋಧವಿದೆ, ಎಂದು ಹೇಳಿದರು.

ಪ್ರೊ. ಆರ್.ಕೆ. ಹುಡಗಿ, ಡಾ. ಮೀನಾಕ್ಷಿ ಬಾಳಿ, ಕೆ. ನೀಲಾ, ಸಾವಿತ್ರಿ ಬಸವಕಲ್ಯಾಣ, ಆರ್.ಪಿ. ರಾಜಾ, ಬಸವರಾಜ ಮಾಳಗೆ, ಶಿವಶರಣಪ್ಪ ದೇಗಾಂವ, ಧನರಾಜ ತಾಂಬೋಳೆ, ಕಲ್ಯಾಣಮ್ಮ, ಅಂಬುಬಾಯಿ ಮಾಳಗೆ, ಪ್ರೊ. ವಿಜಯಲಕ್ಷ್ಮಿ ಗಡ್ಡೆ ಹನುಮಂತರಾವ ಪಾಟೀಲ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
4 Comments
  • ಹೋರಾಟ ಕೈ ಬಿಟ್ಟಿದ್ಧಾರೆ ಅಂತ ನೀವೇ ಪೋಷ್ಟ ಹಾಕೀರಿ.. ಇವತ್ತ ನೋಡಿದರ ?
    ಏನರೀ ಇದು ಯಾರದು ಕರೆ ಯಾರದು ಸುಳ್ಳು…

  • ಏಕಾಏಕಿ ಪ್ರತಿಭಟನೆ ಕೈಬಿಟ್ಟಿದ್ದು ಸರಿಯಲ್ಲ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಬೇಕಿತ್ತು. ಶರಣರ ಶಕ್ತಿ ಎಂಥಾದ್ದು ಎಂದು ತೋರಿಸಬೇಕಿತ್ತು.ಮತ್ತೆ ಎಲ್ಲಿ ಮಠಾಧೀಶರು , ಚಿಂತಕರು ಹೋರಾಟಗಾರರು ಪ್ರತಿಭಟನೆ ಗೆ ಕರೆಕೊಡಲಿ.

  • ಪ್ರತಿಭಟನೆ ಆಗಲೇಬೇಕು. ಈ ಮನುವಾದಿಗಳ ಗುಪ್ತ ಅಜೆಂಡಾವನ್ನು ಬಹರಂಗಗೊಳಿಸಲೇಬೇಕು. ಆರ್ ಎಸ್ ಎಸ್ ಎನ್ನುವ ಈ ಸುಳ್ಳರಸಂಘವನ್ನು ಅವರ ಮುಖವಾಡವನ್ನು ನಾವು ಬಯಲಿಗೆ ತರಬೇಕಾಗಿದೆ.

Leave a Reply

Your email address will not be published. Required fields are marked *