ಗಜೇಂದ್ರಗಡ:
ಬಸವಾದಿ ಶರಣರಲ್ಲಿ ಒಬ್ಬರಾಗಿರುವ ಹೂಗಾರ ಮಾದಯ್ಯನವರ ಜಯಂತಿ ಆಚರಣೆಯನ್ನು ತಾಲೂಕಾ ಹೂಗಾರ ಸಮಾಜದ ವತಿಯಿಂದ ಬುಧವಾರ ಇಲ್ಲಿನ ಕಾಲಕಾಲೇಶ್ವರ ವೃತ್ತದಲ್ಲಿ, ಅವರ ಭಾವಚಿತ್ರಕ್ಕೆ ಎಲ್ಲರೂ ಪುಷ್ಪಾರ್ಪಣೆಗೈದು ಚಾಲನೆ ನೀಡಿದರು.
ಬಸವಾದಿ ಶರಣರಲ್ಲಿ ಒಬ್ಬರಾಗಿರುವ ಹೂಗಾರ ಮಾದಯ್ಯನವರ ಜಯಂತಿಯನ್ನು ತಾಲೂಕಾ ಹೂಗಾರ ಸಮಾಜದ ವತಿಯಿಂದ ಇಲ್ಲಿನ ಕಾಲಕಾಲೇಶ್ವರ ವೃತ್ತದಲ್ಲಿ ಬುಧವಾರ ಆಚರಿಸಲಾಯಿತು.

ಶರಣ ಹೂಗಾರ ಮಾದಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆಗೈದು ಬಸವರಾಜ ಶೀಲವಂತರ, ಶರಣು ಪೂಜಾರ, ಬಸವರಾಜ ಕೊಟಗಿ, ದೇವಪ್ಪ ಮಡಿವಾಳರ, ರವಿ ಗಡೇದವರ, ಶಶಿಧರ ಹೂಗಾರ, ಕೆ.ಎಸ್. ಸಾಲಿಮಠ ಮತ್ತೀತರರು ಮಾತನಾಡಿದರು.
ಶರಣರ ಕೆಲವು ವಚನಗಳನ್ನು ಹೇಳಿ, ಎಲ್ಲಾ ಬಸವಾದಿ ಶರಣರ ಜಯಂತಿ, ಸ್ಮರಣೆಯ ಕಾರ್ಯಕ್ರಮಗಳನ್ನು ಲಿಂಗಾಯತ ಸಮಾಜವು ಒಂದಾಗಿ ಆಚರಿಸಬೇಕು ಎಂಬ ಸಂದೇಶ ನೀಡಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಗುರುಲಿಂಗಯ್ಯ ಓದ್ಸುಮಠ, ಬಸವರಾಜ ಹೂಗಾರ, ಮಂಜುನಾಥ ಹೂಗಾರ, ಚಿದಾನಂದಪ್ಪ ಹಡಪದ, ಅಂದಪ್ಪ ರೋಣದ, ಚಂದ್ರು ಹೂಗಾರ, ಜಗದೀಶ ಕವಡಿಮಟ್ಟಿ, ಹನುಮಂತ ಗೌಡರ, ಭೀಮವ್ವ ಹೂಗಾರ, ಗಿರಿಜಮ್ಮ ಹೂಗಾರ, ಸುಮಾ ಹೂಗಾರ, ಮಲ್ಲಿಕಾರ್ಜುನ ಹಡಪದ, ಮಲ್ಲಯ್ಯ ಪೂಜಾರ, ಸುರೇಶ ಚೋಳಿನ, ಚಿದಾನಂದಪ್ಪ ಹಡಪದ ಲೋಕಪ್ಪ ರಾಥೋಡ, ಮುರ್ತುಜಾ ಡಾಲಾಯತ್, ತಿರಕಪ್ಪ ಹೂಗಾರ, ಅಲ್ಲಾಭಕ್ಷಿ ಮುಚ್ಚಾವಲಿ, ಶ್ರೀಧರ ಬಿದರಹಳ್ಳಿ, ಕಳಕಪ್ಪ ಹೂಗಾರ, ರವೀಂದ್ರ ಹೊನವಾಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶುಭಾಶಯಗಳು
ಶರಣ ಬಾಂಧವರ ಒಗ್ಗಟ್ಟು ಗಟ್ಟಿಯಾಗಲಿ
ವಚನಗಳ ಓದು, ತಿಳಿವಳಿಕೆ ಹೆಚ್ಚಲಿ..
ಶರಣಾರ್ಥಿ..