ಲಂಡನ್
ಸ್ಯಾಂಡಲ್‌ವುಡ್ ನಟಿ ಪೂಜಾ ಗಾಂಧಿ ಮತ್ತು ಪತಿ ವಿಜಯ್ ಘೋರ್ಪಡೆ ಲಂಡನ್‌ನಲ್ಲಿರುವ ಬಸವೇಶ್ವರ ಪುತ್ಥಳಿಗೆ ಕಳೆದ ಶನಿವಾರ ಭೇಟೀ ನೀಡಿ ಗೌರವ ಸಲ್ಲಿಸಿದರು.
ಪೂಜಾ ಗಾಂಧಿ ಅವರು ಬಸವೇಶ್ವರರಿಗೆ ಹೂವಿನ ಹಾರ ಹಾಕಿ ನಮಸ್ಕರಿಸಿದರು. 12 ನೇ ಶತಮಾನದಲ್ಲಿ ಮಾನವ ಹಕ್ಕುಗಳು, ಲಿಂಗ ಸಮಾನತೆ ಮತ್ತು ಜಾತಿ ತಾರತಮ್ಯದ ವಿರುದ್ಧ ಅವರು ನಡೆಸಿದ ಹೋರಾಟ ಸ್ಮರಿಸಿಕೊಂಡು, ತಾವು ಬಸವಣ್ಣನವರ ಮತ್ತು ಅವರ ಬೋಧನೆಗಳ ಅನುಯಾಯಿ ಎಂದು ಹೇಳಿದರು.
ಲಂಡನ್‌ನಲ್ಲಿರುವ ಎರಡು ಪ್ರಮುಖ ಕನ್ನಡ ಸಂಸ್ಥೆಗಳಾದ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಮತ್ತು ಬಸವ ಸಮಿತಿ ಆಫ್ ದಿ ಯುನೈಟೆಡ್ ಕಿಂಗ್‌ಡಮ್ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಮಾಜಿ ಮೇಯರ್ ಮತ್ತು ಯೂನೈಟೆಡ್ ಕಿಂಗ್‌ಡಮ್ ಕನ್ನಡಿಗರು ಸಂಘದ ಅಧ್ಯಕ್ಷ ಡಾ. ನೀರಜ್ ಪಾಟೀಲ್, ಶ್ರೀ ಗಣಪತಿ ಭಟ್, ಯುಕೆ ಬಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ಅಭಿಜೀತ್ ಸಾಲಿಮಠ್, ಶ್ರೀ ಮಿರ್ಗಿ ರಂಗನಾಥ್ ಮತ್ತು ಶ್ರೀ ಶರಣ್ ಭೇಮಳ್ಳಿ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.