ಬಸವತತ್ವ ವಿಶ್ವಕಂಡ ಶ್ರೇಷ್ಠ ವಿಸ್ಮಯ: ಡಾ. ಅಶೋಕ ಆಲೂರ

ಬಸವ ಮೀಡಿಯಾ
ಬಸವ ಮೀಡಿಯಾ

ಮನೆಯಲ್ಲಿ ಮಹಾಮನೆ ಕಾರ್ಯಕ್ರಮದ ಸಮಾರೋಪ

ಹಾವೇರಿ:

ಬಸವಣ್ಣನವರ ಸಮಗ್ರ ಸಮಾನತೆ ಹಾಗೂ ಏಕತೆಯ ತತ್ವಗಳು ವಿಶ್ವಕಂಡ ಅತ್ಯಂತ ಶ್ರೇಷ್ಠ ವಿಸ್ಮಯವಾಗಿವೆ ಎಂದು ಮಡಿಕೇರಿ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಅಶೋಕ ಆಲೂರ ಹೇಳಿದರು.

ಅವರು ಬಸವ ಬಳಗದಿಂದ ಶ್ರಾವಣ ಮಾಸದಾದ್ಯಂತ ಹಮ್ಮಿಕೊಳ್ಳಲಾಗಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮವನ್ನು ಸಿಂದಗಿ ಮಠದಲ್ಲಿ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಬಸವಣ್ಣನವರು ಸರ್ವ ಜನಾಂಗ ಹಾಗೂ ಎಲ್ಲ ಕಾಯಕ ಮೂಲದವರನ್ನು ಸಂಘಟಿಸಿ ಒಂದೇ ಸೂರಿನಡಿ ತಂದ ಬೀಜಮಂತ್ರವಾಗಿ ಸಮಾನತೆ, ಕಾಯಕ ಹಾಗೂ ದಾಸೋಹದ ಹರಿಕಾರರಾಗಿದ್ದಾರೆ.

ಕಾಯಕ ಜ್ಞಾನ ಮತ್ತು ಕ್ರಿಯೆಗಳ ಸಂಗಮವಾಗಿ ಐಚ್ಛಿಕವಾಗಿ ಹಾಗೂ ತಾರತಮ್ಯ ಮಾಡದೇ ಇರಬೇಕೆಂಬುದೇ ಅವರ ಧ್ಯೇಯವಾಗಿತ್ತು. ದಾನ ಸಂಸ್ಕೃತಿ ಬದಲಾಗಿ ನಿರಹಂಭಾವದ ದಾಸೋಹ ಸಂಸ್ಕೃತಿಯನ್ನು ನೀಡಿ ಸತ್ಯ ಶುದ್ಧ ಕಾಯಕದಿಂದ ಬಂದ ಅರ್ಥವನ್ನು ತನು, ಮನ, ಭಾವದಿಂದ ಗುರು, ಲಿಂಗ, ಜಂಗಮಕ್ಕೆ ಸಮರ್ಪಿಸುವ ಸಂಕಲ್ಪವನ್ನು ನೀಡಿದರು. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದವರು ಶರಣರು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಾವೇರಿ ವಿದ್ಯಾಲಯದ ಉಪಕುಲಪತಿ ಸುರೇಶ ಜಂಗಮಶೆಟ್ಟಿ ಮಾತನಾಡಿ, ಬಸವಾದಿ ಶಿವಶರಣರ ತತ್ವಾದರ್ಶಗಳು ನಿತ್ಯನೂತನವಾಗಿದ್ದು ಅನುಕರಣೆಯವಾಗಿವೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಬಸವಾದಿ ಶಿವಶರಣರ ತತ್ವಾದಶ೯ಗಳು ಸರ್ವಕಾಲಕ್ಕೂ ಸಲ್ಲುವ ಸಂದೇಶಗಳಾಗಿದ್ದು, ಅವುಗಳ ಆಚಾರ ಹಾಗೂ ಪ್ರಸಾರವನ್ನು ಮಾಡುತ್ತಿರುವ ನಾಡಿನ ಬಸವಪರ ಸಂಘಟನೆಗಳ ಕಾರ್ಯಗಳು ಸ್ತುತ್ಯಾರ್ಹ ವಾಗಿದೆ ಎಂದರು.

ಹೋತನಹಳ್ಳಿಯ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳು ನೇತ್ರತ್ವ ವಹಿಸಿದ್ದರು.

ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ ಶ್ರಾವಣ ಮಾಸದ ಉದ್ದಕ್ಕೂ ನಡೆದ ಮನೆಯಲ್ಲಿ ಮಹಾ ಮನೆಯ ಕಾರ್ಯಕ್ರಮದ ಸಾಫಲ್ಯ ಹಾಗೂ ಸಾರ್ಥಕತೆ ಹಾಗೂ ಜನರ ಸಹಕಾರದ ಬಗ್ಗೆ ಹೇಳಿದರು.

ದಾಸೋಹ ಸೇವೆಗೈದ ಉದ್ಯಮಿ ಈಶ್ವರ ಪತ್ರಿ ಮಾತನಾಡಿದರು.

ಕಾವ್ಯ ಅಂಗಡಿ, ಅಕ್ಕಮಹಾದೇವಿ ಹಾನಗಲ್ಲ, ಶಶಿಕಲಾ ಕಾಯಕದ, ಮಮತಾ ಮಾಗಳ ವಚನ ಸಂಗೀತ ನೀಡಿದರು.

ಎನ್‌.ಬಿ. ಕಾಳೆ ಸ್ವಾಗತಿಸಿದರು. ಶಿವಬಸಪ್ಪ ಮುದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಗದ ಉಪಾಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ಕೆ.ಎನ್. ಗುದಗಿ ಶರಣು ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.

 ಬಳಗದ ಮುರಿಗೆಪ್ಪ ಕಡೆಕೊಪ್ಪ, ಉಳಿವೆಪ್ಪ ಪಂಪಣ್ಣವರ, ಶಿವಯೋಗಿ ಬೆನ್ನೂರ, ಶಿವಯೋಗಿ ಮಾಮಲೆಪಟ್ಟಣಶೆಟ್ಟಿ, ಬಸವರಾಜ ಮುಳಗುಂದ, ಚಂದ್ರಶೇಖರ ಮಾಳಗಿ, ಕೆ.ಎಂ. ವಿಜಾಪುರ, ಚನ್ನಬಸವಣ್ಣ ರೊಡ್ಡನವರ, ಮಲ್ಲಿಕಾರ್ಜುನ ಸಾತೇನಹಳ್ಳಿ, ಗುರಣ್ಣ ಸೀಮಿಕೇರಿ, ಸಿದ್ದಲಿಂಗೇಶ ನಾಸಿ, ಜಗದೀಶ ಹತ್ತಿಕೋಟಿ, ವಿಶ್ವನಾಥ ಅಂಗಡಿ, ಚೇತನ ಯಳಗೇರಿ, ಮಠಪತಿ, ಶಂಕ್ರಪ್ಪ ಜಾಯಗೊಂಡ, ಬಸವರಾಜ ಕೋರಿ, ಹನುಮಂತಪ್ಪ ಮಡಿವಾಳರ, ಸಾಹಿತಿ ಹನುಮಂತಗೌಡ ಗೊಲ್ಲರ, ಗಂಗಣ್ಣ ಮಾಸೂರ, ಮಾಲತೇಶ ಕರೆಮಣ್ಣನವರ, ದರ್ಶನ್ ಹಿಂಚಿಗೇರಿ, ಪ್ರಭು ಮುದ್ದಿ, ಪವನ ಪಂಪಣ್ಣನವರ, ಚೆನ್ನಪ್ಪ ಇಟಗಿ, ಪುಟ್ಟಪ್ಪ ಮಲ್ಕಣ್ಣನವರ, ಬಸವರಾಜ ಬೆಲ್ಲದ, ಪ್ರಭುಗೌಡ ಬಸನಗೌಡ, ಶಶಿಧರ್ ಯು.ಜೆ, ನಾಗರಾಜ ವಿಭೂತಿ, ಕಿರಣ ಕೊಳ್ಳಿ, ನಾಗೇಂದ್ರಪ್ಪ ಮಂಡಕ್ಕಿ, ಶಿವರಾಜ ಕಾಯಕದ, ಧ್ರುವ, ಎಸ್. ಬಿ. ಗಂಜಿಗಟ್ಟಿ, ಪ್ರಕಾಶ ಮಾಳಾಪುರ, ಎಸ್.ಎಂ. ಬಡಿಗೇರ, ಜಯಶ್ರೀ ಶಿವಪುರ, ಭಾಗ್ಯ ಮುದ್ದಿ, ಸುಮಂಗಲ ಯಳಗೇರಿ, ಅನಿತಾ ಹಿಂಚಿಗೇರಿ, ವಾಣಿ ಹತ್ತಿಕೋಟಿ ಮತ್ತಿತರರು ಭಾಗಿಯಾಗಿದ್ದರು.

ಭಾಗಿಯಾಗಿದ್ದ ಎಲ್ಲರಿಗೂ ಮಹಾದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *