ಬೆಂಗಳೂರು
ಮಹಾನಗರ ರಾಜಾಜಿನಗರ ಮೆಟ್ರೋ ಸ್ಟೇಷನ್ ಸಮೀಪದಲ್ಲಿ ಇರುವ ಬಸವೇಶ್ವರ ಪುತ್ಥಳಿ ಅನಾವರಣ ವಿಳಂಬ ಧೋರಣೆ ವಿರುದ್ಧ ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಪಾಲರಿಗೆ ಎರಡನೇ ಬಾರಿ ದೂರು ನೀಡಿದೆ.
ಬಸವೇಶ್ವರ ಪುತ್ಥಳಿ ಸ್ಥಳದಲ್ಲಿ ಬಹುತೇಕ ಎಲ್ಲಾ ಕಾಮಗಾರಿ ಮುಗಿದಿದೆ. ಆದರೂ ಲೋಕಾರ್ಪಣೆ ಮಾಡಲು ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ತಾವುಗಳು ಸ್ಥಳೀಯ ಶಾಸಕ ಸುರೇಶಕುಮಾರ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯಸ್ಥರಿಗೆ ಮತ್ತೊಮ್ಮೆ ತೀವ್ರಗತಿಯಲ್ಲಿ ಪುತ್ಥಳಿಯನ್ನು ಲೋಕಾರ್ಪಣೆ ಮಾಡಬೇಕೆಂದು ಎಚ್ಚರಿಕೆ ಮುಖಾಂತರ ಲಿಖಿತ ರೂಪದ ಕಟ್ಟಪ್ಪಣೆಯ ಸೂಚನಾ ಪತ್ರವನ್ನು ಶಾಸಕರು ಮತ್ತು ಪಾಲಿಕೆ ಮುಖ್ಯಸ್ಥರಿಗೆ ಕೊಡಬೇಕೆಂದು ಸಂಘಟನೆ ರಾಜ್ಯಾಧ್ಯಕ್ಷ ಮೋಹನಕುಮಾರ ಹಾಗೂ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಹಿಂದೆ ಫೆಬ್ರುವರಿ 15, 2024 ರಂದು ಗೌ. ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರವನ್ನು, ಈ ಮನವಿ ಪತ್ರದೊಂದಿಗೆ ಲಗತ್ತಿಸಿ ಸಲ್ಲಿಸಲಾಗಿದೆ.

‘ದಾಸೋಹ ದಿನ’
ತುಮಕೂರು ಸಿದ್ಧಗಂಗಾ ಮಠದ ಪೂಜ್ಯ ಶಿವಕುಮಾರ ಶಿವಯೋಗಿಗಳ ಲಿಂಗೈಕ್ಯ ದಿನವನ್ನು ‘ದಾಸೋಹ ದಿನ’ವನ್ನಾಗಿ ಆಚರಿಸಲು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಪಾಲರಿಗೆ ದೂರು ನೀಡಿದೆ.
ದಿನಾಚರಣೆಗೆ ಅಧಿಕೃತ ಸುತ್ತೋಲೆ ಹೊರಡಿಸಿ ಸಂಬಂಧಪಟ್ಟ ಇಲಾಖೆಗೆ ಅಧಿಸೂಚನೆ ಹೊರಡಿಸಿದ್ದು ಇರುತ್ತದೆ. ಶಿವಯೋಗಿಗಳ ಅಭೂತಪೂರ್ವ ಸೇವೆ ಸ್ಮರಿಸಿ, ಅವರ ಭಾವಚಿತ್ರ ಇಟ್ಟು, ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ‘ದಾಸೋಹ ದಿನ’ ತಪ್ಪದೇ ಆಚರಿಸಲು ಸಂಘಟನೆ ರಾಜ್ಯಪಾಲರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿ ವಿನಂತಿಸಿಕೊಂಡಿದೆ.
ದಾಸೋಹ ದಿನ ಆಚರಣೆಗೆ ತಮ್ಮೆಲ್ಲರ ಭಾವನೆಗೆ ನನ್ನ / ನಮ್ಮ ಬಸವ ಭಕರ ಅನುಮೋದನೆ ಇರುತ್ತದೆ . ಎಲ್ಲ ಸರಕಾರಿ ಅಧಿಕಾರಿಗಳು ಈ ಹಿಂದೆಯೇ ಸಾಂಸ್ಕತಿಕ ನಾಯಕನೆಂದು ಸ್ವೀಕರಿಸಿದ್ದಾರೆ. ಅವರ ದಾಸೋಹಂ ಭಾವಕ್ಕೆ ತಕ್ಕಂತೆ ಎಲ್ಲರೂ ಸಹಕಾರ ನೀಡಬೇಕು.