ತುಮಕೂರು:
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಗುಬ್ಬಿ ತಾಲೂಕ ಹೇರೂರ ಗ್ರಾಮದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಆಗಸ್ಟ್ 8 ಮತ್ತು 9ರಂದು ಎರಡು ದಿನ ಲಿಂಗಾಯತ ಧರ್ಮದ ಇತಿಹಾಸ, ಸಿದ್ಧಾಂತ, ಸಂಘಟನೆ ಕುರಿತಾದ ಅಧ್ಯಯನ ಶಿಬಿರ ನಡೆಯಲಿದೆ.
ಇದೇ ಸಂದರ್ಭದಲ್ಲಿ ಗುಬ್ಬಿ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಘಟಕದ ಉದ್ಘಾಟನೆ ಹಾಗೂ ಸೇವಾ ಪದವಿ ಸ್ವೀಕಾರ ಸಮಾರಂಭ ನಡೆಯಲಿದೆ.

ಸಮಾರಂಭದ ಸಾನಿಧ್ಯವನ್ನು ಬೆಟ್ಟದಳ್ಳಿ ಗವಿಮಠಾಧ್ಯಕ್ಷರಾದ ಪೂಜ್ಯ ಚಂದ್ರಶೇಖರ ಸ್ವಾಮೀಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ಆಳಂದ ತೋಂಟದಾರ್ಯ ಅನುಭವ ಮಂಟಪದ ಪೂಜ್ಯ ಕೋರ್ಣೇಶ್ವರ ಸ್ವಾಮೀಜಿ ಹಾಗೂ ವಿಜಯಪುರದ ಶರಣತತ್ವ ಚಿಂತಕರಾದ ಡಾ. ಜೆ. ಎಸ್. ಪಾಟೀಲ, ಮತ್ತಿತರರು ಭಾಗವಹಿಸಲಿರುವರು. ಅಧ್ಯಕ್ಷತೆಯನ್ನು ಜೆ.ಎಲ್.ಎಂ. ಜಿಲ್ಲಾಧ್ಯಕ್ಷರಾದ ಜಿ.ಬಿ. ನಾಗಭೂಷಣ ಅವರು ವಹಿಸುವರು.
ಶಿಬಿರವು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ನಡೆಯಲಿದ್ದು, ಪಾಠಗಳನ್ನು ಪೂಜ್ಯ ಕೋರಣೇಶ್ವರ ಸ್ವಾಮೀಜಿ ಹಾಗೂ ಜೆ.ಎಸ್. ಪಾಟೀಲ ನಡೆಸಿಕೊಡುವರು.

ಜಿಲ್ಲೆಯ ತಾಲೂಕುಗಳ ಗ್ರಾಮ, ಊರುಗಳಲ್ಲಿ ಶಿಬಿರ ನಡೆಯುವುದರ ಬಗ್ಗೆ, ಶಿಬಿರದಲ್ಲಿ ಪಾಲ್ಗೊಳ್ಳುವುದರ ಬಗ್ಗೆ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ ಎಂದು ಜೆ.ಎಲ್.ಎಂ. ಜಿಲ್ಲಾ ಮುಖಂಡರಾದ ಸಚ್ಚಿದಾನಂದ ಆರ್.ಎಸ್. ಅವರು ಬಸವ ಮೀಡಿಯಾಕ್ಕೆ ತಿಳಿಸಿದ್ದಾರೆ.

ಒಳ್ಳೆಯ ಕಾರ್ಯಕ್ರಮವಾಗಿದೆ.ಜೈ ಬಸವ
pls
provide online link to watch program