ರಂಭಾಪುರಿ ಶ್ರೀಗಳ ಕ್ಷಮೆ ಕೇಳಿದ್ದು ಸರಿ ಎಂದು ವಿರೋಧಿಗಳೂ ಈಗ ಒಪ್ಪಿದ್ದಾರೆ: ಡಿಕೆಶಿ

ಬಸವ ಮೀಡಿಯಾ
ಬಸವ ಮೀಡಿಯಾ

‘ಅಜ್ಜನವರ ಸೂಚನೆಯಂತೆ ಮೂರು ದಿನಗಳಲ್ಲಿ ಮಳೆಯಾಯಿತು’

ಬೆಂಗಳೂರು

ಲಿಂಗಾಯತ ಧರ್ಮ ಹೋರಾಟದ ನಂತರ ತಾವು ರಂಭಾಪುರಿ ಶ್ರೀಗಳ ಕ್ಷಮೆ ಕೇಳಿದ್ದು ಸರಿ ಎಂದು ವಿರೋಧಿಗಳೂ ಈಗ ಒಪ್ಪಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಮಾಗಡಿ ಮುಖ್ಯರಸ್ತೆಯ ಮಾನವ ಧರ್ಮ ಮಂಟಪದಲ್ಲಿ ಹಮ್ಮಿಕೊಂಡಿದ್ದ ಡಾ. ವೀರಸೋಮೇಶ್ವರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದರು.

“ವೀರಶೈವ ಧರ್ಮದ ವಿಚಾರದಲ್ಲಿ ಇಡೀ ರಾಜ್ಯದಲ್ಲಿ ಒಂದು ದೊಡ್ಡ ಚರ್ಚೆಯಾಯಿತು. ನಮ್ಮ ಸರಕಾರ ತೆಗೆದುಕೊಂಡ ತೀರ್ಮಾನದಿಂದ ಬಹಳ ಜನ ಸಿಟ್ಟಿಗೆದ್ದರು.

ಆಗ ನಾನು ಲಕ್ಷ್ಮೇಶ್ವರಕ್ಕೆ ಹೋಗಿ ಶ್ರೀಗಳ ಪಾದಕ್ಕೆ ಬಿದ್ದು ‘ನಾವು ತಪ್ಪು ಮಾಡಿದ್ದೇವೆ ಗುರುಗಳೇ ನಮ್ಮನ್ನು ಕ್ಷಮಿಸಬೇಕು,’ ಅಂತ ಕೇಳಿದೆ.

ಆಗ ಬೇಕಾದಷ್ಟು ಜನ ಟೀಕೆ ಮಾಡಿದ್ರು. ಆಗ ಟೀಕೆ ಮಾಡಿದ್ದ ವಿರೋಧಿಗಳೂ ಈಗ ನಾನು ಕ್ಷಮಾಪಣೆ ಕೇಳಿದ್ದು ಸತ್ಯ (ಸರಿ) ಎಂದು ಒಪ್ಪಿಕೊಂಡಿದ್ದಾರೆ,” ಎಂದು ಶಿವಕುಮಾರ್ ಹೇಳಿದರು.

“ಟೀಕೆಗಳೆಲ್ಲ ಸಾಯುತ್ತವೆ, ನಮ್ಮ ಸಾಧನೆ ಮಾತ್ರ ಉಳಿಯುತ್ತೆ,” ಎಂದರು.

ತಮ್ಮ ಆರಾಧ್ಯ ದೈವ ಗಂಗಾಧರ ಅಜ್ಜನವರನ್ನು ಸ್ಮರಿಸಿಕೊಂಡು ಭಾಷಣ ಶುರು ಮಾಡಿದ ಶಿವಕುಮಾರ್ ತಮಿಳುನಾಡಿಗೆ ನೀರು ಬಿಡುವ ವಿಷಯದಲ್ಲಿ ಬಹಳ ವಿರೋಧ ಬಂದಿತು. ಆಗ ಅಜ್ಜ ಮೂರು ದಿನಗಳಲ್ಲಿ ಉತ್ತರ ಸಿಗುತ್ತದೆ ಎಂದು ಧೈರ್ಯ ಕೊಟ್ಟರು. ಅದಕ್ಕೆ ತಕ್ಕಂತೆ ಈಗ ಮಳೆಯಾಗಿದೆ, ತಡೆಯಬೇಕೆಂದರೂ ನಿಲ್ಲಿಸಲಾಗದಷ್ಟು ನೀರು ಬಂದಿದೆ, ಎಂದರು.

“ರಂಭಾಪುರಿ ಮಠ ಕೇವಲ ಒಂದು ವರ್ಗ ಜಾತಿಗಲ್ಲ ಇಡೀ ಮಾನವ ಜಾತಿ ಧರ್ಮಕ್ಕೆ ಸೇರಿದ ಮಠ. ಎಲ್ಲಾ ವರ್ಗದ ಜನಕ್ಕೆ ಪಂಚ ಪೀಠಗಳು ಮಾರ್ಗದರ್ಶನ, ನೆಮ್ಮದಿ, ಶಾಂತಿ ನೀಡುತ್ತಿವೆ,” ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಯಡಿಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶಾಸಕರಾದ ಎಸ್.ಟಿ ಸೋಮಶೇಖರ್, ವೀಣಾ ಕಾಶಪ್ಪನವರ, ಕೆ‌.ಪಿ ನಂಜುಂಡಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
3 Comments
  • ರಂಭಾಪುರಿ ಶ್ರೀಗಳನ್ನು ಮಹದಾಯಿ ನದಿ ಬಗ್ಗೆ ಕೇಳಿ ಪರಿಹಾರ ಹೇಳಿರಿ K D ಶಿವಕುಮಾರ ಅವರೇ.
    ಕೃಷ್ಣಾ ನದಿ ಡ್ಯಾಂ ಎತ್ತರಿಸುವ ಪರಿಹಾರ ಏನು K D ಯವರೇ ❓
    ಬೆಳಗಾವಿ ಇಂದ ಹಿಡಿದು ಲಾತುರ ವರೆಗೆ ಕನ್ನಡಿಗರು ಇದ್ದಾರೆ. ಆ ಭೂಮಿ, ಅತ್ತ ಕಾಸರಗೋಡು ಎಂಪಿ ಕ್ಷೇತ್ರವೆಲ್ಲ ಕನ್ನಡ ಭೂಮಿ, ಕರ್ನೂಲ್ ನಿಂದ ಶ್ರೀಶೈಲ ವರೆಗಿನ ಭೂಮಿ ಕರ್ನಾಟಕಕ್ಕೆ ಕೇಳಲು ಆಶೀರ್ವಾದ ಪಡೆದು ಸಮಸ್ಯೆ ಪರಿಹರಿಸಿರಿ
    ಮುಖ್ಯ ಮಂತ್ರಿಗಳೇ.
    ನಿಮ್ಮ ಅಜ್ಜಯ್ಯನ ಜಿಗುಟು ಪರೀಕ್ಷೆ ಆಗಿ ಬಿಡಲಿ.

  • Evaru tamma bayinda nudidudellau aguttadendare mele helidahage edeekarnatakavannu ondu madali nodona evarabayiya mahime!

  • ಪೂಜ್ಯರು ಹೇಳಿದಂತೆಯೇ ನಡೆಯಯುವುದಾದರೆ ದೇಶದಲ್ಲಿ ಇರುವ ತಾರತಮ್ಯ ಕೋಮುವಾದಿ ಮನೋವ್ಯಾದಿಯನ್ನು ನಿವಾರಿಸಿ.

Leave a Reply

Your email address will not be published. Required fields are marked *