ಮಹಿಳೆಯರೇ ಗಡಿಪಾರು ಮಾಡುತ್ತಾರೆ: ಕನ್ನೇರಿ ಸ್ವಾಮಿಗೆ ಮಹಾದೇವಿ ಗೋಕಾಕ ಎಚ್ಚರಿಕೆ

ಬಸವ ಮೀಡಿಯಾ
ಬಸವ ಮೀಡಿಯಾ

ವಿಜಯಪುರ

ಕನ್ನೇರಿ ಸ್ವಾಮಿ ನೇತೃತ್ವದ ಹಿಂದೂ ಸಮಾವೇಶಗಳ ವಿರುದ್ಧ ಜಿಲ್ಲೆಯ ಬಸವಪರ ಸಂಘಟನೆಗಳ ಪ್ರಮುಖರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಲಿಂಗಾಯತ ಧರ್ಮವನ್ನು ಮುಗಿಸಲು ಸಂಘ ಪರಿವಾರ ಟೂಲ್ ಕಿಟ್ ಬಳಸುತ್ತಿದ್ದಾರೆ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಮುಖಂಡರಾದ ಮಹಾದೇವಿ ಗೋಕಾಕ ಅವರ ವಿಡಿಯೋ ಈಗ ವೈರಲ್ ಆಗುತ್ತಿದೆ.

ಶಹಾಪುರದಲ್ಲಿ ಹಿರಿಯ ಚಿಂತಕಿ ಮೀನಾಕ್ಷಿ ಬಾಳಿಯವರನ್ನು ನಿಂದಿಸಿದ್ದ ಕನ್ನೇರಿ ಸ್ವಾಮಿಯ ಮೇಲೆ ಮಹಾದೇವಿ ಗೋಕಾಕ ಆಕ್ರೋಶ ವ್ಯಕ್ತಪಡಿಸಿದರು.

ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಮೀನಾಕ್ಷಿ ಅಕ್ಕನವರನ್ನು ಬೈದಿರುವುದು ಎಲ್ಲಾ ಮಹಿಳೆಯರಿಗೆ ಅವಮಾನಿಸಿದಂತೆ.

ಹಿಂದೂ ಧರ್ಮದಲ್ಲಿ ಮಹಿಳೆ ಭೋಗದ ವಸ್ತು ಎಂದು ತಿಳಿಸಿದ್ದರೂ, ಇಂದು ಮಹಿಳೆ ಜಾಗತಿಕ ಮಟ್ಟದಲ್ಲಿ ಬೆಳೆದಿದ್ದಾಳೆ. ಬಸವತತ್ವ ಮತ್ತು ಸಂವಿಧಾನ ಮಹಿಳೆಯರಿಗೆ ಉತ್ತಮ ಸ್ಥಾನ ನೀಡಿದೆ.

“ಹೀಗಿದ್ದಾಗ ನೀನು (ಕನ್ನೇರಿ ಸ್ವಾಮಿ) ಈ ರೀತಿ ಮಹಿಳೆಯನ್ನು ಅಪಮಾನ ಮಾಡಿದ್ದು ಸರಿಯಲ್ಲ. ಇನ್ನೊಮ್ಮೆ ಹೆಣ್ಣುಮಕ್ಕಳ ಬಗ್ಗೆ ಮಾತನಾಡಿದ್ದೇ ಆದರೆ ಸುಮ್ಮನೆ ಕೂಡುವ ಮಾತೆ ಇಲ್ಲ. ಎಲ್ಲಾ ಮಹಿಳೆಯರು ನಿನ್ನನ್ನು ಹುಡಿಕಿಕೊಂಡು ಹೊಡೆದು ಗಡಿಪಾರು ಮಾಡುವುದಂತು ನಿಜ. ಇದು ನಿನಗೆ ಎಚ್ಚರಿಕೆಯ ಘಂಟೆ,” ಎಂದು ಎಚ್ಚರಿಸಿದರು.

ಯಾರು ಮಹಿಳೆಯನ್ನು ಅಪಮಾನ, ಅವಹೇಳನ ಮಾಡಿದ್ದಾರೋ ಅವರ ಜೀವನದಲ್ಲಿ ಉದ್ದಾರವಾಗಿಲ್ಲ ಎಂಬುದನ್ನು ಇತಿಹಾಸ ನೋಡಿದರೆ ತಿಳಿಯುತ್ತದೆ. ಇನ್ನೊಮ್ಮೆ ಹೀಗೆ ಅಗದಂತೆ ನೋಡಿಕೊ ಎಂದು ಹೇಳಿ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದರು.

“ಕನ್ನೇರಿ ಸ್ವಾಮಿ, ನಿನು ಅಕ್ಕ ತಂಗಿಯರ ಜೊತೆ ಒಡನಾಡಿದಿಯೋ ಇಲ್ಲವೋ, ತಾಯಿ ಹೊಟ್ಟೆಯಲ್ಲಿ ಹುಟ್ಟಿದ್ದೀಯೋ ಇಲ್ಲವೋ. ಯಾಕೆ ಈ ರೀತಿಯ ಗಂಡು ಅಲ್ಲದ, ಹೆಣ್ಣುಅಲ್ಲದ ಹಾಗೆ ನಡವಳಿಕೆ. ವಿಭೂತಿಯನ್ನು ಧರಿಸಿ ಬಸವಣ್ಣನವರಿಗೆ ಅವಮಾನಿಸುತ್ತಿದ್ದು, ಕುಂಕುಮ ಧರಿಸಿ ಹಿಂದೂ ಧರ್ಮವನ್ನು ಅಪಮಾನಮಾಡಿತ್ತಿರುವೆ. ಈ ಎರಡು ಮುಖವಾಡವನ್ನು ಧರಿಸಿ ಸನ್ಯಾಸಿಯಾಗಿ ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತಿರುವೆ ತಿಳಿಯುತ್ತಿಲ್ಲ,” ಎಂದು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
1 Comment
  • ಈ ತರದ ಗಟ್ಟಿ ನಿಲುವು ಎಲ್ಲ ಬಸವ ಭಕ್ತರಲ್ಲಿ ಬರಬೇಕು. ಇದಕ್ಕೆ ನಮ್ಮವರಿಂದಲೇ ನಮಗ್ಯಾಕೆ ಬೇಕು ಉಸಾಬರಿ ಅನ್ನಿಸುವ ಜನ ಇದ್ದಾರೆ.

Leave a Reply

Your email address will not be published. Required fields are marked *