ಗಂಗಾವತಿ:
ಪುರಾಣಗಳಲ್ಲಿ ವೈಭವೀಕರಣ ಇದೆ, ಉಪನ್ಯಾಸಗಳಲ್ಲಿ ವೈಚಾರಿಕತೆ ಇದೆ, ಪ್ರವಚನದಲ್ಲಿ ಹೇಗೆ ಬದುಕಬೇಕು ಎಂಬ ಸಂದೇಶವಿದೆ. ಫ. ಗು. ಹಳಕಟ್ಟಿ ಶರಣರು “ವಚನ ಪಿತಾಮಹ” ಆದರೆ, ಲಿಂಗಾನಂದ ಸ್ವಾಮೀಜಿಯವರು “ಪ್ರವಚನ ಪಿತಾಮಹ” ಎಂದು ಶರಣ ಸಾಹಿತಿಗಳು, ಚಿಂತಕರು ಆದ ಡಾ. ಗಂಗಮ್ಮ ಸತ್ಯಂಪೇಟೆ ಅವರು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಬಸವದಳ ಬಸವ ಮಂಟಪದಲ್ಲಿ ಆಯೋಜಿಸಿದ್ದ ಹಳಕಟ್ಟಿ ಶರಣರ, ಲಿಂಗಾನಂದ ಸ್ವಾಮಿಗಳ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಚುನಾವಣೆ ಸಮಯದಲ್ಲಿ ಮತ್ತು ಸಂಪುಟ ರಚನೆಯಲ್ಲಿ ಲಿಂಗಾಯತರು ಬಹುಸಂಖ್ಯಾತರಾಗುತ್ತಾರೆ. ನಂತರದಲ್ಲಿ ಅವರು ಅಲ್ಪಸಂಖ್ಯಾತರಾಗುತ್ತಾರೆ ಎoದು ಲಿಂಗಾನಂದ ಸ್ವಾಮಿಗಳ, ಮಾತಾಜಿಯವರ ಕುರಿತು ಹಲವಾರು ವಿಷಯಗಳನ್ನು ತಿಳಿಸಿದರು.

ಉಪನ್ಯಾಕರಾದ ಬಸವಪ್ರಸಾದ ಕಟಗಿಹಳ್ಳಿ ಅವರು ಫ. ಗು. ಹಳಕಟ್ಟಿಯವರ ಕುರಿತು ಸಮಗ್ರವಾದ ಮಾಹಿತಿಕೊಡುತ್ತಾ, ಒಮ್ಮೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಬಿದ್ದು ಮೂಳೆ ಮುರಿದು ವೈದ್ಯರು ಆರು ತಿಂಗಳು ವಿಶ್ರಾಂತಿ ಪಡೆಯಬೇಕೆಂದಾಗ ಹಳಕಟ್ಟಿಯವರು ಬಹಳ ಖುಷಿಪಟ್ಟರಂತೆ. ಕಾರಣ ಆ ಸಮಯದಲ್ಲಿ ವಚನಗಳ ಕುರಿತು ಹೆಚ್ಚಿನ ಅಧ್ಯಯನ ಮಾಡಬಹುದೆಂದು.
ಮೂರು ಗಂಡುಮಕ್ಕಳು ಹಾಗು ನಾಲ್ಕು ಹೆಣ್ಣುಮಕ್ಕಳಲ್ಲಿ ಆರು ಮಕ್ಕಳು ವಿಧಿವಶರಾದಾಗಲು ವಚನ ಸಂಶೋಧನೆಯ ಉತ್ಸಾಹ ಅವರು ಕಳೆದುಕೊಳ್ಳಲಿಲ್ಲ ಎಂದು ಗದ್ಗದಿತರಾದರು.

ರಾಯಚೂರು ಬಸವ ಉತ್ಸವದ ರೂವಾರಿಗಳಾದ ಸಿದ್ದರಾಮಪ್ಪ ಪಾಟೀಲ ಅವರು ದ್ವಜಾರೋಹಣಗೈದು ಬಸವದಳದ ಕುರಿತು ಮೆಚ್ಚುಗೆ ಸೂಚಿಸಿದರು.
ಲಿಂಗಾಯತ ಹಡಪದ ಅಪ್ಪಣ್ಣ ಸಮಾಜದ ಮುಖಂಡರಾದ ಸರಿಗಮ ಹನುಮಂತಪ್ಪ ಇವರು ಇಂದಿನ ನಮ್ಮ ಸಂಸ್ಕಾರಕ್ಕೆ ಇದೇ ವೇದಿಕೆ ಕಾರಣವೆಂದರು.
ದಿಲೀಪಕುಮಾರ ವಂದಾಲ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
ವಿಶೇಷವಾಗಿ ಇದೇ ತಿಂಗಳು 25, 26 ರಂದು ರಾಯಚೂರಲ್ಲಿ ನಡೆಯುವ 3ನೇ ಬಸವ ಉತ್ಸವ-2026 ರ ಬಿತ್ತಿಪತ್ರ ಬಿಡುಗಡೆ ಮಾಡಲಾಯಿತು.
ಯಮನೂರಪ್ಪ ಹಳ್ಳೇರ (ಬಸವಪ್ರಸಾದ), ಚನ್ನಬಸವ ಬಿ. ಕೆ., ವೀರೇಶಪ್ಪ ಕುಂಬಾರ, ಚನ್ನಬಸಮ್ಮ ಕಂಪ್ಲಿ ವಚನ ಪ್ರಾರ್ಥನೆ ಮಾಡಿದರು.
ಕಾರ್ಯದರ್ಶಿ ವಿರೇಶ ರಡ್ಡಿ ಅವರಿಂದ ಪ್ರಾಸ್ತಾವಿಕ ನುಡಿ, ಬಸವಜ್ಯೋತಿ ಸ್ವಾಗತ ಹಾಗು ಪರಿಚಯ, ವಿನಯಕುಮಾರ ಅಂಗಡಿ ನಿರೂಪಿಸಿ, ಸುಳೇಕಲ್ಲನ ಬಸವರಾಜ ಮಾಲಿಪಾಟೀಲ ಶರಣ ಸಮರ್ಪಣೆಗೈದರು.

ಹಿರಿಯರಾದ ಕೊಪ್ಪಳ ಬಸವದಳ ಸ್ಥಾಪಕ ಶರಣೆ ಲಲಿತಮ್ಮ ಬ. ಬನ್ನಿಕೊಪ್ಪ, ಕಂಪ್ಲಿಯ ಹೇಮಯ್ಯಸ್ವಾಮಿ ರುದ್ರಯ್ಯನವರು, ಅಶೋಕ ಕುಕನೂರ, ಹೊಸಪೇಟೆಯ ಸೋ. ದಾ. ವಿರುಪಾಕ್ಷಗೌಡ ಹಾಗು ಕೆ. ವೀರೇಶಪ್ಪ, ಪಂಪಾಪತಿ ಚವಡಿ, ಅಮರೇಗೌಡ ಜಾನೂರು, ಬಸಮ್ಮ ಕೆ, ಸಂಗಪ್ಪ ಗಾಜಿ, ರಾಜಾಸಾಬ ನೂರಮಹ್ಮದ ಇಟಗಿ ಇನ್ನೂ ಹಲವಾರು ಜನರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಹಿಂದಿನ ಶಾಸಕರ ಅನುದಾನದಲ್ಲಿ ನಿರ್ಮಿತವಾಗಿರುವ ಹಾಗು ಈಗಿನ ಹಾಲಿ ಶಾಸಕರ ಮುಂದಿನ ವಿಸ್ತರಣೆಯ ಅನುದಾನ ನೀಡಿದ ಮುಂದುವರೆದ ಕೆಲಸದ ಪೂಜೆಯನ್ನು ಅಧ್ಯಕ್ಷರಾದ ದಿಲೀಪಕುಮಾರ ವಂದಾಲ ನೆರವೇರಿಸಿದರು.
