‘ಬಸವಣ್ಣನವರನ್ನು ವೈದಿಕತೆಯ ತೆಕ್ಕೆಗೆ ತೆಗೆದುಕೊಳ್ಳುವ ಹುನ್ನಾರ ಆರೆಸ್ಸೆಸ್ ನಡೆಸಿದೆ’

ರವಿ ಪಾಪಡೆ
ರವಿ ಪಾಪಡೆ

ಬಸವ ಮೂರ್ತಿ ಮುಂದೆ ಆರೆಸ್ಸೆಸ್ ಗೀತೆ ಹಾಡಿರುವ ವಿವಾದಕ್ಕೆ ಬಂದಿರುವ ಪ್ರತಿಕ್ರಿಯೆ

ಬಸವ ಕಲ್ಯಾಣ

ಬಸವಣ್ಣನವರ ಮೂರ್ತಿ ಎದುರು ಆರೆಸ್ಸೆಸ್ ಪ್ರಾರ್ಥನಾ ಗೀತೆ ಹಾಡಿ ಅದರ ವಿಡಿಯೋ ವೈರಲ್ ಮಾಡುವುದು ಅವರ ಉದ್ದೇಶ. ಆ ಕಾರ್ಯಕ್ರಮದಲ್ಲಿ ಶಾಸಕರು ಸೇರಿದಂತೆ ಜಿಲ್ಲೆಯ ಬಿಜೆಪಿ ಮುಖಂಡರು ಭಾಗವಹಿಸಿದ್ದನ್ನು ತೋರಿಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ವೈದಿಕ ಸಂಪ್ರದಾಯ ಧಿಕ್ಕರಿಸಿ ಹೊರಬಂದು ಹೊಸ ಧರ್ಮ ಕಟ್ಟಿದವರು ಬಸವಣ್ಣ. ಈಗ ಅವರನ್ನು ಮತ್ತೆ ವೈದಿಕತೆಯ ತೆಕ್ಕೆಗೆ ತೆಗೆದುಕೊಳ್ಳುವ ಹುನ್ನಾರ ಆರೆಸ್ಸೆಸ್ ನಡೆಸಿದೆ. ಅದರ ಭಾಗವಾಗಿಯೇ ಈ ಪ್ರಯತ್ನ ನಡೆದಿದೆ. ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶ ನಡೆಸುತ್ತಿರುವುದೂ ಇದೇ ಕಾರಣಕ್ಕೆ.

ಇವರಿಗೆ ನೇರವಾಗಿ ಬಸವಣ್ಣನವರನ್ನು ವಿರೋಧಿಸಲು ಬರುವುದಿಲ್ಲ. ಅದಕ್ಕೆ ಬೇರೆ ಬೇರೆ ರೂಪದಲ್ಲಿ ಅವರನ್ನು ವೈದಿಕಕರಣಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇದು 12ನೇ ಶತಮಾನದ ನಂತರದಿಂದಲೇ ನಡೆದು ಬಂದಿದೆ. ಈ ದಾರಿತಪ್ಪಿಸುವ ಕೆಲಸಗಳನ್ನು ರಾಷ್ಟ್ರೀಯ ಬಸವದಳ ತೀವ್ರವಾಗಿ ಖಂಡಿಸುತ್ತದೆ.

ನಾವು ಲಿಂಗಾಯತರಿಗೆ ಜಾಗೃತಿ ಮೂಡಿಸಬೇಕು. ಎಲ್ಲರಲ್ಲೂ ಈ ಹುನ್ನಾರದ ಅರಿವು ಮೂಡಿಸಬೇಕು. ಭಾರತ ಬಹು ಸಂಸ್ಕೃತಿಯ ದೇಶ ಅವರವರ ಸಂಸ್ಕೃತಿ ಆಚರಿಸಲು ಸಂವಿಧಾನಾತ್ಮಕವಾದ ಹಕ್ಕಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *

ರಾಜ್ಯ ಸಂಘಟನಾ ಕಾರ್ಯದರ್ಶಿ, ರಾಷ್ಟ್ರೀಯ ಬಸವ ದಳ