‘ಮನೆ-ಮನೆಗೆ ವಚನ ಸಾಹಿತ್ಯ ತಲುಪಿಸುತ್ತಿರುವ ಬಸವಜ್ಯೋತಿ ಕಾರ್ಯಕ್ರಮ’

ಬೀದರ :

ಬಸವ ತತ್ವ ಪಸರಿಸುವ ಮಾಸಿಕ ‘ಬಸವ ಜ್ಯೋತಿ’ ಕಾರ್ಯಕ್ರಮ ಹಾಗೂ ಶಿವಶರಣಪ್ಪ ಪಾಟೀಲ ಹಾರೂರಗೇರಿ ಅವರ ಜನ್ಮದಿನ ಸಂಭ್ರಮ ನಗರದ ಹಾರೂರಗೇರಿಯಲ್ಲಿ ಸಡಗರದ ಮಧ್ಯೆ ನಡೆಯಿತು.

ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ, ಅಕ್ಕನಾಗಲಾಂಬಿಕಾ ಮಹಿಳಾ ಗಣ ವತಿಯಿಂದ ನಗರದ ಅರಿವಿನ ಮನೆ ಸಭಾಂಗಣದಲ್ಲಿ ಜರುಗಿತು.

ಬೆಂಗಳೂರು ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, “ಜಗಜ್ಯೋತಿ ಬಸವೇಶ್ವರರ ಮಾನವತಾವಾದಿ ವಿಚಾರಗಳನ್ನು ಮತ್ತು ವಚನ ಸಾಹಿತ್ಯವನ್ನು ಸಮಾಜದ ಪ್ರತಿ ಮನೆ-ಮನೆಗೂ ತಲುಪಿಸುವ ಸದುದ್ದೇಶದಿಂದ ಈ ಬಸವಜ್ಯೋತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಸಮಾಜಮುಖಿ ಚಿಂತಕರು ಹಾಗೂ ಬಸವ ಅಭಿಮಾನಿಗಳ ನೆಚ್ಚಿನ ನಾಯಕರಾದ ಶಿವಶರಣಪ್ಪ ಪಾಟೀಲ ಹಾರೂರಗೇರಿ ಅವರ 83ನೇ ಜನ್ಮದಿನವನ್ನು ವಿಭಿನ್ನ ಹಾಗೂ ಸಾರ್ಥಕ ರೀತಿಯಲ್ಲಿ ಆಚರಿಸಲಾಯಿತು. ಪಾಟೀಲ ಅವರು ಸುಮಾರು ಐವತ್ತು ವರ್ಷಗಳಿಂದ ಅಪ್ಪಾಜಿ ಮಾತಾಜಿಯವರ ಸತ್ ಸಂಕಲ್ಪ ಈಡೇರಿಸಲು, ಬಸವಾದಿ ಶರಣರ ವಚನ ಸಾಹಿತ್ಯ ಪಸರಿಸಲು ಶ್ರಮಿಸುತಿದ್ದಾರೆ. ಅವರು ಶತಮಾನೋತ್ಸವ ಆಚರಿಸಿಕೊಳ್ಳುವಂತಾಗಲಿ ಎಂದು ಸ್ವಾಮೀಜಿ ನುಡಿದರು.

ಪೂಜ್ಯ ಮಾತೆ ಸತ್ಯಾದೇವಿ ಮಾತನಾಡಿ, 12ನೇ ಶತಮಾನದ ಮಹಾನ್ ದಾರ್ಶನಿಕ ಬಸವಾದಿ ಶರಣರು ಸಾರಿದ ಸಮಾನತೆ, ಕಾಯಕ ದಾಸೋಹ ಮತ್ತು ಭ್ರಾತೃತ್ವದ ಸಂದೇಶಗಳನ್ನು ಇಂದಿನ ಯುವ ಪೀಳಿಗೆಗೆ ಹಾಗೂ ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಮಾಸಿಕ ‘ಬಸವ ಜ್ಯೋತಿ’ ಕಾರ್ಯಕ್ರಮವು ಪ್ರಮುಖ ವೇದಿಕೆಯಾಗಿದೆ. ಈ ಕಾರ್ಯಕ್ರಮದ ಮೂಲಕ ವಚನ ಪಠಣ, ಬಸವ ತತ್ವ ವಿಚಾರ ಸಂಕಿರಣಗಳು ಹಾಗೂ ಸಮಾಜದ ಒಳಿತಿಗಾಗಿ ಶ್ರಮಿಸಿದ ಸಾಧಕರನ್ನು ಸ್ಮರಿಸುವ ಸತ್ಪರಂಪರೆಯನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ ಎಂದರು.

ಶಿವಶರಣಪ್ಪ ಪಾಟೀಲ ಹಾರೂರಗೇರಿ ಅವರ ಜನ್ಮದಿನವನ್ನು ಕೇವಲ ಹುಟ್ಟುಹಬ್ಬದ ಸಂಭ್ರಮಕ್ಕೆ ಸೀಮಿತಗೊಳಿಸದೆ, ಬಸವ ಸಂಸ್ಕೃತಿಯ ಪ್ರಸಾರ ಹಾಗೂ ಸೇವಾ ಕಾರ್ಯಗಳೊಂದಿಗೆ ಆಚರಿಸಲಾಯಿತು. ಬಸವ ತತ್ವದ ಹಾದಿಯಲ್ಲಿ ನಡೆಯುತ್ತಾ, ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಬಸವ ದಳದ ಮುಖಂಡರು, ಅಭಿಮಾನಿಗಳು ಮತ್ತು ಶರಣರು ಶುಭ ಹಾರೈಸಿದರು.

ಬಸವ ಮಂಟಪದ ಮಕ್ಕಳು ಕಾರ್ಯಕ್ರಮದಲ್ಲಿ ಶರಣರ ವಚನಗಳನ್ನು ಗಾಯನ ಮಾಡುವುದರ ಮೂಲಕ ಬಸವಣ್ಣನವರ ಬೋಧನೆಗಳನ್ನು ನೆನಪಿಸಿಕೊಂಡರು.

ಸತ್ಕಾರ ಹಾಗೂ ಶುಭ ಹಾರೈಕೆ ಶಿವಶರಣಪ್ಪ ಪಾಟೀಲ ಹಾರೂರಗೇರಿ ಅವರಿಗೆ ಗಣ್ಯರು ಹಾಗೂ ಬಸವ ಅಭಿಮಾನಿಗಳು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಜನ್ಮದಿನದ ಹಾರ್ದಿಕ ಶುಭಕೋರಿದರು.

ಸಮಾಜದಲ್ಲಿ ಅಸಮಾನತೆ ತೊಡೆದುಹಾಕಿ, ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವದಂತೆ ಬದುಕಲು ಎಲ್ಲರೂ ಪ್ರತಿಜ್ಞೆಗೈದರು.

ನ. 14 ರಂದು ಔರಾದ ತಾಲೂಕಿನ ಮುಸ್ತಾಪುರ ಗ್ರಾಮದಲ್ಲಿ ಭವ್ಯ ಚನ್ನಬಸವೇಶ್ವರ ಜಯಂತಿ, ಶರಣೆ ಗೊಗ್ಗವ್ವೆ ಸ್ಮರಣೋತ್ಸವ ಆಯೋಜಿಸಲಾಗಿದೆ. ಭಾಗವಹಿಸಲು ಗಣಪತಿ ದೇಶಮುಖ ವಡಗಾಂವ ಕೋರಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *

ಬಸವ ತತ್ವ ಚಿಂತಕರು, ಬೀದರ