‘ನೀವೂ ಬೇಡ ಜಂಗಮರಾದರೆ ಇಲಿ, ಅಳಿಲು ತರಿಸುತ್ತೀವಿ, ತಿನ್ನುತೀರಾ?’
ಬೆಂಗಳೂರು
ಬೆಂಗಳೂರಿನಲ್ಲಿ ಶನಿವಾರ ನಡೆದ ‘ಬುಡ್ಗಜಂಗಮ, ಬೇಡ ಜಂಗಮ, ಬೇಡುವ ಜಂಗಮ’ ದುಂಡು ಮೇಜಿನ ಸಭೆಯಲ್ಲಿ ಪರ ವಿರೋಧ ವಾದಗಳು ತೀಕ್ಷ್ಣವಾಗಿ ನಡೆದವು.
ಅಲೆಮಾರಿ ಬುಡಕಟ್ಟು ಮಹಾಸಭಾ ಗೌರವಾಧ್ಯಕ್ಷ ಸಿ.ಎಸ್. ದ್ವಾರಕಾನಾಥ್ ಮಾತನಾಡಿ ಅತ್ಯಂತ ನಿಕೃಷ್ಟವಾದ ಅಲೆಮಾರಿ ಸಮುದಾಯದ ಸವಲತ್ತುಗಳನ್ನು ಅತ್ಯಂತ ಶ್ರೀಮಂತವಾದ ಬೇಡುವ ಜಂಗಮರು ತೆಗೆದುಕೊಳ್ಳುತ್ತಿರುವುದು ಅಕ್ಷಮ್ಯ ಎಂದು ಹೇಳಿದರು.
ಬೇಡುವ ಜಂಗಮ ಮತ್ತು ಬೇಡ ಜಂಗಮ ಒಂದೇ ಅಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಹೇಳಿ ಎರಡೂ ಸಮುದಾಯಗಳ ನಡುವಿರುವ ವ್ಯತ್ಯಾಸಗಳನ್ನು ವಿವರಿಸಿದರು.
ಐತಿಹಾಸಿಕವಾಗಿ ಲಿಂಗಿ ಬ್ರಾಹ್ಮಣರೆಂದು ಕರೆದುಕೊಂಡು ಲಿಂಗಾಯತರಲ್ಲಿ ಚಾತುರ್ವಣ್ಯ ವ್ಯವಸ್ಥೆಯನ್ನು ಸ್ಥಾಪಿಸಲು ಪ್ರಯತ್ನಿಸಿದವರೇ ಇಂದು ದಲಿತ ಬೇಡ ಜಂಗಮರೆಂದು ಕರೆದುಕೊಳ್ಳುತ್ತಿರುವುದು ವಿಪರ್ಯಾಸ ಎಂದು ಹೇಳಿದರು.
ಸಭೆಗೆ ವೀರಶೈವ ಜಂಗಮ ಸಂಘದಿಂದ ಬಂದಿದ್ದ ಸುಮಾರು ಹದಿನೈದು ಜನರು ಇದಕ್ಕೆ ವಿರುದ್ಧವಾಗಿ ನಿಲುವು ತೆಗೆದುಕೊಂಡರು ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ಪ್ರಧಾನ ಕಾರ್ಯದರ್ಶಿ ನಾಗರಾಜ ಹೇಳಿದರು.
ಸಭೆಯಲ್ಲಿ ಮಾತನಾಡಿದ ವೀರಶೈವ ಜಂಗಮರೊಬ್ಬರು ‘ಬ್ರಾಹ್ಮಣರನ್ನು ಹೊರತುಪಡಿಸಿ ಎಲ್ಲರೂ ಅಸ್ಪೃಶ್ಯರೇ ಆಗಿದ್ದಾರೆ. ಬೇಡ ಜಂಗಮರು ಬೇರೆಯಲ್ಲ ಬೇಡುವ ಜಂಗಮ ಬೇರೆಯಲ್ಲ. ಎಲ್ಲರೂ ಒಂದೇ,’ ಎಂದು ಪ್ರತಿಪಾದಿಸಿದರು.
‘ನಮ್ಮನ್ನೂ ಬ್ರಾಹ್ಮಣರು ಹೊರಗಿಟ್ಟಿದ್ದಾರೆ. ನಾವು ಊಟ ಮಾಡಿದರೆ ಸೆಗಣಿ ಸಾರಿಸಿ ಬರಬೇಕು,’ ಎಂದು ಹೇಳಿದರು.
‘ವೀರಶೈವ ಜಂಗಮರು ಕೆಲವು ಕೋರ್ಟ್ ದಾಖಲೆ ತಂದಿದ್ದರು. ಆದರೆ ಅವುಗಳನ್ನು ಅವರು ಸರಿಯಾಗಿ ಓದಿರಲೇ ಇಲ್ಲ. ಅವುಗಳನ್ನು ಜಾಮದಾರ ಮತ್ತು ದ್ವಾರಕಾನಾಥ್ ಪರಿಶೀಲಿಸಿ ಸರಿಯಾದ ಅರ್ಥವನ್ನು ವಿವರಿಸಿದರು,’ ಎಂದು ನಾಗರಾಜ್ ಹೇಳಿದರು.
ಆದರೂ ಹಠಬಿಡದೆ ವೀರಶೈವ ಜಂಗಮರು ತಾವೂ ದಲಿತ ಸಮುದಾಯವೇ ಎಂದು ಹೇಳಿದರು. ಆಗ ದ್ವಾರಕಾನಾಥ್ ಬುಡ್ಗ ಬೇಡ ಜಂಗಮರು ಮಾಂಸಾಹಾರಿಗಳು. ಅವರು ಬೆಕ್ಕು ನರಿ ಅಳಿಲುಗಳನ್ನೆಲ್ಲ ತಿನ್ನುತ್ತಾರೆ. ಈಗಲೇ ಅವರು ತಿನ್ನುವ ಅಳಿಲು, ಇಲಿ ತರಿಸುತ್ತೀವಿ. ಅವರೊಂದಿಗೆ ಕುಳಿತು ನೀವೂ ಅವನ್ನು ತಿಂದರೆ ಬೇಡುವ ಜಂಗಮ ಬೇಡ ಜಂಗಮ ಒಂದೇ ಎಂದು ಒಪ್ಪಿಕೊಳ್ಳುತ್ತೇವೆ’ ದ್ವಾರಕಾನಾಥ್ ಸವಾಲು ಹಾಕಿದರು.
ಆಗ ವೀರಶೈವ ಜಂಗಮರು ಸಭೆಯಿಂದ ಹೊರನಡೆದರು.
ಇಂತಹ ಚರ್ಚೆ ನಡೆಯಲೆಂದೇ ಸಭೆ ಏರ್ಪಡಿಸಿದ್ದು. ಎಲ್ಲೂ ವಾದ ವಿವಾದ ಸಭ್ಯತೆ ಮೀರಿ ನಡೆಯಲಿಲ್ಲ. ಆದರೂ ವೀರಶೈವ ಜಂಗಮರು ಅಸಹನೆಯಿಂದ ಹೊರನಡೆದಿದ್ದು ಸರಿ ಕಾಣಲಿಲ್ಲ, ಎಂದು ನಾಗರಾಜ್ ಹೇಳಿದರು.
ನೈಜ ವರದಿ,
ಆ ಚಿಂತನ ಮಂಥನ ಸಭೆಯ ಪ್ರತ್ಯಕ್ಷದರ್ಶಿ ನಾನಾಗಿದ್ದೆ, ಅವರು ತಮ್ಮ ವಿಚಾರಗಳನ್ನು ಮಾತ್ರ ಸಭೆಗೆ ತಿಳಿಸಿ ಸಭೆಯ ಆಯೋಜಕರು ಅವರ ಸಂದೇಹ ಮತ್ತು ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡುವ ಮೊದಲೆ ಸಭೆಯಿಂದ ನಿರ್ಗಮಿಸಿದರು. ಬಹುಶಃ ಅವರ ಕೇಳಿದ ಪ್ರಶ್ನೆಗಳು ಸರಿ ಇರಲಿಲ್ಲವೆಂದು ಅವರಿಗೆ ಅರಿವಾಗಿರಬಹುದು.
ಮೇಲ್ನೋಟಕ್ಕೆ ಯಾರೇ ಗಮನಿಸಿದರು, ವೀರಶೈವ ಲಿಂಗಾಯತ ಜಂಗಮರು, ಪರಿಶಿಷ್ಟ ಬೇಡ ಜಂಗಮರ ಹಕ್ಕುಗಳನ್ನು ಕಸಿದುಕೊಳ್ಳಲು ನಡೆಸುತ್ತಿರುವ ಷಡ್ಯಂತ್ರ ಜಗ ಜಾಹಿರಾಗಿದೆ. ಆದರೂ ಉಳಿದ ವೀರಶೈವ ಲಿಂಗಾಯತರು ಹಾಗೂ ಹಿಂದೂ ಸಮಾಜ ಅದನ್ನು ವಿರೋಧಿಸದೆ ಕಣ್ಣಿದ್ದು ಕುರುಡಾಗಿರುವುದು ಅತ್ಯಂತ ವಿಪರ್ಯಾಸ.
ಬೇಡುವ ಜಂಗಮರು, ಕೇವಲ ವೃತ್ತಿಯಾಗಿ ಅಲೆದಾಟದಿಂದ ಬಂದ ಆದಾಯದಿಂದ, ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕೆಲವು ಜನಾಂಗಕ್ಕೇ ಶಾಪ ವಿ ತ್ತು. ಅವರು ದರುದ್ರೇರಾಗಿ ಬಾಳಬೇಕು.
ಬೇಡ ಬುಡಕಟ್ಟಿನ ಜನ ಸಾಮಾನ್ಯರ ತಮ್ಮ ಕಾಯಕದ ಮೂಲಕ ತನ್ನ ಪಾಡಿಗೆ ಕಾಡಿನಲ್ಲಿ ಬದುಕಲು ಸಿಗುವ ಚಿಕ್ಕ ಪುಟ್ಟ ಜೀವಿಗಳನ್ನು ತಿಂದು ಬದುಕುತ್ತಿದ್ದರು. ಅವರು ಮೌಸಹರಿಗಳಾಗಿದ್ದರು. ಅವರು ಶಿವನ ಉಪಸಕರಾಗಿರಬಹುದು. ಅದಕ್ಕೆ ವೀರಶೈವರ ಗುಂಪಿನಲ್ಲಿ ಸೇರಿದ್ದಾರೆ. ಜಗತ್ತು ಹುಟ್ಟಿದಾಗಿನಿಂದ ಶಿವ ಶಕ್ತಿಯ ಉದಯ ವಾಗಿತ್ತು. ಅವರ ಉಪಾಸನೆ ಮಾತ್ರ ಇತ್ತು. ಆಮೇಲೆ ವೈದಿಕರು ತಮ್ಮ ಬೇಳೆ ಬೇಯಿಸಿಕೊಳ್ಳಲು, ವಿವಿಧ ಬಗೆಯ ಪಂಥಿಗಳನ್ನು ಮಾಡಿದರು. ಆಗ ಬ್ರಾಹ್ಮಣ್, ವೈಷ್ಣವ, ಶೈವ, ಶಾಕ್ತ ಪಂಥಗಳ ಹುಟ್ಟಿಕೊಂಡವು. ಇಲ್ಲಿ ಮಾತ ಭೇದಗಳು ಹುಟ್ಟುಕೊಂಡು ಜನರನ್ನು ಗುಲಾಮರನ್ನಾಗಿ ಆಳುವ ಒಂದು ದೊಡ್ಡ ಪ್ರಮಾಣದ ಪರಂಪರೆ ಬೆಳೆಯಿತು. ವರ್ಣ ಭೇದ, ವರ್ಗಭೇದ, ಲಿಂಗಭೇದ,, ಇತ್ಯಾದಿ ಭೇದಗಳನ್ನು ಸೃಷ್ಟಿಸಿ ಜನರನ್ನು ಗುಲಾಮರನ್ನಾಗಿ ಆಳುವ ನೀತಿ ಜಾರಿಗೆ ತಂದಿರುವ, ಅರಮನೆ ಮತ್ತು ಗುರುಮನೇಯವರು ವರ್ಗಗಳಮೇಲೆ ಆಚರಣೆಗಳನ್ನು ಹೇರಿದರು ಮತ್ತು ದೇವರ ಪೂಜೆಗೆ ಬೇಕಾದ ಸಾಮಗ್ರಿಗಳು ಅಕ್ಕಿ ಗೋಧಿ ಹಿಟ್ಟಿಗೆ ಬೆಲ್ಲ ರುಚಿಗೆ ತಕ್ಕಂತೆ ಗುರುವಿನ ಗರಡಿಯಲ್ಲಿ ಸೇವೆ ಪಲ್ಲಕ್ಕಿ ಮೆರವಣಿಗೆ ನಡೆಸುತ್ತಾ ಬಂದಿದ್ದಾರೆ.
ಸರಿಯಪ್ಪ. ವರ್ಣ, ಪಂಥ ಎಲ್ಲಾ ಮಾಡಿದ್ದು ಬ್ರಾಹ್ಮಣರೇ ಅಂತ ಇಟ್ಕೊಳ್ಳೋಣ. ಬ್ರಾಹ್ಮಣ ವರ್ಗದಿಂದ ಬಸವಣ್ಣ ಕೂಡ ಹುಟ್ಟು ಬ್ರಾಹ್ಮಣರೇ. ಯಾಕೆ ಅವರು ಮಾಡಿದ ಲಿಂಗಾಯತರೆಲ್ಲ ಬೇರೆ ಬೇರೆ ಅಂತ ಒಡೆದಾಡಿತ ಇದ್ದಿರ ಇವಾಗ?
ವರ್ಣಾಶ್ರಮ ವನ್ನು ಆ ಭಗವಂತನೇ ಸೃಷ್ಟಿ ಮಾಡಿರೋದು. ಮನುಷ್ಯ ಸೃಷ್ಟಿ ಮಾಡಿದ್ದರೆ ಇಷ್ಟು ದಿನ ಬಾಳಿಕೆ ಬರ್ತಾ ಇರ್ಲಿಲ್ಲ. ಮನುಷ್ಯ ಮಾಡಿರೋ ಎಲ್ಲಾ ವಸ್ತುಗಳಿಗೂ ಸೀಮಿತ ಅವಧಿ.
ವೀರಶೈವ ಲಿಂಗಾಯತರು ಬೇಡ ಜಂಗಮರೆಂದು ಎಸ್ಸಿ ಸರ್ಡಿಪಿಕೇಟ್ ಪಡೆದುಕೊಳ್ಳಲು ಉನ್ನಾರ ನಡೆಸಿದ್ದಾರೆ. ಅತ್ಯಂತ ಮೇಲ್ವರ್ಗದಲ್ಲಿರುವ ಬ್ರಾಮಣರನ್ನು ಬಿಟ್ಟರೆ ನೆಷ್ಟ್ ವೀರಶೈವ ಜಂಗಮರೇ ಮೇಲ್ಪಂಕ್ತಿಯಲ್ಲಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಅತ್ಯಂತ ಉನ್ನತ ಮಟ್ಟದಲ್ಲಿರುವ ಈ ಹೀರೇಮಠದವರು, ಬೇಡ ಜಂಗಮರೆಂದು ಸುಳ್ಳು ಹೇಳಿ ಎಸ್ಸಿ ಸರ್ಟಿಪಿಕೇಟ್ ಪಡೆದು ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದಾರೆ. ಇವರ ಈ ನೀಚ ಬುದ್ದಿಗೆ ಏನೆನ್ನಬೇಕು. ಎಸ್ಸಿ ಸರ್ಟಿಪಿಕೇಟ್ ಕೇಳುವ ಇವರು ತಮ್ಮ ಮಕ್ಕಳನ್ನು ಎಸ್ಸಿ ಜನಾಂಗದವರಿಗೆ ಕೊಟ್ಟು ಮದುವೆ ಮಾಡುತ್ತಾರೆಯೇ, ಅಥವಾ ಎಸ್ಸಿ ಹೆಣ್ಣುಮಕ್ಕಳನ್ನು ತಮ್ಮ ಗಂಡುಮಕ್ಕಳಿಗೆ ತೆಗೆದುಕೊಂಡು ಮದುವೆ ಮಾಡಿಕೊಂಡು ಮನೆ ತುಂಬಿಸಿಕೊಳ್ಳಲು ತಯಾರಿದ್ದಾರೆಯೇ? ಕೇವಲ ಸರ್ಟಿಪಿಕೇಟ್ ಗೋಸ್ಕರ ಬಡಿದಾಡುವ ಈ ಹೈನೋರು ಅಸ್ಪೃಶ್ಯರ ಜೊತೆ ವೈವಾಹಿಕ ಸಂಬಂಧ ಬೆಳಸಲು ಮುಂದೆ ಬರುವರೆ? ಸಮಾಜದಲ್ಲಿ ಉತ್ತಮ ಸ್ಥಾನಮಾನದಲ್ಲಿದ್ದು, ಕುರುಬ ಉಪ್ಪಾರ, ಲಿಂಗಾಯತ, ಎಸ್ಸಿ ಎಸ್ಟಿ ಹೀಗೆ ಎಲ್ಲಾ ಸಮಾಜವನ್ನು ಕೀಳಾಗಿ ನೋಡುವ, ಎಲ್ಲಾ ಸಮಾಜದೊಂದಿಗೆ ಅಸ್ಪೃಶ್ಯತೆ ಆಚರಣೆ ಮಾಡುವ, ಎಲ್ಲಾ ಸಮಾಜದವರನ್ನು ಕಾಲಿಗೆ ಬೀಳಿಸಿಕೊಳ್ಳುವ, ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆ ಮಾಡಿಸಿಕೊಳ್ಳುವ ಈ ವೀರಶೈವ ಜಂಗಮರು ಅಸ್ಪೃಶ್ಯರ ಅನ್ನದ ತಟ್ಟೆಗೆ ಕೈ ಹಾಕಿರುವುದು ಅತ್ಯಂತ ಹೇಯ ಕೃತ್ಯ ಮತ್ತು ನೀಚತನದ ಪರಮಾವಧಿ ಆಗಿದೆ.
ಬೇಡ ಜಂಗಮ ಆದವರನ್ನು, ಮಠಧಿಪತಿಗಳನ್ನಾಗಿ ಮಾಡುವ ಪದ್ಧತಿ, ರದ್ದು ಮಾಡಿ, ಆಗ ಎಲ್ಲಾ ಸರಿಹೋಗುತ್ತೆ.
ಈ ಐಗಳು ಈಗಲೇ ವೀರಶೈವರನ್ನ ಹಿಸಿಸುತ್ತಿದ್ದಾರೆ ಇವರಕೈಯಲ್ಲಿ ಉರಿಯುವುದೇ ಕಷ್ಟ ಆಗಿದೆ ಇವರನ್ನ ಹೊತ್ತು ಕೊಂಡು ಮೆರೆಸುವರು ಲಿಂಗಾಯಿತರು. ಕಂತೆ ಭಿಕ್ಷೆ ಕೋರದಾನ್ಯ ಭಿಕ್ಷೆ , ನಾಗರಪಂಚಮಿ ಯುಗಾದಿ ಹಬ್ಬ ವರ್ಷದ ಪ್ರಮುಖ ಹಬ್ಬಗಳಲ್ಲಿ ಬಿಕ್ಷೆ ಮಾಡುತಿದ್ದರು. ವೀರಶೈವರ ಭಕ್ತರ ಮನಗಳಲ್ಲಿ ಇವರಿಗೆ ಪ್ರಸಾದ ಮಾಡಿ ಪಾದಪೂಜೆ ಮಾಡಿ ಪಾದೋದಕ ಮನೆಯಯಲ್ಲ ಸಿಂಪಡಿಸಿ ಉಳಿದ ಪಾದೋದಕ ನಾವು ಸೇವಿಸಿ, ದೀರ್ಘದಂಡ ನಮಸ್ಕಾರ ಆಡ್ ಬಿದ್ದು ನಂತರ ಪ್ರಸಾದ ಸೇವನೆ, ನಂತರ ತಾಂಬೂಲ ದಕ್ಷಿಣೆ ಹೀಗೆ ನಡೆಯುತ್ತಿತ್ತು. ಲಿಂಗಾಯಿತರಿಗೆ ಯಾವ ದು SC ಗಿಂತ ಕಡಿಮೆ ಇದ್ದದ್ದು ಇದ್ರೆ ಕೊಡ್ರೀಪ್ಪ, ನಾವು ರೈತರು ನಾವು ಶೂದ್ರರು ನಾವು ಬಿಸಿಲು ಗಲ್ಲಿ ಮಳೆ ಚಳಿಗೆ ಮೈಯೋಡ್ಡಿ ಅರ್ಧ ಮರ್ದ ಬಟ್ಟೆ ಹಾಕೊಂಡು ಅರಿವೇ ರೊಟ್ಟಿ ಆಗಿ ಕೆಲಸ ಮಾಡ್ತೀವಿ ಅಂತ ಬೇಡಿ ಕೆ ಇಡ್ತೀವಿ ಈ ಐ ಗಳು ಬಂದ್ರೆ ಹೊರಗ ಹಾಕಿರಿ. ಬುಡ್ಗ SC ಬೇಡುವ ಜಂಗಮ ಜನರಲ್. ಗೊತ್ತಾ. ರೋಂಗೋಲಿ ಕೆಳಗೆ ತೂರಾಕ್ ಬಂದರೆ ಬಿಟ್ಟ್ಕೊಂಡು ಕಷ್ಟ್ಟಕ್ ಗುರಿ ಮಾಡ್ಕೋಬೇಡ್ರಿ.
ಅಂಬೇಡ್ಕರ್ ರವರು ಜಾತಿ ವರ್ಗ ವನ್ನು ಮಾಡಿದ್ದು ಯಾವ ಆಧಾರದ ಮೇಲೆ? ಆಹಾರದ ಮೇಲೆ ನಾ?..ಜಾತಿ ವರ್ಗವನ್ನು ಮಾಡಿದ್ದು ಅವರು ಮಾಡುವ ಕಾಯಕದ ಮೇಲೆ…ಬೇಡ ಜಂಗಮರು ಬೇಡುವ ಕಾಯಕದಲ್ಲಿ ಜೀವನ ನಡೆಸಿದವರು….ಬೆಕ್ಕು,ಅಳಿಲು ತಿನ್ನಿ ಎಂದು ಅಸಂಬದ್ಧ ವಾಗಿ ಹೇಳುವವರು ನಿಜವಾಗಿಯೂ ಚಿಂತಕರ ಅಲ್ಲವೆ ಅಲ್ಲ…ಎಂತ ತಳಬುಡವಿಲ್ಲದ ಹೇಳಿಕೆ ,.ಅದೆಲ್ಲದಕಿಂತ ಮೀರಿ ಸಮಾಜದ ಒಳತಿಗೆ ಇರುವ ಕೆಲವು ಮಾದ್ಯಮಗಳು sold out ಆಗಿದಾವ ಎಂದು ಅನುಮಾನ…ದಾಖಲೆ ಇಲ್ಲದೆ ಕೇವಲ ತಿನ್ನುವ ಆಹಾರದ ಮೇಲೆ ಜಾತಿ ವರ್ಗ ಎಂದು ಮಾತಾಡಿದ್ದು ಮೂರ್ಖತನದ ಪರಮಾವಧಿ…ಸಭೆಯಲ್ಲಿ ಗಾಂಬಿರ್ಯತೆ ಇಲ್ಲ ಎಂದು ಅರ್ಥವಾಗಿದೆ..
ಬಸವರಾಜ್ ರವರೆ ಎಡಗೈ ಎಸ್ಸಿ ಪಟ್ಟಿಯಲ್ಲಿ ಬರುವ ಜಾತಿಗಳಲ್ಲೇ ಪರಸ್ಪರ ವೈವಾಹಿಕ ಸಂಬಂಧಗಳನ್ನು ಬೆಳೆಸುವುದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮೀಸಲಾತಿಯನ್ನು ಕೊಟ್ಟಿದ್ದು ವೈವಾಹಿಕ ಸಂಬಂಧಗಳನ್ನು ಬೆಳೆಸಲು ಅಲ್ಲ , ಸಾಮಾಜಿಕವಾಗಿ ಆರ್ಥಿಕವಾಗಿ ಮುಂದೆ ಬರಲು.
ಬೇಡ ಜಂಗಮ ಜಾತಿಯಲ್ಲೂ ಸಾಮಾಜಿಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳೂ ಸಾಕಷ್ಟು ಇವೆ.
ಮಲ್ಲಿಕಾರ್ಜುನ ಖರ್ಗೆ ಅವರು ಮುನಿಯಪ್ಪ ರವರು ಬಲಾಡ್ಯರಿರುವಂತೆ ಹಿರೇಮಠ ಕುಟುಂಬಗಳು ಅಷ್ಟೇ.
ಸಂವಿಧಾನಕ್ಕೆ ಬೆಲೆ ಕೊಡುವ ತಾವುಗಳು ಅಂಬೇಡ್ಕರ್ ಸಾಹೇಬರಿಗೆ ನಿಜವಾಗಲೂ ಬೆಲೆ ಕೊಡುವುದಾದರೆ ನೂರ ಒಂದು ಪಟ್ಟಿಯಲ್ಲಿರುವ ಎಲ್ಲರಿಗೂ ಸವಲತ್ತುವಂತೆ ಮಾಡಿ
ವೇಷಗಾರರು ಸುಡುಗಾಡು ಸಿದ್ದರು ಬೈರಾಗಿಗಳನ್ನು. ಕರೆದುಕೊಂಡು ಬಂದು ಇವರೇ ಬೇಡ ಜನಮರೆಂದು ಸಮಾಜಕ್ಕೆ ತಪ್ಪು ಸಂದೇಶ ಕೊಡುವುದು ಎಷ್ಟು ಸರಿ
ನೀವು ಸರಿಯಾಗಿ ಸಭೆ ನಡವಳಿಕೆ ತಿಳಿದು ಮಾತಾಡಿದ್ರೆ ಒಳ್ಳೇದು.
ಸ್ವಾಮಿ ತಾವು ಸರಿಯಾಗಿ ತಿಳಿದಿಲ್ಲ ಅನ್ನಿಸುತ್ತೆ ಈ ಬ್ರಹ್ಮಣರು ಮಾಡಿದ ವರ್ಣ ಭೇದ ವ್ಯವಸ್ಥೆ ಮಾಂಸಾಹಾರ ಸೇವಕರು ಮತ್ತು ಸಸ್ಯಾಹಾರ ಸೇವಕರ ಅಂತರವನ್ನು ತೆರೆದಿಡುತ್ತವೆ ಅಷ್ಟಕ್ಕೂ ನಾವು ಮೇಲು ಅಂತ ಬೊಬ್ಬೆ ಹಾಕುವ ಬೇಡ ಜಂಗರು (ವೀರಶೈವ ಜಂಗಮರು ) ಇಂದು ಮೀಸಲಾತಿ ಗಾಗಿ ಮಾಡುತ್ತಿರುವ ಹುನ್ನಾರ ನೋಡಿದರೆ ತಿಳಿಯುತ್ತೆ ಇವರಿಗೆ ಜಾತಿಯು ಬೇಕು,ಮೀಸಲಾತಿಯು ಬೇಕು ಅಂತ,ದಲಿತರನ್ನ ಮಾಂಸಾಹಾರಿಗಳು ಅನ್ನೋ ಕಾರಣಕಾಗಿ ಕೀಳಾಗಿ ನೋಡುವ ಅವಿವೇಕಿಗಳು ಇಂದು ಮೀಸಲಾತಿಗಾಗಿ SC ಪಟ್ಟಿಗೆ ಬರೋಕೆ ಕಾದು ನಿಂತಿದ್ದಾರೆ ಅಂದ್ರೆ ಅದೆಷ್ಟು ಲಜ್ಜೆಗೆಟ್ಟಿದ್ದಾರೆ ಎಂಬುದು ಜಗಜಾಹೀರು ಆಗುತ್ತಿದೆ ಇಂತ ಅವಿವೇಕಿಗಳಿಗೆ ಮಾಂಸಾಹಾರ ಸೇವನೆ ಮಾಡೋಕೆ ಹೇಳಿದ್ದು ತಪ್ಪು ಅನ್ನುವುದಾದರೆ ಇವರು ಮಾಂಸಾಹಾರಿ ದಲಿತರ ಮೀಸಲಾತಿ ಹಕ್ಕು ಕೇಳುತ್ತಿರುವುದು ಸಹ ತಪ್ಪು…
ಇಲ್ಲಿ ಯಾರು ಬೇಡ ಜಂಗಮರು , ಬಡ್ಗ ಜಂಗಮರು,ಬೇಡುವ ಜಂಗಮರು ಎನ್ನುವುದು ನೀವುಗಳು ಮಾಡುವ ದುಂಡು ಮೇಜಿನ ಸಭೆನಡೆಸುವುದರಿಂದ ತೀರ್ಮಾನ ಆಗುವುದಿಲ್ಲ.ಹಾಗೂ ವೀರಶೈವರು ಐನೋರು ಪಂಚ ಪೀಠದ ಕೆಳಗೆ ಬರುವವರೇ ನಿಜವಾದ ಬೇಡ ಜಂಗಮರು ಎನ್ನುವುದಕ್ಕೇ ನಮ್ಮ ಸಮಾಜದ ಮುಖಂಡರ ಹತ್ತಿರ ಹಾಗೂ ನಮ್ಮ ಸಮಾಜದ ವಕೀಲರ ಹತ್ತಿರ ಸಕಟ್ಟು ದಾಖಲೆಗಳು ಹೇಳುತ್ತವೆ ನಿಮಗೆ ಅಷ್ಟು ದೈರ್ಯ,ತಾಕತ್ತು ಇದ್ದರೆ ನ್ಯಾಯಾಲದಲ್ಲಿ ಪ್ರಕರಣ ದಾಖಲುಮಾಡಿ ನ್ಯಾಯ ಅನ್ಯಾಯ ಅಲ್ಲೇ ತೀರ್ಮಾನ ಆಗಲಿ ….ಇನ್ನೊಂದು ಪ್ರಮುಖ ವಿಚಾರ ಪರಿಶಿಷ್ಟ ಜಾತಿಯಲ್ಲಿ ಬರುವ ಇಂದಿನ ಮುಂದುವರೆದ ಸಮಾಜದಲ್ಲಿ ಯಾರೂ ತಮ್ಮ ಹಳೇ ಕಸುಬು,ಕೆಲಸ,ವೃತ್ತಿ ಯಾರು ಮಾಡುತ್ತಿಲ್ಲ ಎಲ್ಲರೂ hi-fi ಜೀವನ ನಡೆಸುತ್ತಿದ್ದಾರೆ ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು……
ಜಾತಿಗಿಂತ ಆರ್ಥಿಕ ಮಾನದಂಡ ತಂದರೆ ಎಲ್ಲರಿಗೂ ಒಳಿತಾಗುವುದೇನೋ
ವೀರಶೈವ ಜಂಗಮರು ಜೀವನ ಪದ್ಧತಿ
1)ಇವರಿಗೆ ಪ್ರತಿಯೊಂದು ಊರಲ್ಲಿ ಅಪಾರ ಪ್ರಮಾಣದ ಶಿಷ್ಯ ವೃಂದವಿರುತ್ತದೆ.
2)ಪ್ರತಿಯೊಬ್ಬರ ಮನೆಯಲ್ಲಿ ಹುಟ್ಟಿನಿಂದ ಸಾವಿನವರೆಗೂ ಅವರ ತೊಟ್ಟಿಲು ಕಾರಣ ಮದುವೆ ಮುಂಜಿ ಶವ ಸಂಸ್ಕಾರ ಸಮಯದಲ್ಲಿ ಮಾಡುವ ಪೂಜೆಯನ್ನು ಸಹ ವೀರಶೈವ ಜಂಗಮರು ಮಾಡುತ್ತಾರೆ
3)ಪ್ರತಿಯೊಂದು ಊರಲ್ಲೂ ಜಂಗಮರಿಗೆ ಬಹಳ ಗೌರವ ಕೊಡುತ್ತಾರೆ ಮತ್ತು ಅವರು ತಮ್ಮ್ ಶಿಷ್ಯ ವೃಂದದಿಂದ ಹಣ ಅಥವಾ ಬಂಗಾರ ಅಥವಾ ದವಸ ಧನ್ಯಗಳನ್ನು ದಕ್ಷಿಣೆ ರೂಪದಲ್ಲಿ ಪಡೆಯುತ್ತಾರೆ.
4)ನಾನು ಕಂಡಂತೆ ಜಂಗಮರಿಗೆ ಪಿತೃರ್ಜಿತವಾಗಿ ಬಹಳಷ್ಟು ಭೂಮಿ ಹೊಂದಿರುವುದಿಲ್ಲ ಏಕೆಂದರೆ ಹಿಂದಿನ ಕಾಲದಲ್ಲಿ ಅವರ ಶಿಷ್ಯಾವೃಂದದವರು ಜಂಗಮರಿಗೆ ಜೀವನ ಸಾಗಿಸಲು ಸಾಗಿಸಲು ಎಲ್ಲ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದರು.
5) ಜಂಗಮರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಹಿಂದಿನ ಕಾಲದಲ್ಲಿ ಜಂಗಮರಿಗೆ ಊರಿನವರೆಲ್ಲರೂ ಜನಗಮರು ಮಾಡುವ ಪೂಜಾ ಪಾಠಗಳಿಗಳಿಗಾಗಿ ಅವರ ಶಿಷ್ಯರು ಜಂಗಮರ ಜೀವನ ಸಾಗಿಸಲು ಬೇಕಾಗುವ ಎಲ್ಲ ಖರ್ಚು ವೆಚ್ಚ ನೋಡಿಕೊಳ್ಳುತ್ತಿದ್ದರು ಆದರೆ ಈಗ ಕಾಲ ಬದಲಾಗಿದೆ. ಜಂಗಮರು ಹೊಟ್ಟೆ ಪಾಡಿಗಾಗಿ ಬೇರೆ ಬೇರೆ ಕೆಲಸ ಮಾಡುತಿದ್ದರೆ
6)ಸಾಮಾಜಿಕ ವಾಗಿ ಜಂಗಮರು ಉನ್ನತ ಸ್ಥಾನ ಹೊಂದಿದ್ದಾರೆ ಆರ್ಥಿಕವಾಗಿ ಅವರು ದುರ್ಬಲರಾಗಿದ್ದಾರೆ. ಕೆಲವೊಂದು ಪಟ ಭದ್ರ ಹಿತಶಕ್ತಿಗಳು ಜಂಗಮರನ್ನು ದಾರಿ ತಪ್ಪಿಸುವ ಕೆಲಸ ಮಾಡುತಿದ್ದರೆ
7)ಜಂಗಮರು ಸಸ್ಯ ಹಾರಿಗಳು ಲಿಂಗಾಧರಿಗಳು
ಸರಕಾರವು ಸದರಿ ವಿಷಯಕ್ಕೆ ಕುರಿತಂತೆ ಕಾಲ ಹರಣ ಮಾಡದೇ ಕೂಡಲೇ ಒಂದು ತೀರ್ಮಾನಕ್ಕೆ ಬರಬೇಕು ಇದರ ಬಗ್ಗೆ ಲಿಂಗಾಯತ ಮಹಾಸಭಾದವರು ಮುತುವರ್ಜಿ ವಹಿಸಬೇಕು