ನಾಗಪುರದಲ್ಲಿ ಬೌದ್ಧ ಧಮ್ಮ ಸ್ವೀಕರಿಸಿದ ಗದಗಿನ ದಲಿತ ಕುಟುಂಬಗಳು

ಮುತ್ತು ಬಿಳೆಯಲಿ
ಮುತ್ತು ಬಿಳೆಯಲಿ

ಗದಗ

ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರು 1956 ಅಕ್ಟೋಬರ್ 14ರ ವಿಜಯ ದಶಮಿಯದಿನ ತಮ್ಮ ಐದು ಲಕ್ಷ ಅನುಯಾಯಿಗಳೊಂದಿಗೆ ನಾಗಪುರದಲ್ಲಿ ಬೌದ್ಧ ಧಮ್ಮವನ್ನು ಸ್ವಿಕರಿಸಿದರು.

ಆಗಿನಿಂದ ಪ್ರತಿ ವರ್ಷ ವಿಜಯ ದಶಮಿ ದಿನ ಭಾರಿ ಸಂಖ್ಯೆಯಲ್ಲಿ ದೇಶ,ವಿದೇಶಗಳಿಂದ ಅಂಬೇಡ್ಕರ ಅವರ ಅನುಯಾಯಿಗಳು ನಾಗಪುರದಲ್ಲಿ ಸೇರುತ್ತಾರೆ.

ಹಾಗೇಯೆ ಪ್ರತಿ ವರ್ಷವೂ ಗದಗ ಜಿಲ್ಲೆಯಿಂದ ನೂರಾರು ಜನ ನಾಗಪುರದ ಧಮ್ಮ ದೀಕ್ಷಾ ಭೂಮಿಗೆ ಬೇಟಿ ನೀಡುತ್ತಾರೆ. ಈ ಬಾರಿ 58 ನೇ ವರ್ಷದ ಧಮ್ಮ ಪರಿವರ್ತನಾ ದಿನಾಚರಣೆಗೆ ಗದಗ ಜಿಲ್ಲೆಯಿಂದ ಸುಮಾರು 160 ಜನ ನಾಲ್ಕು ಬಸ್ ಗಳ ಮೂಲಕ ಭಾಗವಹಿಸಿದ್ದರು.

ಈ ವರ್ಷ ಧಮ್ಮ ಪರಿವರ್ತನಾ ದಿನದಂದು ಡಾ.ಬಾಬಾ ಸಾಹೇಬರ ಆಶಯದಂತೆ ಗದಗ ಜಿಲ್ಲೆಯ ದಲಿತ ಮುಖಂಡರಾದ ಶರೀಫ ಬಿಳೆಯಲಿ, ಡಾ.ರಾಮಚಂದ್ರ ಹಂಸನೂರ ಅವರ ಕುಟುಂಬ, ಮುಂಡರಗಿ ತಾಲೂಕಿನ ಡೋಣಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶ ಹೊಸಮನಿ, ಬಾಲೇಹೊಸೂರಿನ ಕೇಶವ ಕಟ್ಟಿಮನಿ, ಮಂಜುನಾಥ ಚಲವಾದಿ, ಸಂಜಯ ಕನಕಮ್ಮನವರ ಅವರುಗಳು ದೇಶದ ವಿವಿಧ ಬೌದ್ಧ ಕೇಂದ್ರಗಳ ಬಂತೇಜಿ ಅವರ ಸಮ್ಮುಖದಲ್ಲಿ ಬೌದ್ಧ ಧಮ್ಮವನ್ನು ಸ್ವೀಕಾರ ಮಾಡಿದರು.

ಈ ಧಮ್ಮ ದೀಕ್ಷಾ ಸ್ವೀಕಾರ ಸಮಾರಂಭಕ್ಕೆ ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರ ಮೊಮ್ಮಗ ಭೀಮರಾವ್ ಯಶವಂತರಾವ ಅಂಬೇಡ್ಕರ್ ಅವರು ಉಪಸ್ಥಿತರಿದ್ದರು. ಅವರು ಗದಗ ಜಿಲ್ಲೆಯವರಿಗೆ ಧಮ್ಮ ದೀಕ್ಷಾ ಪ್ರಮಾಣ ಪತ್ರವನ್ನು ನೀಡಿದರು.

ಈ ಸಂದರ್ಭದಲ್ಲಿ ಗದಗ ಜಿಲ್ಲೆಯ ದಲಿತ ಮುಖಂಡರಾದ ಆನಂದ ಶಿಂಗಾಡಿ, ಮುತ್ತು ಬಿಳೆಯಲಿ, ಯಲ್ಲಪ್ಪ ರಾಮಗಿರಿ, ಮಂಜುನಾಥ ಗೊಂದಿಯವರ, ಅನಂತ ಕಟ್ಟಿಮನಿ, ರಮೇಶ ಕೋಳೂರು, ಬಸವರಾಜ ಚಲವಾದಿ, ಹುಚ್ಚಪ್ಪ ಚಲವಾದಿ, ಸತ್ಯಪ್ಪ ಚಲವಾದಿ ಹಾಗೂ ಗದಗ ಜಿಲ್ಲೆಯ ಹಲವಾರು ಜನ ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *