ಈದ್ ಮಿಲಾದ್ ಸಂಭ್ರಮದಲ್ಲಿ ಪಾಲ್ಗೊಂಡ ಲಿಂಗಾಯತ ಶ್ರೀಗಳು

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ವಿಜಯಪುರ:

ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನೋತ್ಸವ, ಈದ್ ಮಿಲಾದ್ ಅಂಗವಾಗಿ ಅವರ ಅನುಯಾಯಿಗಳಿಂದ ಸೋಮವಾರ ನಡೆದ ಭವ್ಯ ಶಾಂತಿಯಾತ್ರೆ ಹಾಗೂ ಸಮಾವೇಶದಲ್ಲಿ ಲಿಂಗಾಯತ ಮನಗೂಳಿ, ವಿರಕ್ತಮಠದ ವಿರತೀಶಾನಂದ ಸ್ವಾಮೀಜಿ ಹಾಗೂ ಆಲಮೇಲ, ಮಠದ ಜಗದೇವ ಮೊಲ್ಲೆಬೊಮ್ಮಸ್ವಾಮೀಜಿ ಭಾಗವಹಿಸಿ ಸೌಹಾರ್ದತೆಯ ಸಂದೇಶ ನೀಡಿದರು.

ಜಗತ್ತಿನಲ್ಲಿರುವ ದೇವರು ಒಬ್ಬನೇ ಎಂದು ಬಸವಣ್ಣ, ಯೇಸುಕ್ರಿಸ್ತ, ಮೊಹಮ್ಮದ್ ಪೈಗಂಬರ್ ಇವರೆಲ್ಲರೂ ಹೇಳಿದ್ದಾರೆ. ಭಾಷೆ, ರೂಪದಲ್ಲಿ ದೇವರು ಬೇರೆ ಬೇರೆ ಆಗಿರಬಹುದು ಅಷ್ಟೇ. ನಾವು ನೀವು ಏಕದೇವೋಪಾಸಕರಾಗಿದ್ದೇವೆ. ಕಡ್ಡಾಯವಾಗಿ ಏಕದೇವೋಪಾಸನೆ ಮಾಡುವುದು ಅವಶ್ಯಕವಾಗಿದೆ.

ಜಗತ್ತಿನಲ್ಲಿ ಈಗ ಶಾಂತಿ ಪ್ರೀತಿಯ ಅವಶ್ಯಕತೆ ಇದೆ. ಆ ಮೂಲಕ ನಾವು ಜಗತ್ತನ್ನು ಗೆಲ್ಲಬೇಕಿದೆ. ಪ್ರೇಮ, ಪ್ರೀತಿಯಿಂದ ಎಲ್ಲವನ್ನು ಗೆದ್ದ ಪೈಗಂಬರರು, ಬಸವೇಶ್ವರರ ಸಂದೇಶವನ್ನು ಜಗತ್ತಿಗೆ ಸಾರೋಣ ಎಂದು ವೇದಿಕೆಯಲ್ಲಿ ಮಾತನಾಡುತ್ತ ವಿರತೀಶಾನಂದ ಸ್ವಾಮೀಜಿ ಹೇಳಿದರು.

ಜಗದೇವ ಮೊಲ್ಲೆಬೊಮ್ಮ ಸ್ವಾಮೀಜಿ ಕುರಾನ್ ನಲ್ಲಿ ಅಡಕಗೊಂಡಿರುವ ಸಂದೇಶಗಳ ಕುರಿತು ಮಾತನಾಡಿದರು.

ಹಜರತ್ ಮೌಲಾನ ತನ್ವೀರ್ ಪೀರಾ ಮಾತನಾಡಿ, ಇಸ್ಲಾಂ ಧರ್ಮ ಜಗತ್ತಿನ ಶಾಂತಿ, ಸೌಹಾರ್ದತೆ ಬಯಸುತ್ತದೆಂದರು.

ಬೆಳಿಗ್ಗೆ 11ಕ್ಕೆ ಹಾಸಿಂಫೀರ್ ದರ್ಗಾದಿಂದ ಹೊರಟ ಬೃಹತ್ ಮೆರವಣಿಗೆ ಸಂಜೆ 5:30ಕ್ಕೆ ದರ್ಬಾರ್ ಗ್ರೌಂಡ್ ತಲುಪಿತು. ಅಲ್ಲಿಯೇ ವೇದಿಕೆ ಕಾರ್ಯಕ್ರಮ ಜರುಗಿತು.

ಶಕೀಲ್ ಸುತಾರ, ಅಬ್ದುಲ್ ರಜಾಕ್ ಹೊರ್ತಿ, ಹಮೀದ್ ಮುಶ್ರೀಫ್, ಮಹಮ್ಮದ್ ರಫೀಕ್ ಟಪಾಲಿ ಮತ್ತೀತರರು ವೇದಿಕೆ ಮೇಲ್ಲಿದ್ದರು.

ಸಾವಿರಾರು ಸಂಖ್ಯೆಯಲ್ಲಿ ಇಸ್ಲಾಂ ಸಮಾಜ ಬಾಂಧವರು ಉಪಸ್ಥಿತರಿದ್ದರು.

Share This Article
3 Comments
  • ವಿಜಯಪುರದಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮದ ಕುರಿತು ಚೆನ್ನಾಗಿ ವರದಿ ಮಾಡಿದ್ದೀರಿ. ಶರಣು ಶರಣಾರ್ಥಿಗಳು.

  • ಅಭಿನಂದನೀಯ ಕಾರ್ಯಕ್ರಮ..
    ಸೌಹಾರ್ದತೆ ಗಟ್ಟಿಯಾಗಲಿ..

    • ಭಾವೈಕ್ಯತೆ ಎಂಬುದು ಇಂದಿನ ತುರ್ತು ಕಾಯ೯ಕ್ರಮ ಆಗಬೇಕು. ಇಂತಹ ಸೌಹಾರ್ದ ಭಾವೈಕ್ಯತೆ ಹಬ್ಬವನ್ನಾಗಿ ಈದ್ ಮಿಲಾದ್ ಆಚರಿಸುವ ಮೂಲಕ ಹೊಸ ದಿಕ್ಸೂಚಿ ತೋರಿಸಿದ ಎರಡು ಧಮ೯ದ ಸ್ವಾಮೀಜಿಯವರಿಗೆ ಅನಂತ ಹೃದಯ ಪೂವ೯ಕ ಶರಣು ಶರಣಾಥಿ೯ಗಳು 🙏🙏ಹೆಕ್ಕಿ ಹೆಕ್ಕಿ ವಿಷಯಗಳನ್ನು ಬರೆದು ನಮಗೆ ತಲುಪಿಸಿದ ಹೊನವಾಡ ಸರ್ ಗೆ ಶರಣು ಶರಣಾಥಿ೯ಗಳು 🙏

Leave a Reply

Your email address will not be published. Required fields are marked *