ಸಂಘ ಪರಿವಾರ ಪ್ರಾಯೋಜಿತ ಲಂಗೋಟಿ ಇಲ್ಲದ ಲಪೂಟನ ದಾಳಿ

ಆರ್. ಮಾನಸಯ್ಯ
ಆರ್. ಮಾನಸಯ್ಯ

ಆನೆ ಮೇಲೆ ಕುಂತವನ ಶ್ವಾನ ಕಚ್ಚಬಲ್ಲುದೆ?

ಚಿಕ್ಕಹೆಸರೂರು

ಬಸವಣ್ಣನವರನ್ನು ಖಜಾನೆ ಕದ್ದ ಕಳ್ಳ ಎಂದು ಒಬ್ಬ ಲಂಗೋಟಿ ಇಲ್ಲದ ಲಪೂಟನ ಮೂಲಕ ಇಂದು ಲಿಂಗಾಯತದ ಮೇಲೆ ದಾಳಿ ಮುಂದುವರೆದಿದೆ. ಈ ದಾಳಿಯು ಸಂಘ ಪರಿವಾರ ಪ್ರಾಯೋಜಿತವಾಗಿದೆ. ಇದನ್ನು ಅಮರ ಜ್ಞಾನಪೀಠ ತೀವ್ರವಾಗಿ ಖಂಡಿಸುತ್ತದೆ.

ನಿಜವಾಗಲೂ ವೈದಿಕರಿಗೆ ಅಂದು ಬಸವಣ್ಣ ಹಾಕಿದ ಭಕ್ತಿ ಚಳುವಳಿಯ ಬಾಂಬ್ ಅತ್ಯಂತ ಭಯಂಕರವಾಗಿದೆ ಎಂದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ.

ಬಸವಣ್ಣ ಮತ್ತು ಶರಣರು ಎಂಬ ಸಿಂಹ ಸ್ವಪ್ನ ಮತ್ತೆ ಮತ್ತೆ ಈ ಮತಾಂಧರನ್ನು ಬೆಚ್ಚಿ ಬೀಳಿಸುತ್ತಿದೆ. ಹತಾಶೆಯ ಹಾರಾಟ ಇದು! ಇದನ್ನು ಸಹಿಸಬಾರದು.

ಲಿಂಗಾಯತರು ಹಿತಶತ್ರುಗಳ ವಿಷಯದಲ್ಲಿ ಹುಷಾರಾಗಿರಬೇಕು, ಮತ್ತು ಈ ದುಷ್ಟ ಶಕ್ತಿಗಳ ವಿರುದ್ಧ ಬಸವ ಅನುಯಾಯಿಗಳು, ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ದೊಡ್ಡ ಹಾಗೂ ವಿಶಾಲ ಬಂಡಾಯ ಹೂಡಬೇಕು. ಇದು ಕಾಲದ ಕರೆ. ಇದಕ್ಕೆ ಓಗೊಟ್ಟು ಲಿಂಗಾಯತರು ಸುಸಂಘಟಿತ ಶಕ್ತಿಯ ಮೂಲಕ ಹೋರಾಡಲೇಬೇಕು.

ಇವ ನಮ್ಮವನೆಂದು ನಮ್ಮ ಹಿತಶತ್ರುಗಳನ್ನು ಆಲಂಗಿಸಬಾರದು!

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
2 Comments
  • ಎಲ್ಲರೂ ಮಠಾಧೀಶರು, ಬಸವ ಸಂಘಟನೆಗಳು, ಬಸವಾಭಿಮಾನಿಗಳು ಅಜ್ಞಾನದ ಹೇಳಿಕೆ ನೀಡಿರುವ ರವಿ ಹುಂಬನ ಖಂಡಿಸಿ.ಜೈಬಸವ

  • ಬಸವಣ್ಣ ಬಿಜ್ಜಳನ ಖಜಾನೆ ಕದ್ದದ್ದು, ಬಿಜ್ಜಳನ ಕೊಲೆಗೈಸಿದ್ದು ಮತ್ತು ಹುಸಿ ನುಡಿದುದಕ್ಕೆ ದಾಖಲೆ ಕೊಟ್ಟು ಉಸಿರಾಡುವಂತೆ ಬಸವ ಭಕ್ತರು ಮಾಡಬೇಕು.

Leave a Reply

Your email address will not be published. Required fields are marked *

ಅಧ್ಯಕ್ಷರು, ಅಮರಜ್ಞಾನ ಪೀಠ, ಶ್ರೀ ಕೊಡೇಕಲ್ಲ ಬಸವೇಶ್ವರ ಶಾಖಾಮಠ, ಚಿಕ್ಕಹೆಸರೂರು