ಚನ್ನವಡೆಯನಪುರದಲ್ಲಿ ಯುವಕರಿಂದ ಅದ್ಧೂರಿ ಬಸವ ಜಯಂತಿ ಆಚರಣೆ

ಬಿ. ಚನ್ನಪ್ಪ
ಬಿ. ಚನ್ನಪ್ಪ

ಗುಂಡ್ಲುಪೇಟೆ :

ತಾಲೂಕಿನ ಚನ್ನವಡಯನಪುರ ಗ್ರಾಮದಲ್ಲಿ ಯುವ ಸಮುದಾಯವು ಬಸವಣ್ಣನವರ ಅದ್ಧೂರಿ ಜಯಂತಿ ಆಚರಣೆಯ ಮುಂದಾಳತ್ವ ವಹಿಸಿದರು.

ಬಸವಣ್ಣನವರ ವಿಚಾರವಂತಿಕೆಯ ಕಡೆ ಯುವಕರು ಆಕರ್ಷಿತರಾಗುತ್ತಿರುವುದು ಸಂತಸ ತಂದಿದೆ.

ವೀರಗಾಸೆ, ಡೊಳ್ಳು, ನಂದಿ ಕಂಬಗಳು, ತಮಟೆ ಇನ್ನಿತರ ಕಲಾ ತಂಡಗಳೊಡನೆ ಬಿಳಿಯ ವಸ್ತ್ರಧಾರಿಗಳಾಗಿ  ಗ್ರಾಮದ ತುಂಬಾ ಅಲಂಕರಿಸಿದ ಟ್ರಾಕ್ಟರ್‌ನಲ್ಲಿ ಬಸವಣ್ಣನವರ ಪುತ್ಥಳಿಯನ್ನಿಟ್ಟು ಮೆರವಣಿಗೆ ನಡೆಸಿದರು.

ಯುವ ಸಮುದಾಯ ಈ ಸಂಭ್ರಮದ ಬಸವ ಜಯಂತಿ ಆಚರಣೆಗೆ ಊರಿನ ಮುಖಂಡರೆಲ್ಲ ಸಹಕಾರ ನೀಡಿದ್ದು ಸಂತಸ ತಂದಿದೆ.

ಇತ್ತೀಚಿಗೆ ಎಲ್ಲರಲ್ಲೂ ಬಸವಣ್ಣ ನಮ್ಮವ ಎಂಬ ಭಾವ ಮನೆ ಮಾಡುತ್ತಿರುವುದು ಸಂತಸವನುಂಟು ಮಾಡಿದೆ.

ಪ್ರತಿವರ್ಷವೂ ತಾಲೂಕಿನಿಂದ ತಾಲೂಕಿಗೆ ಬಸವ ಜಯಂತಿ ವಿಸ್ತಾರಗೊಳ್ಳುತ್ತಿರುವುದು ಬಸವಪ್ರಜ್ಞೆ ಮೂಡುತ್ತಿರುವ ಸಂದೇಶವಾಗಿದೆ.

ಎಲ್ಲೆಲ್ಲೂ ಬಸವ ಧ್ವಜಗಳ ಹಾರಾಟ ರಾರಾಜಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಗ್ರಾಮದ ಗೌಡಿಕೆ, ಮುಖಂಡರುಗಳು, ಯಜಮಾನರುಗಳು, ಗ್ರಾಮ ಪಂಚಾಯಿತಿ ಸದಸ್ಯರುಗಳು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ.

ಊರಿನ ಮುಖಂಡರಾದ ಮೇಗಲಟ್ಟಿ ಗುರುಸ್ವಾಮಿ, ನಿವೃತ್ತ ಕಂದಾಯ ಇಲಾಖೆಯ ಮಹದೇವಪ್ಪ, ಮೆಗಲಟ್ಟಿ ಲಿಂಗಪ್ಪ, ಓಂಕಾರ ಸಿದ್ದೇಶ್ವರ ದೇವಸ್ಥಾನದ ಟ್ರಸ್ಟಿ ಅಧ್ಯಕ್ಷರಾದ ರಾಜು ಇವರುಗಳ ಸಹಕಾರದಿಂದ ಮತ್ತು ಯುವ ಸಮುದಾಯದ ಆಟೋಮೂರ್ತಿ, ಮಹೇಂದ್ರ, ಕುಮಾರ ಹಾಗೂ ಮಹದೇಶ್ವರ ಸಂಘದ ಎಲ್ಲಾ ಸದಸ್ಯರು ಸಹಕಾರ ನೀಡಿದರು.

ನಂಜನಗೂಡಿನ ಬ್ರಾಂಡ್ ನ್ಯೂ ಗಿಫ್ಟ್ ಸೆಂಟರ್ ಮಾಲೀಕ ಆನಂದ ಭಾಗವಹಿಸಿದರು.

ಕಾರ್ಯಕ್ರಮದ ಮುಂದಾಳತ್ವದ ಜವಾಬ್ದಾರಿಯನ್ನು ನಾಗೇಂದ್ರ, ನವೀನ್ ಮತ್ತು ತಂಡ ವಹಿಸಿತ್ತು. ಅವರಿಗೆ ಯುವಕರು ಒಂದೊಂದು ಕಾರ್ಯವನ್ನ ವಹಿಸಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಪೂರ್ಣ ಪ್ರಸಾದದ ವ್ಯವಸ್ಥೆ ರಾಜಕಾರಣಿ, ಉದ್ಯಮಿ ಜಯರಾಮು ಅವರ ದಾಸೋಹ ಸೇವೆಯಾಗಿತ್ತು.

ಎಲ್ಲರ ಮನಸ್ಸಿನಲ್ಲಿ ಬಸವಣ್ಣನವರು, ಶರಣರ ವಿಚಾರ ನೆಲೆಗೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಗ್ರಾಮಸ್ಥರ ಮಾತಾಡುವುದ ಕೇಳಿ ಬಂದಿತು.‌

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *

ಅಧ್ಯಕ್ಷರು, ಶ್ರೀಗುರುಬಸವೇಶ್ವರ ಸೇವಾ ಟ್ರಸ್ಟ್, ನಂಜನಗೂಡು