ಸಿದ್ದರಾಮಯ್ಯ ನಂತರ ಲಿಂಗಾಯತ ಹೋರಾಟ 2: ಸಂಗಮೇಶ ಕಲಹಾಳ

ಬಸವ ಮೀಡಿಯಾ
ಬಸವ ಮೀಡಿಯಾ

(ಬಸವಶಕ್ತಿ ಗೂಗಲ್ ಮೀಟ್ ಸರಣಿ ಉಪನ್ಯಾಸದ ವಿಡಿಯೋ)

ಕೊಪ್ಪಳ

ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದ್ದ ಸಿದ್ದರಾಮಯ್ಯ ರಾಜಿನಾಮೆ ನೀಡಿದ್ದಾರೆ.

ಅವರ ನಿರ್ಗಮನದಿಂದ ಬದಲಾಗುತ್ತಿರುವ ರಾಜಕೀಯ ಚಿತ್ರಣದ ಬಗ್ಗೆ ಬಸವ ಸಂಘಟನೆಗಳು, ಕಾರ್ಯಕರ್ತರು ಜಾಗೃತರಾಗುವ ಅನಿವಾರ್ಯತೆಯಿದೆ.

ಈ ಬೆಳವಣಿಗೆಗಳನ್ನು ವಿಶ್ಲೇಷಿಸಲು ಬಸವ ರೇಡಿಯೋ ಹೆಸರಾಂತ ಚಿಂತಕರನ್ನು ಆಹ್ವಾನಿಸಿ ಐದು ದಿನಗಳ ಚರ್ಚೆ ನಡೆಸಿತು.

ಸಂಗಮೇಶ ಕಲಹಾಳ ಜಿಲ್ಲಾ ಆಯುಷ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಕೊಪ್ಪಳ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಟಣಕನಕಲ್ಲ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷರಾಗಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ಸಂಗಮೇಶ ಕಲಹಾಳ ಬಂದು ಮಾತನಾಡಿದರು:

‘ಇಲ್ಲಿಯವರೆಗೆ ಲಿಂಗಾಯತರೆಂದು ಹೇಳಿಕೊಂಡು ಮುಖ್ಯಮಂತ್ರಿ ಆಗಿರುವವರು ಲಿಂಗಾಯತ ಮತಗಳನ್ನು ಬಳಸಿಕೊಂಡರೆ ಹೊರತು ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಶಕ್ತಿ ತುಂಬಲಿಲ್ಲ.

ಆ ಕೆಲಸ ಮಾಡಿದ್ದು ಸಿದ್ದರಾಮಯ್ಯನವರು. ಲಿಂಗಾಯತ ಧರ್ಮಕ್ಕೆ ಅವರು ನೀಡಿದ ಕೊಡುಗೆ ಸಂಚಲನ ಮೂಡಿಸಿದವು.

ಪಂಚಪೀಠಗಳ ಅನುಯಾಯಿ ಡಿ ಕೆ ಶಿವಕುಮಾರ್ ಅವರ ಬಗ್ಗೆ ಸಹಜವಾದ ಆತಂಕವಿದೆ. ಆದರೆ ಮುಖ್ಯಮಂತ್ರಿಯಾಗಿ ಅವರು ಯಾವುದೇ ಸಾಮಾಜಿಕ ಹೋರಾಟ ತಿರಸ್ಕಾರ ಮಾಡಲು ಆಗುವುದಿಲ್ಲ. ನಮ್ಮ ಹೋರಾಟ ತೀವ್ರಗೊಳಿಸಬೇಕು.

ಶಿವಕುಮಾರ್ ಅವರಿಗೆ ನಿಯೋಗದಲ್ಲಿ ಹೋಗಿ ಲಿಂಗಾಯತ, ವೀರಶೈವ ಹಾಗೂ ಹಿಂದೂಗಳ ನಡುವಿನ ವ್ಯತ್ಯಾಸ ತಿಳಿಸಬೇಕು.

ಲಿಂಗಾಯತ ಪ್ರತ್ಯೇಕ ಧರ್ಮವಾದರೆ ಹಿಂದೂ ಅಥವಾ ವೀರಶೈವಕ್ಕೆ ಹಾನಿ ಆಗುವುದಿಲ್ಲ ಎಂದು ತಿಳಿಸಿಕೊಡಬೇಕು.

ಅನೇಕ ಸಮುದಾಯಗಳು ಧಾರ್ಮಿಕ, ಸಾಮಾಜಿಕ ಸ್ಥಾನಮನಕ್ಕೆ 50-100 ವರ್ಷಗಳಿಂದ ಹೋರಾಟ ನಡೆಸುತ್ತಿವೆ. ನಾವೂ ಹಾಗೆ ಮುಂದುವರೆಯಬೇಕು. ಚುನಾವಣೆಗೆ ಆರು ತಿಂಗಳ ಮುಂಚೆ 2017-18 ರ್ಯಾಲಿಯಿಂತಲೂ ದೊಡ್ಡ ರ್ಯಾಲಿಗಳಾಗಬೇಕು. ಎಲ್ಲರೂ ಬೆಚ್ಚಿಬೀಳುವಂತೆ ಇವು ನಡೆಯಬೇಕು.

ಲಿಂಗಾಯತ ರಾಜಕೀಯ ಸಬಲೀಕರಣವಾಗಬೇಕಾದರೆ ಯುದ್ದೋಪಾದಿಯಲ್ಲಿ 102 ಸಮುದಾಯಗಳ ಸಂಘಟನೆಯಾಗಬೇಕು. ‘ಮೇಲ್ವರ್ಗದವರು’ ಎಲ್ಲರನ್ನೂ ಅಪ್ಪಿಕೊಳ್ಳಬೇಕು. ‘ಕೆಳವರ್ಗವಾದವರು’ ಶರಣ ಸಂಸ್ಕಾರ ಪಡೆದು ಮುಖ್ಯವಾಹಿನಿಗೆ ಬರಬೇಕು. ಲಿಂಗಾಯತ ಒಳಪಂಗಡಗಳ ನಡುವೆ ರಕ್ತ ಸಂಬಂಧ ಬೆಳೆಯಬೇಕು.

ಲಿಂಗಾಯತರು ದುಡಿಯುವ ವರ್ಗದವರು. ನಾವು ಅಹಿಂದ ಸೇರಿಕೊಂಡರೆ ಮಾತ್ರ ರಾಜಕೀಯವಾಗಿ ಶಕ್ತಿಯುತವಾಗುತ್ತೇವೆ.’

ಡಾ. ಸಂಗಮೇಶ ಕಲಹಾಳ ಜಿಲ್ಲಾ ಆಯುಷ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಕೊಪ್ಪಳ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಟಣಕನಕಲ್ಲ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷರಾಗಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
1 Comment
  • ಮುಂದೆ ಮುಂದೆ ಬಸವ ಹಿಂದೆ ಲಿಂಗಾಯತ ಧರ್ಮ ಆಧಾರ್ ಎನ್ನುವಡೆ ವಿಚಾರ ಗಟ್ಟಿಯಾಗಿ ಯಾರಿಗೂ ತಲೆ ಬಾಗದೆ ಮುಂದೇ ಮುಂದೇ ಸಾಗೋಣ ವಿರೋಧಿ ಜನರು ನಮ್ಮ ಹಿಂದೆ ಬರುವರು ಬೆನ್ನಿಗೆ ಬೀಳುವರು ಅವರನ್ನು ಹೊತ್ತು ಎತ್ತಿ ಸಾಗೋಣ 👍🏻👍🏻

Leave a Reply

Your email address will not be published. Required fields are marked *