ಹುನಗುಂದ

ಜಾಗತಿಕ ಲಿಂಗಾಯತ ಮಹಾಸಭಾ ಹುನಗುಂದ ತಾಲೂಕ ಘಟಕ ಉದ್ಘಾಟನೆ ಹಾಗೂ ವಚನದರ್ಶನ ಮಿಥ್ಯ-ಸತ್ಯ ಪುಸ್ತಕ ಲೋಕಾರ್ಪಣೆ ಸಮಾರಂಭ ಇದೇ 7 ಏಪ್ರಿಲ್ 2025 ಸೋಮವಾರ ಸಂಜೆ 6 ಗಂಟೆಗೆ ಹುನಗುಂದ ಪಟ್ಟಣದ ಬಸವ ಮಂಟಪದಲ್ಲಿ ನಡೆಯಲಿದೆ.
ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಪೂಜ್ಯ ಗುರುಮಹಾಂತ ಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸುವರು. ಜಾ.ಲಿಂ. ಮಹಾಸಭಾ ಬಾಗಲಕೋಟ ಜಿಲ್ಲಾ ಘಟಕದ ಅಧ್ಯಕ್ಷ ಶರಣ ಅಶೋಕ ಬರಗುಂಡಿ ಅವರು ಉದ್ಘಾಟನೆ ಮಾಡುವರು. ಶರಣ ಚಿಂತಕ ಡಾ. ಜೆ. ಎಸ್. ಪಾಟೀಲ ವಚನದರ್ಶನ ಮಿಥ್ಯ-ಸತ್ಯ ಗ್ರಂಥ ಕುರಿತು ಅನುಭಾವ ನುಡಿಗಳನ್ನು ಆಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಜಾ. ಲಿಂ. ಮಹಾಸಭಾ ಹುನಗುಂದ ತಾಲೂಕ ಘಟಕದ ಅಧ್ಯಕ್ಷರಾದ ಶರಣ ಎಸ್.ಆರ್. ಕಡಿವಾಲ ವಹಿಸಲಿದ್ದಾರೆ. ಶರಣ ಬಸವರಾಜ ಕಡಪಟ್ಟಿ, ರವಿ ಯಡಹಳ್ಳಿ, ಶರಣೆ ಡಾ. ನಾಗರತ್ನ ಎ. ಭಾವಿಕಟ್ಟಿ ಗೌರವ ಉಪಸ್ಥಿತರಿರಲಿದ್ದಾರೆ. ಸರ್ವಸದಸ್ಯರಿಗೆ ಸಂಘಟನೆ ಸ್ವಾಗತ ಕೋರಿದೆ.

