ಬೆಳಗಾವಿಯಲ್ಲಿ ವಚನ, ಕನ್ನಡ ಹಾಡುಗಳ ಸಂಭ್ರಮದ ರಾಜ್ಯೋತ್ಸವ

ಮಹಾಂತೇಶ ಇಂಚಲ
ಮಹಾಂತೇಶ ಇಂಚಲ

ಲಿಂಗಾಯತ ಸಂಘಟನೆಯ ಕಾರ್ಯಕ್ರಮ

ಬೆಳಗಾವಿ :

ಲಿಂಗಾಯತ ಸಂಘಟನೆ ವತಿಯಿಂದ ಅದ್ಧೂರಿ, ಅರ್ಥಗರ್ಭಿತವಾಗಿ ಕರ್ನಾಟಕ ರಾಜ್ಯೋತ್ಸವವನ್ನು ನವೆಂಬರ್ 1ರಂದು ಆಚರಿಸಲಾಯಿತು.

ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಪರಿಪಾಲನೆ ಮಾಡಿಕೊಂಡು ಬಂದ ಪದ್ಧತಿಯಂತೆ ಈ ಉತ್ಸವ ಆಚರಿಸಲಾಗುತ್ತಿದೆ.

ನಗರದ ಎಲ್ಲ ಸಂಘಟನೆಗಳ ವೇದಿಕೆಗಳು ಕಿತ್ತೂರ ಚನ್ನಮ್ಮ ವೃತ್ತದ ಹತ್ತಿರವೇ ಇರುತ್ತವೆ.  “ಲಿಂಗಾಯತ ಸಂಘಟನೆ” ವೇದಿಕೆ ದೂರದಲ್ಲಿ ಶನಿವಾರ ಕೂಟದಲ್ಲಿ ನಿರ್ಮಿಸಲಾಗಿರುತ್ತದೆ.

ಸಂಘಟನೆಯ ವೇದಿಕೆಯ ವೈಶಿಷ್ಟ್ಯ ಏನೆಂದರೆ, ವೇದಿಕೆಯಲ್ಲಿ ಮುಂಜಾನೆ ಹೊತ್ತು ಭಜನೆ ಕಾರ್ಯಕ್ರಮ ನಡೆಯಿತು. ಶರಣರ ವಚನಗಳನ್ನು, ದಾಸರ ಪದಗಳನ್ನು, ಜಾನಪದ ಗೀತೆ ಹೀಗೇ ಹತ್ತು ಹಲವು ಕನ್ನಡ ಸಾಹಿತ್ಯದ ಮಜಲುಗಳ ಸುಂದರ ಪ್ರಸ್ತುತಿ ಇತ್ತು.

ನಂತರ ಸುಂದರ ಕನ್ನಡ ನಾಡು ನುಡಿಯ ಅಭಿಮಾನದ ಹಾಡುಗಳ ರಸಮಂಜರಿ ಕಾರ್ಯಕ್ರಮ ರಾತ್ರಿ ಹತ್ತು ಗಂಟೆಯವರೆಗೂ ನಡೆಯಿತು.

‘ಆನಂದ ಮೋಲೊಡಿಸ್’ ನ ಹಾಡುಗಾರರು ಬಹಳ ಒಳ್ಳೆಯ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡಭಿಮಾನಿಗಳು ವೇದಿಕೆಯ ಮುಂದೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಕಿಕ್ಕಿರಿದು ತುಂಬಿ ನಿಂತು ಎಲ್ಲ ಹಾಡುಗಳ ವೈಭವವನ್ನ ಆಲಿಸಿ ಸಂತಸಪಟ್ಟರು.

ವೇದಿಕೆಯ ಮುಂಬಾಗದಲ್ಲಿ ಯುವಕ ಯುವತಿಯರ ಕುಣಿದು ಕುಪ್ಪಳಿಸುವಿಕೆ, ಚಿಕ್ಕಮಕ್ಕಳ ಮುಗ್ಧ ನೃತ್ಯ, ವಯೋವೃದ್ಧರ ಹಾಕಿದ ಹೆಜ್ಜೆಗಳಿಂದ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ಮೂಡಿತು. ಇದು ನಿಜವಾದ ರಾಜ್ಯೋತ್ಸವ ಆಚರಣೆ ಎನಿಸಿತು.

ಭಕ್ತಿಮಯ ವಾತಾವರಣ, ನಮ್ಮ ಸಂಸ್ಕೃತಿಯ ಆಚರಣೆ, ಕರ್ಣ ಕಠೋರವಲ್ಲದ ಧ್ವನಿವರ್ಧಕ, ಸುಶ್ರಾವ್ಯ ಹಾಡುಗಳು ಮನ ತಣಿಸಿದವು. ಯಾವುದೇ ರಾಜಕೀಯದ ಲವಲೇಶವಿಲ್ಲದೇ ಶುದ್ಧ ಕನ್ನಡದ ಭಕ್ತಿಯ ಪರಾಕಾಷ್ಠೆ ತುಂಬಿ ತುಳುಕಿತು.

ಎಲ್ಲ ಸಂಘ ಸಂಸ್ಥೆಗಳ, ವಿವಿಧ ಸರ್ಕಾರಿ ಇಲಾಖೆಗಳ ಸ್ಥಬ್ದ ಚಿತ್ರಗಳು ಆಗಮಿಸಿದಾಗ ಅವರಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಸವಿನೆನಪಾಗಿ ನೀಡಿ, “ಜೈ ಚನ್ನಮ್ಮ…. ಜೈ ರಾಯಣ್ಣ…” ಎಂದು ಘೋಷಣೆ ಮಾಡಿಸಿ ಆ ಸ್ಥಬ್ದ ಚಿತ್ರಕ್ಕೆ ಬೀಳ್ಕೊಡುವ ಸನ್ನಿವೇಶ ಹೃದಯಸ್ಪರ್ಶಿಯಾಗಿತ್ತು.

ಈರಣ್ಣ ದೇಯನ್ನವರ ಅವರ ಅಧ್ಯಕ್ಷತೆಯಲ್ಲಿ ಈ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ದಾಸೋಹಿ ಮುರುಘೇoದ್ರ ಪಾಟೀಲರನ್ನು ಸತ್ಕರಿಸಲಾಯಿತು.

ಸಂಗಮೇಶ ಅರಳಿ, ಸುರೇಶ ನರಗುಂದ, ಶಂಕರ ಗುಡಸ, ಮಹಾಂತೇಶ ದೇಸಾಯಿ, ಅಶೋಕ ಇಟಗಿ, ವಿಜಯ ಹುದಲಿಮಠ, ರಮೇಶ ಕಳಸಣ್ಣವರ, ಸತೀಶ ಪಾಟೀಲ, ಶಶಿಭೂಷಣ ಪಾಟೀಲ, ಸದಾಶಿವ ದೇವರಮನಿ, ಪ್ರಭು ಪಾಟೀಲ, ಆನ0ದ ಕರಕಿ ದoಪತಿ, ಪೂಜಾರ ದoಪತಿ, ಅಕ್ಕಮಹಾದೇವಿ ತೆಗ್ಗಿ, ಶೋಭಾ ದೇಯಣ್ಣವರ, ಸುವಣ೯ ಗುಡಸ, ಜಯಶ್ರೀ ಚವಲಗಿ, ಶಾoತಾ ಚಿನಿವಾಲರ, ಬಸವರಾಜ ಬಿಜ್ಜರಗಿ, ಕುಮಾರ ಪಾಟೀಲ, ಬಸವರಾಜ ಕರಡಿಮಠ, ಕೆoಪಣ್ಣ ರಾಮಾಪೂರಿ ಮತ್ತಿತರ ಶರಣ ಶರಣೆಯರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *