ಫ.ಗು. ಹಳಕಟ್ಟಿ ಸೇವೆ ಸ್ಮರಣೀಯ: ಜಯಶ್ರೀ ಚಟ್ನಳ್ಳಿ

ಕಲಬುರಗಿ:

ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯಕ್ಕೆ ಸ್ಮರಣಾರ್ಹ ಕೊಡುಗೆ ನೀಡಿದ್ದಾರೆ ಎಂದು ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ ನುಡಿದರು.

ಗುರುಬಸವ ಸೇವಾ ಪ್ರತಿಷ್ಠಾನದ 5ನೇ ವಾರ್ಷಿಕೋತ್ಸವ ಹಾಗೂ ಲಿಂಗೈಕ್ಯ ಬಸವರಾಜ ನಾಗೂರ ಅವರ 6ನೇ ಸ್ಮರಣೋತ್ಸವ ನಿಮಿತ್ತ ನಗರದ ಬಸವ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕೆಲಸವನ್ನು ಒಬ್ಬ ವ್ಯಕ್ತಿಯಾಗಿ ವಚನ ಸಂಶೋಧನೆ, ವಚನ ಪರಿಷ್ಕರಣೆ ಮಾಡಿ ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಮಹದುಪಕಾರ ಮಾಡಿದ್ದಾರೆ. ಅವರ ಋಣ ತೀರಿಸಲಾಗದು ಎಂದು ಸ್ಮರಿಸಿದರು.

ಬೀದರನ ಶರಣ ಸಾಹಿತಿ ಪ್ರಕಾಶ ಗಂಧಿಗುಡಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಾದಿ ಶರಣರ ತತ್ವಗಳು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಮಾರ್ಗದರ್ಶಿಯಾಗಿವೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಗುರುಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶರಣಬಸಪ್ಪ ನಾಗೂರ ಮಾತನಾಡಿ, ಶರಣರ ಆದರ್ಶಗಳು ಸಮಾಜಕ್ಕೆ ಜೀವಾಳವಾಗಿದ್ದು, ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಬಸವಕಲ್ಯಾಣದ ಗುಣತೀರ್ಥವಾಡಿಯ ಪೂಜ್ಯ ಬಸವಪ್ರಭು ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

ಕಾರ್ಯಕ್ರಮದಲ್ಲಿ ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿಯ ಗೌರವಾಧ್ಯಕ್ಷ ಬಾಬುರಾವ ಶೇರಿಕಾರ, ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ, ಕಾಯಕ ರತ್ನ ಪ್ರಶಸ್ತಿ ಪುರಸ್ಕೃತ ಬಸವರಾಜ ಧೂಳಾಗುಂಡಿ ಹಾಗೂ ನಿಷ್ಪತ್ತಿ ಬಸವರಾಜ ಪರಶೆಟ್ಟಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಮಾತಾಜಿ ಎಂ. ಗೋಳಾ, ಬಸವರಾಜ ಪರಶೆಟ್ಟಿ, ರವೀಂದ್ರ ಶಾಬಾದಿ ಸೇರಿದಂತೆ ಪ್ರತಿಷ್ಠಾನದ ಪದಾಧಿಕಾರಿಗಳು ಹಾಗೂ ಸದಸ್ಯರಾದ ಮಹಾದೇವಿ ಭರಶೆಟ್ಟಿ, ವಿಜಯಲಕ್ಷ್ಮೀ ಪಾಟೀಲ, ಕಮಲಾಬಾಯಿ ಶಾಬಾದಿ, ಶಾರದಾ ಜಾಕಾ, ಕವಿತಾ ನಾಗೂರ, ಶಿವಲಿಂಗಮ್ಮ ನಾಗೂರ, ಶಿವಕುಮಾರ ಶಾಬಾದಿ, ಶಿವಶಂಕರ ನಾಗೂರ ಹಾಗೂ ಬಸವಪ್ರಭು ಶಾಬಾದಿ ಉಪಸ್ಥಿತರಿದ್ದರು.

ಕಾರ್ಯಕ್ರಮವು ಶರಣರ ವಚನ ಗಾಯನ, ಬಸವ ತತ್ವಗಳ ಪ್ರಚಾರ ಹಾಗೂ ಸಮಾಜಮುಖಿ ಸೇವೆಯ ಸಂಕಲ್ಪದೊಂದಿಗೆ ಯಶಸ್ವಿಯಾಗಿ ನೆರವೇರಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *