ಭಾಲ್ಕಿ :
ವಿಶ್ವಗುರು ಬಸವಣ್ಣನವರ ಜಯಂತಿ ಹಾಗೂ ವಚನ ಜಾತ್ರೆ-೨೦೨೬ ಮತ್ತು ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರ ೨೭ನೆಯ ಸ್ಮರಣೋತ್ಸವ ಹಾಗೂ ನಾಡೋಜ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ೭೫ ಸಾಧಕರಿಗೆ ಸನ್ಮಾನ ಸಮಾರಂಭ ಜರುಗಿತು.
ಸಾನಿಧ್ಯ ವಹಿಸಿ, ಭಾಲ್ಕಿ ಹಿರೇಮಠ ಸಂಪೂರ್ಣವಾಗಿ ಬಸವತತ್ವದ ನಿಜಾಚರಣೆಯ ಮಠವಾಗಿದೆ. ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರು ಹಾಕಿಕೊಟ್ಟ ಮಾರ್ಗದಲ್ಲಿ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ನಿಷ್ಠೆಯಿಂದ ನಡೆಯುತ್ತಿದ್ದಾರೆ. ಪೂಜ್ಯರು ಅನುಭವಿಸಿದ ನೋವುಗಳು ಹೇಳಿದರೆ ಕಣ್ಣಲ್ಲಿ ನೀರಲ್ಲ, ರಕ್ತ ಬರುತ್ತದೆ.

ಅವರು ಮುಳ್ಳಿನ ಹಾಸಿಗೆಯ ಮೇಲೆ ನಡೆದು ತಮ್ಮ ಕಾರ್ಯದ ಮೂಲಕ ಬಸವತತ್ವದ ಸುಗಂಧ ಜಗತ್ತಿನಾದ್ಯಂತ ಪಸರಿಸುತ್ತಿದ್ದಾರೆ. ನಮ್ಮ ನಾಡಿನಲ್ಲಿ ಅಷ್ಟೇ ಅಲ್ಲ ದೇಶದಲ್ಲಿಯೇ ಭಾಲ್ಕಿ ಹಿರೇಮಠ ಪ್ರಸಿದ್ಧಿ ಪಡೆದಿರುವುದು ಪೂಜ್ಯರ ಅವಿಶ್ರಾಂತ ಪರಿಶ್ರಮವೇ ಕಾರಣ.
ಧರ್ಮಪ್ರಸಾರ ಮತ್ತು ಶಿಕ್ಷಣ ರಂಗದಲ್ಲಿ ಭಾಲ್ಕಿ ಹಿರೇಮಠ ಮಹೋನ್ನತ ಕಾರ್ಯ ಮಾಡುತ್ತಿದೆ. ಡಾ.ಬಸವಲಿಂಗ ಪಟ್ಟದ್ದೇವರಿಗೆ ಗುರುಬಸವ ಪಟ್ಟದ್ದೇವರಂತಹ ಸಮರ್ಥ ಉತ್ತರಾಧಿಕಾರಿ ದೊರೆತಿದ್ದಾರೆ. ತಮ್ಮ ಗುರುವಿನ ಅಮೃತ ಮಹೋತ್ಸವ ಸಂಭ್ರಮದಿಂದ ಮಾಡುತ್ತಿರುವುದನ್ನು ನೋಡಿದರೆ ಅವರ ಗುರುನಿಷ್ಠೆ ಅನ್ಯ ಮಠಗಳಿಗೆ ಮಾದರಿಯಾಗಿದೆ ಎಂದು ಪೂಜ್ಯ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಪೂಜ್ಯ ಇಮ್ಮಡಿ ಮುರುಘರಾಜೇಂದ್ರ ಮಹಾಸ್ವಾಮಿಗಳು, ಮಹಾಸಂಸ್ಥಾನ ಶ್ರೀಮಠ, ಮರಿಯಾಲ, ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು, ವಿರಕ್ತಮಠ ಬೇಲೂರು, ಪೂಜ್ಯ ಶಿವಲಿಂಗ ಶಿವಾಚಾರ್ಯರು ಹಾಗೂ ಪೂಜ್ಯ ದಾರುಕಲಿಂಗ ಶಿವಾಚಾರ್ಯರು ಹೆಡಗಾಪುರ ಪೂಜ್ಯರು ಸಮ್ಮುಖ ವಹಿಸಿದ್ದರು.
ನಾಗನಾಥ ಮಾಶೆಟ್ಟೆ ಅವರು ಬಸವಣ್ಣನವರ ಹಾಗೂ ಭಾಲ್ಕಿ ಶ್ರೀಮಠದ ಗುರುಗಳ ಮೂರ್ತಿ ಪೂಜ್ಯರಿಗೆ ಸಮರ್ಪಿಸಿದರು. ಶರಣ ವೈಜಿನಾಥ ಬಿರಾದಾರ ದೆಹಲಿ ಅವರು ಮುಚಳಂಬದಿಂದ ಭಾಲ್ಕಿಯವರೆಗೆ ಅಕ್ಕನಬಳಗದ ಶರಣೆಯರೊಂದಿಗೆ ಆಗಮಿಸಿದ ಬಸವಜ್ಯೋತಿ ಯಾತ್ರೆಗೆ ಸ್ವಾಗತಿಸಲಾಯಿತು. ಅವರಿಂದ ಪೂಜ್ಯರಿಗೆ ಅಮೃತ ಮಹೋತ್ಸವದ ವಿಶೇಷ ಸನ್ಮಾನಿಸಲಾಯಿತು.
ಡಾ.ರಾಜೇಂದ್ರ ಜಾಧವ ಅಧ್ಯಕ್ಷತೆ ವಹಿಸಿದರು.

ಶಂಕರರಾವ ಪಾಟೀಲ, ರಾಜಶೇಖರ ಶಟಕಾರ, ಅಶ್ವಿನ್ ಭೋಸ್ಲೆ, ಬಸವರಾಜ ಚಪಟೆ, ಅಶೋಕ ಚಂದ್ರೆ, ಸಂಗಮೇಶ ಅಣದೂರೆ, ಸೂರ್ಯಕಾಂತ ಅಲ್ಮಾಜೆ, ನಾಗಶೆಟ್ಟಿ ಗಡ್ಡೆ, ಶಿವರಾಜ ಮಲ್ಲೇಶಿ ಮುಂತಾದವರು ಗೌರವ ಅತಿಥಿಗಳಾಗಿ ಆಗಮಿಸಿದರು.
ಶರಣೆ ಜಯಲಕ್ಷ್ಮೀ ದತ್ತುಕುಮಾರ ಕರಕಾಳೆ ನಿರೂಪಿಸಿದರು. ಪಾರ್ವತಿ ಧೂಮ್ಮನಸೂರೆ ಶರಣು ಸಮರ್ಪಣೆ ಮಾಡಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M
