ವಿಜಯಪುರದಲ್ಲಿ ಬಸವ ಜಯಂತಿ: ಮಹಿಳೆಯರ ಬೈಕ್ ರ‍್ಯಾಲಿ

ಬಸವ ಮೀಡಿಯಾ
ಬಸವ ಮೀಡಿಯಾ

ವಿಜಯಪುರ

ಬಸವ ಜಯಂತಿ ಉತ್ಸವದ ಅಂಗವಾಗಿ ವಿಜಯಪುರ ನಗರದಲ್ಲಿ ರವಿವಾರ ನೂರಾರು ಮಹಿಳೆಯರಿಂದ ಭವ್ಯ ಬೈಕ್ ರ್ಯಾಲಿ ನಡೆಯಿತು.

ನಗರದಲ್ಲಿನ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ರ್ಯಾಲಿ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದವರೆಗೆ ಸಾಗಿತು.

ಏಪ್ರಿಲ್ 19 ಮತ್ತು 20ರಂದು ನಡೆಯುತ್ತಿರುವ ಬಸವ ಜಯಂತಿ ಉತ್ಸವದ ಅಂಗವಾಗಿ ಬಸವ ಜಯಂತಿ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾಡಳಿತ ಸಂಯುಕ್ತವಾಗಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು.

ರ್ಯಾಲಿಗೆ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷೆ ಮಹಾದೇವಿ ಗೋಕಾಕ ಹಾಗೂ ಉಪಾಧ್ಯಕ್ಷೆ ಶಶಿಕಲಾ ಕೊಟಗಿ ಚಾಲನೆ ನೀಡಿದರು.

ಭಾರತಿ ನಾವಿ, ಪ್ರತಿಭಾ ಪಾಟೀಲ, ಶೀಲಾ ಬಿರಾದಾರ, ಶ್ವೇತಾ ಹರನಾಳ, ಭಾರತಿ ಪಾಟೀಲ, ಶಾರದಾ ಕೊಪ್ಪ, ಸಂಗೀತಾ ಪೂಜಾರಿ, ಸುಮಾ ಅಂಗಡಿ, ಶ್ರೀದೇವಿ ಪಾಟೀಲ, ಶ್ವೇತಾ ಅಕ್ಕಲಕೋಟ, ಅನುಸೂಯಾ ಬಿರಾದಾರ, ಶಿವಲೀಲಾ ಮನಗೊಂಡ, ರಾಜೇಶ್ವರಿ ಮನಗೂಳಿ, ಅಕ್ಕಮ್ಮ ಮಠ, ನೀತಾ ಸೂಳಿಭಾವಿ, ಶಕುಂತಲಾ ಬಗಲಿ, ಮಂಗಲಾ ಡೊಮ್ಮನಾಳ, ಅನಿತಾ ಕುಮಾರ್, ಶೈಲಾ ಬಸವಪ್ರಭು, ತ್ರಿವೇಣಿ ಬುರ್ಲಿ, ಜಯಶ್ರೀ ಲದ್ದಾರ, ಅಶ್ವಿನಿ ಮಾನೆ, ಪೂರ್ಣಿಮಾ ಯಾದವಾಡ, ಸುನಿತಾ ಬಿರಾದಾರ, ರೇಖಾ ಬಿರಾದಾರ, ಐಶ್ವರ್ಯ ಬಿರಾದಾರ ಸೇರಿದಂತೆ ಮತ್ತಿತರರು ನೇತೃತ್ವ ವಹಿಸಿದ್ದರು.

ರ್ಯಾಲಿಯು ನಗರದಲ್ಲಿ ಸಂಚರಿಸುವ ವೇಳೆ ಬಸವಣ್ಣನವರ ತತ್ವಗಳನ್ನು ಸಾರುವ ಘೋಷಣೆಗಳು ಮೊಳಗಿದವು. ಮಹಿಳೆಯರು ಬೈಕ್‌ಗಳ ಮೇಲೆ ಬಸವಣ್ಣನವರ ಭಾವಚಿತ್ರಗಳು ಹಾಗೂ ಧ್ವಜಗಳನ್ನು ಹಿಡಿದು ಸಂಭ್ರಮದಿಂದ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ವಿ.ಸಿ. ನಾಗಠಾಣ, ಎಸ್.ಎಚ್. ನಾಡಗೌಡ, ಜೆ.ಎಸ್. ಪಾಟೀಲ, ಮ.ಗು. ಯಾದವಾಡ, ಪ್ರಭುಗೌಡ ಪಾಟೀಲ, ಬಸನಗೌಡ ಹರನಾಳ, ಚಂದ್ರಶೇಖರ ಗಂಟೆಪ್ಪಗೋಳ, ರವಿಕುಮಾರ ಬಿರಾದಾರ, ಶರಣು ಕಿರಣಗಿ, ಕಲ್ಲಪ್ಪ ಶಿವಶರಣ, ಲಾಯಪ್ಪ ಇಂಗಳೆ, ದಾನೇಶ ಅವಟಿ, ಜಗದೇವ ಸೂರ್ಯವಂಶಿ, ಶಾಂತವೀರ ಥಾಲಬಾವಡಿ, ವೈ.ಎಚ್. ಲಂಬು ಸೇರಿದಂತೆ ಗಣ್ಯರು, ಬಸವಪರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ಬೈಕ್ ರ್ಯಾಲಿ ಜಯಂತಿಯ ವಿಶೇಷ ಆಕರ್ಷಣೆಯಾಗಿ ಪರಿಣಮಿಸಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *