ಪ್ರತಿ ಭಾನುವಾರ ತನಿಖಾಧಿಕಾರಿಯ ಮುಂದೆ ಹಾಜರಾತಿಯನ್ನು ದಾಖಲಿಸಬೇಕು.
ಬೆಂಗಳೂರು
ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಅವಹೇಳನ ಮಾಡಿರುವ ಆರೋಪ ಎದುರಿಸುತ್ತಿರುವ ರವಿ ಹಂಜ್ ಅಲಿಯಾಸ್ ರವಿ ಹಂಜಗಿಮಠ ಹಾಗೂ ‘ಬಸವ ಮಂಟಪ‘ ಪುಸ್ತಕದ ಪ್ರಕಾಶಕ ಪತ್ರಕರ್ತ ವಿಶ್ವೇಶ್ವರ ಭಟ್ಟರಿಗೆ ನಗರದ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಇಬ್ಬರೂ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನಗರದ 56ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಮೋಹನ್ ಪ್ರಭು ಬುಧವಾರ ಪ್ರಕಟಿಸಿದರು.
ಷರತ್ತುಗಳು
ಅರ್ಜಿದಾರರು ಈ ಆದೇಶ ಹೊರಬಿದ್ದ ದಿನಾಂಕದಿಂದ 15 ದಿನಗಳ ಒಳಗಾಗಿ ತನಿಖಾಧಿಕಾರಿ ಮುಂದೆ ಹಾಜರಾಗಿ, ತಮ್ಮ ವೈಯಕ್ತಿಕ ವಿವರಗಳನ್ನು ಒದಗಿಸಬೇಕು.
₹1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಜಾಮೀನುದಾರರನ್ನು ಒದಗಿಸಬೇಕು.
ಪ್ರತಿ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ನಡುವೆ ತನಿಖಾಧಿಕಾರಿಯ ಮುಂದೆ ಹಾಜರಾಗಿ, ಹಾಜರಾತಿಯನ್ನು ದಾಖಲಿಸಬೇಕು.
ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಅನುಮತಿಯಿಲ್ಲದೆ ನ್ಯಾಯವ್ಯಾಪ್ತಿ ಪ್ರದೇಶದಿಂದ ಹೊರಗೆ ಹೋಗಬಾರದು.
ಸಾಕ್ಷ್ಯ ತಿರುಚಬಾರದು.
ವಕೀಲರ ವಾದ
ಬಸವ ಮಂಟಪ ಕೃತಿ ವಿವಾದ ಸಂಬಂಧ ಎಫ್ ಐ ಆರ್ ದಾಖಲಾದ ಕಾರಣ ಬಂಧನ ಭೀತಿಯಲ್ಲಿದ್ದ ರವಿ ಹಂಜ್ ಹಾಗೂ ವಿಶ್ವೇಶ್ವರ ಭಟ್ 56 ಸಿಸಿಎಚ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ರವಿ ಹಂಜ್ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಾಡಿದ್ದರು.
ಜಾಮೀನು ಅರ್ಜಿ ವಿಚಾರಣೆ ವೇಳೆ ಲೇಖಕರ ಪರ ವಕೀಲರು ವಾದ ಮಂಡಿಸಿ, ಈ ಕೃತಿಯು ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹವಾಗಿದೆ.
ಬಿ.ಎಲ್. ರೈಸ್ ಅವರ ‘ಮೈಸೂರು ಗೆಜೆಟಿಯರ್’ ಹಾಗೂ ‘ಬಸವರಾಜದೇವರ ರಗಳೆ’ ಸೇರಿದಂತೆ ಲಭ್ಯವಿರುವ ಹಳೆಯ ಐತಿಹಾಸಿಕ ಆಕರ ಗ್ರಂಥಗಳನ್ನು ಆಧರಿಸಿ ಸಂಶೋಧನಾತ್ಮಕವಾಗಿ ಬರೆಯಲಾಗಿದೆ. ಯಾರೊಬ್ಬರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ದುರುದ್ದೇಶ ಇದರಲ್ಲಿ ಇರಲಿಲ್ಲ ಎಂದು ತಿಳಿಸಿದರು.
ಆರೋಪಿಗಳು ಸಂಪೂರ್ಣ ಎಫ್ ಐ ಆರ್ ರದ್ದು ಕೋರಿ ಹೈಕೋರ್ಟ್ಗೂ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ಇನ್ನಷ್ಟೆ ನಡೆಯಬೇಕಿದೆ.
ರವಿ ಹಂಜ್, ‘ಬಸವಣ್ಣನ ವಚನವೊಂದನ್ನು ಉಲ್ಲೇಖಿಸುತ್ತಾ; ಬಸವಣ್ಣನನ್ನು ಕಳ್ಳ ಮತ್ತು ಕೊಲೆಗಾರ ಎಂಬಂತೆ ಬಿಂಬಿಸಿ ಅವಹೇಳನ ಮಾಡಿರುವುದು, ಲಿಂಗಾಯತ ಪದವನ್ನು ಲಿಂಗಾಹತ ಎಂದು ತಿರುಚಿದ ಹಾಗೂ ಸಮಾಜದ ಶಾಂತಿ ಕದಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ’ ಎಂಬ ಆರೋಪ ಎದುರಿಸುತ್ತಿದ್ದರೆ, ಇವರು ಬರೆದ ಲೇಖನಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಕುಕೃತ್ಯಗಳಿಗೆ ಪ್ರಚೋದನೆ ನೀಡಿದ ಆರೋಪವನ್ನು ವಿಶ್ವೇಶ್ವರ ಭಟ್ ಎದುರಿಸುತ್ತಿದ್ದಾರೆ.
ಈ ಸಂಬಂಧ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ನೀಡಿರುವ ದೂರಿನ ಆಧಾರದಡಿ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಇಬ್ಬರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ–2023ರ ಕಲಂ 192, 196 (1), 353(2) ಹಾಗೂ 299ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಆತ್ಮೀಯರೇ, ಆರೋಪಿಗಳ ಪರವಾಗಿ ಅವರ ನ್ಯಾಯವಾದಿ ಹೇಳಿಕೆಗೆ,
ಸೂಕ್ತ ಪ್ರತಿಉತ್ತರ , ಮಾನ್ಯ ಶ್ರೀ S M ಜಾಮದಾರ್ ಅವರು ಈಗಾಗಲೇ ಕೊಟ್ಟಿದ್ದಾರೆ ನೋಡಿ ,
Link click ಮಾಡಿ ನೋಡಿ
https://youtu.be/cI2cHi241DI?si=wAeBT45Zqkgmwveb
ಸಮಾಜದಲ್ಲಿನ ಶೋಷಕರು ಶೋಷಿತರ ಪರವಾಗಿ ನಿಂತವರ ವಿರುದ್ಧ ಕಾದಾಟ ಮಾಡುತ್ತಲೇ ಇದ್ದಾರೆ. ಹೊಸತೇನೂ ಅಲ್ಲ. ಇದು ನಿರಂತರ. ಜಗ್ಗದೆ ಬಗ್ಗದೆ ನಾವು ಶೋಷಿತರ ಪರವಾಗಿ ನಿಲ್ಲಬೇಕು.
ಪುರಾಣ ಮತ್ತು ಇತಿಹಾಸದ ಆಧಾರದಲ್ಲಿ, ಅವರು ಪುರಾವೆ ಪಡೆದು ಬಸವಣ್ಣನವರ ಚರಿತೆ ಹನನ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ೭೦೦ ವರ್ಷ ಮುಸ್ಲಿಂರ ಆಳ್ವಿಕೆಯಲ್ಲಿ ಎಷ್ಟು ರಾಜರು, ಪ್ರಾಣ ಪ್ರತಿಷ್ಠಾನ ಮಾಡಿದರೂ ಎಲ್ಡ ಮೂರ್ತಿಗಳನ್ನು ಮುರಿದು,ಖಂಡಿಸಿ, ಗುಡಿ ಗುಂಡಾರ ಒಡೆದು ಮಸ್ಜಿದ ಕಟ್ಟಿ, ಅರಮನೆಗಳು ಧ್ವಂಸ ಮಾಡಿದ್ದಾರೆ? ಇದರ ಪುರಾವೆ ಅವರಿಗೆ ಏಕೆ ಸಿಗಲಿಲ್ಲ ಅಥವಾ ಕಾಣಲಿಲ್ಲ? ೨೦೦ ವರ್ಷ ಇಂಗ್ಲಿಷರ ಕಾಲದಲ್ಲಿ ಏಕೆ ಅವರಿಗೆ ಕೊಲೆಯಾದ ರಾಜರ ಸಂಖ್ಯೆ ಎಷ್ಟು ಗೊತ್ತು ಆಗಲಿಲ್ಲವೇ? ಏಕೆ ೧೨ ನೆಯ ಶತಮಾನದ ರಾಜರ ಅದು ಜೈನ ಪರಂಪರೆಯ ಬಿಜ್ಜಳರನ್ನು ಏಕೆ ಇಲ್ಲಿ ಪಸ್ತಾಪ ಮಾಡಿದ್ದಾರೆ! ಕೇವಲ ಲಿಂಗಾಯತರನ್ನು ಹನನ ಮಾಡಲುಮಾಡಿದ ಹುನ್ನಾರವೇಕೆ? ಸಾಧು ಸಂತರೂ ಶರಣರನ್ನು ಗುರಿಯಾಗಿಸಿ ಬರೆದ ಈ ಕೃತಿ ಸರಕಾರದ ಗಮನಕ್ಕೆ ತರುವಲ್ಲಿ ಜಾಗತಿಕ ಲಿಂಗಾಯತ ವೇದಿಕೆ ಪೂರ್ಣ ಪ್ರಮಾಣದಲ್ಲಿ ಪ್ರಯತ್ನಿಸಬೇಕು. ೨೧ ನೇ ಶತಮಾನದ ಕೊಂಡಿ ಮಂಚಣ್ಣಗಳಂತೆ ವರ್ತಿಸುತ್ತಿರುವ ಈ ಕೆಲವು ಅಹಿತಕಾರಿ ವ್ಯಕ್ತಿಗಳನ್ನು ಕೋರ್ಟ್ ತರಾಟೆಗೆ ತೆಗೆದು ಕೊಳ್ಳಬೇಕು. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ, ಶರಣು ಶರಣಾರ್ಥಿ.
ತಮ್ಮ ಪ್ರತಿಕ್ರಿಯೆ ಅರ್ಥಪೂರ್ಣವಾಗಿದೆ
ರವಿ ಹಂದಿಗೆ ಹಾಗು ಭಟ್ಟ ಇವರಿಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಲಿಂಗಾಯತರೆಲ್ಲರು ಬೀದಿಗಿಳಿದು ಉಗ್ರ ಹೋರಾಟಕ್ಕೆ ಸಿದ್ಧರಿದ್ದಾರೆ.