ಸರ್ಕಾರ ಹಂಜ್ ಕೃತಿ ಮುಟ್ಟುಗೊಲು ಹಾಕಬೇಕು : ಮಾತೆ ಗಂಗಾದೇವಿ

ಕೂಡಲಸಂಗಮ :

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನ ಕುರಿತು ರವಿ ಹಂಜ್ ಬಸವ ಮಂಟಪ : ವೀರಶೈವ ಲಿಂಗಾಯತ ಸತ್ಯದರ್ಶನ ಗ್ರಂಥದಲ್ಲಿ ಅವಹೇಳನಕಾರಿಯಾಗಿ ಬರೆದಿರುವರು, ಮಾತನಾಡಿರುವರು.

ಸರ್ಕಾರ ಈ ಕೃತಿಯನ್ನು ಮುಟ್ಟುಗೊಲುಹಾಕಿಕೊಂಡು ಶಿಸ್ತುಕ್ರಮ ಕೈಗೊಳ್ಳಬೇಕು, ಇಲ್ಲದೇ ಹೋದರೆ ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜವಾಬ್ದಾರಿ ಸ್ಥಾನದಲ್ಲಿ ಇದ್ದು ಶಾಂತಿ ಕಾಪಾಡಬೇಕಾದ ವಿಶೇಶ್ವರ ಭಟ್ ಈ ಕೃತಿಯನ್ನು ಪ್ರಕಟಣೆ ಮಾಡಿರುವುದರಿಂದ ಸರ್ಕಾರ ತನಿಖೆ ಕೈಗೊಂಡು ಪ್ರಕಾಶಕರ ವಿರುದ್ದ ಶಿಸ್ತು ಕ್ರಮಕೈಗೊಳ್ಳಬೇಕು.

ಬಸವಣ್ಣನ ಅಂತರಂಗದ ವಿರೋಧಿಗಳಿಂದ ಈ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದನ್ನು ತಡೆಯಬೇಕು. ನಾಡಿನ ಬಸವ ಭಕ್ತರು ಇದನ್ನು ಅರಿಯಬೇಕು.

ಸಂಶೋಧನೆಯ ಹೆಸರಿನಲ್ಲಿ ಇತಿಹಾಸ ತಿರುಚುವವರಿಗೆ ಕಠಿಣ ಶಿಕ್ಷೆ ಆಗಬೇಕು. ಇಂತಹ ಘಟನೆಗಳು ಮರುಕಳಿಸಬಾರದು. ಲಿಂಗಾಯತ ಧರ್ಮ, ಬಸವಣ್ಣನ ಕುರಿತು ಮಾತನಾಡಲು ರವಿ ಹಂಜ್ ಗೆ ಯಾವ ನೈತಿಕತೆಯೂ ಇಲ್ಲ. 21ನೇ ಶತಮಾನದಲ್ಲಿ ಕೆಲವು ಕೊಂಡಿ ಮಂಚಣ್ಣನವರು ಇರುವುದರಿಂದ ಬಸವಣ್ಣ, ಲಿಂಗಾಯತ ಸಂಸ್ಕೃತಿಯ ಮೇಲೆ ದಾಳಿಗಳು ನಡೆಯುತ್ತಿವೆ. ಇಂತಹ ಕೊಂಡಿಮಂಚಣ್ಣನವರಿಗೆ ಬುದ್ಧಿ ಕಲಿಸುವ ಕಾರ್ಯವನ್ನು ಬಸವ ಭಕ್ತರು ಮಾಡಬೇಕು ಎಂದು ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *