ಚಿತ್ರದುರ್ಗ:
ಪಾಳು ಬಿದ್ದ ಸ್ಥಿತಿಯಲ್ಲಿರುವ ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್.ನಿಜಲಿಂಗಪ್ಪ ಅವರ ನಿವಾಸವನ್ನು ಕೆಪಿಸಿಸಿ ಸದ್ಯದಲ್ಲೇ ಖರೀದಿ ಮಾಡಲಿದೆ.
‘ಮಾಜಿ ಮುಖ್ಯಮಂತ್ರಿ ಮತ್ತು ಎಐಸಿಸಿ ಅಧ್ಯಕ್ಷ ನಿಜಲಿಂಗಪ್ಪ ಅವರ ನಿವಾಸ ಖರೀದಿ ಮಾಡಲು ಕೆಪಿಸಿಸಿ ಅಧ್ಯಕ್ಷರು ನಿರ್ಧರಿಸಿದ್ದಾರೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತಾಜ್ ಪೀರ್ ಹೇಳಿದರು.
ನಿಜಲಿಂಗಪ್ಪ ಅವರ ಮನೆಗೆ ಸೋಮವಾರ ಸಚಿವೆ ಲಕ್ಷ್ಮಿ ಹೆಬ್ಬಾಳ್ವ ಭೇಟಿ ನೀಡಿದರು.
‘ನಿಜಲಿಂಗಪ್ಪ ಅವರು ಬಾಳಿ ಬದುಕಿದ ಮನೆಯನ್ನು ಪಕ್ಷದ ವತಿಯಿಂದಲೇ ಸ್ಮಾರಕವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು. ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ನಾವು ನಿಜಲಿಂಗಪ್ಪ ಅವರ ಮನೆ ಪರಿಶೀಲನೆ ನಡೆಸಿದ್ದೇವೆ,’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ನಿಜಲಿಂಗಪ್ಪ ಅವರ ಮನೆಯನ್ನು ಸ್ಮಾರಕ ಮಾಡಬೇಕೆಂದು ಯಡಿಯೂರಪ್ಪ ಖರೀದಿ ಮಡಲು 12 ವರ್ಷದ ಹಿಂದೆ ತೀರ್ಮಾನಿಸಿದ್ದರು.
2022ರಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಿಜಲಿಂಗಪ್ಪ ಅವರ ನಿವಾಸವನ್ನು ಸರ್ಕಾರದ ವತಿಯಿಂದಲೇ ಖರೀದಿಸಲು ₹ 4.24 ಕೋಟಿ ಬಿಡುಗಡೆಯಾಗಿತ್ತು. ಆದರೆ ಆಸ್ತಿ ನೋಂದಣಿಗೆ ನಿಜಲಿಂಗಪ್ಪ ಅವರ ಮಕ್ಕಳು, ಮೊಮ್ಮಕ್ಕಳ ಸಹಿ ಇಲ್ಲದ್ದರಿಂದ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು.
ನಿಜಲಿಂಗಪ್ಪ ಪುತ್ರ ‘ನಮ್ಮ ಮನೆಯ ಕಚೇರಿಯಿಂದ ಕಚೇರಿಗೆ ಅಲೆಸಿದ್ದಾರೆ. ಹೀಗಾಗಿ ನಾವು ಸರ್ಕಾರಕ್ಕೆ ನಮ್ಮ ಕೊಡದಿರಲು ನಿರ್ಧರಿಸಿದ್ದೇವೆ. ಕೆಪಿಸಿಸಿಗೆ ಮಾರಾಟ ಮಾಡಲು ತಯಾರಿದ್ದೇವೆ,” ಎಂದು ಎಸ್.ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಮಾಧ್ಯಮಗಳಿಗೆ ಹೇಳಿದರು.