ಬೆಳಗಾವಿ :
ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ರವಿವಾರ ವಾರದ ಕಾರ್ಯಕ್ರಮದಲ್ಲಿ ವಚನ ಗಾಯನ ಜರುಗಿತು.
ಗಾಯಕಿ ಜಾಹ್ನವಿ ಘೋಪ೯ಡೆ ಅವರು ಶೃತಿಶುದ್ಧ, ಭಾವಶುದ್ಧ ವಚನ ಗಾಯನ ಪ್ರಸ್ತುತಪಡಿಸಿ ಎಲ್ಲರ ಮನಸೂರೆಗೊಂಡರು.
ಅವರ ವಚನ ಗಾಯನದಲ್ಲಿ “ಗೀತವ ಹಾಡಿದರೇನು, ಸಜ್ಜನರ ಸಂಗ ಹೇಜ್ಜೇನು ದುಜ೯ನರ ಸಂಗ ಮಾನಭಂಗ, ತನುಶುದ್ದ ಮನಶುದ್ದ ಬಾವಶುದ್ದವಿರುವವ ಎನಗೊಮ್ಮೆತೋರಾ, ಗುರುವಿಗೆ ತನುವನು ಲಿಂಗಕ್ಕೆ ಮನವನ್ನು ಜಂಗಮಕ್ಕೆ ಧನವನ್ನು ಅರ್ಪಿಸಿ, ನಾನೆಂಬುದು ಅಂಹಕಾರ, ನೀನೆಂಬುದು ಮಾಯೆ, ಎಲ್ಲ ಎಲ್ಲವನರಿತು ಫಲವೇನು ಮುಂತಾದ ಭಾವ-ಭಕ್ತಿ-ಅರಿವು ಪ್ರಧಾನವಾದ ವಚನಗಳನ್ನು ಹಾಡಿದರು.

ಪ್ರಾರಂಭದಲ್ಲಿ ಸಾಮೂಹಿಕ ಪ್ರಾಥ೯ನೆಯನ್ನು ಸುರೇಶ ನರಗುಂದ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷ ಈರಣ್ಣ ದೇಯನ್ನವರ ವಹಿಸಿದ್ದರು. ದಾಸೋಹ ಸೇವೆಯನ್ನು ಬಾಳಗೌಡ ದೊಡಭoಗಿ ವಹಿಸಿದ್ದರು. ಸಂಗಮೇಶ ಅರಳಿ ನಿರೂಪಿಸಿದರು.
ವಿ. ಕೆ. ಪಾಟೀಲ, ಬಸವರಾಜ ಬಿಜ್ಜರಗಿ, ಸದಾಶಿವ ದೇವರಮನಿ, ಶಂಕರ ಗುಡಸ, ವಚನಗಳನ್ನು ಹೇಳಿದರು.
ಅಕ್ಕಮಹಾದೇವಿ ತೆಗ್ಗಿ, ಶೀವಲೀಲಾ ಗೌಡರ, ಸುಧೀರ ಆರ್, ಶೇಖರ ವಾಲಿಇಟಗಿ, ಕೆoಪಣ್ಣ ರಾಮಾಪುರಿ, ಎo.ವೈ. ಮೆಣಸಿನಕಾಯಿ, ಸುನೀಲ ಸಾಣಿಕೊಪ್ಪ ನ್ಯಾಯವಾದಿ, ಶಿವಾನoದ ತಲ್ಲೂರ, ಅನೀಲ ರಘಶೆಟ್ಟಿ, ಬಿ. ಪಿ. ಜೇವಣಿ, ಶಿವಾನoದ ನಾಯಕ, ಸುದೀಪ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
