ಮಾನವೀಯತೆಗಿಂತ ದೊಡ್ಡ ಧರ್ಮ ಜಗತ್ತಿನಲ್ಲಿ ಇಲ್ಲ: ಶರಣ ರುದ್ರೇಗೌಡರು

ಹರಪನಹಳ್ಳಿ

ನಮ್ಮ ಧರ್ಮ ಹೆಚ್ಚು, ನಮ್ಮ ಧರ್ಮ ಹೆಚ್ಚು ಎಂದು ಗೊಂದಲ ಮಾಡುತಿದ್ದಾರೆ, ಆದರೆ ಮಾನವೀಯತೆಯನ್ನು ಒಳಗೊಂಡ ಧರ್ಮವೇ ಶ್ರೇಷ್ಠ, ಎಂದು ಶರಣ ರುದ್ರೇಗೌಡರು ಶನಿವಾರ ತಿಳಿಸಿದರು.

ಹಿರೆಮೆಗಳಗೆರೆ ಗ್ರಾಮದ ಜನತಾ ಪ್ರೌಢಶಾಲಾ ಆವರಣದಲ್ಲಿ ಜರುಗಿದ ಹಡಪದ ಅಪ್ಪಣ್ಣನವರ ಜಯಂತಿಯ ಅಧ್ಯಕ್ಷತೆ ವಹಿಸಿದ್ದ ರುದ್ರೇಗೌಡರು ದಯವಿಲ್ಲದ ಧರ್ಮ ಯಾವುದಯ್ಯ ದಯವೇ ಧರ್ಮದ ಮೂಲ ಎಂದು ಶರಣರು ಸಾರಿದರು, ಎಂದು ಹೇಳಿದರು.

ಬಸವಣ್ಣನವರು ಇವನಾರವ ಇವನಾರವ ಎನ್ನದೆ ಎಲ್ಲರನ್ನೂ ಇವ ನಮ್ಮವ ಇವ ನಮ್ಮವ ಎಂದು ಅಪ್ಪಿಕೊಳ್ಳುವ ಮೂಲಕ ಸಮಾಜದಲ್ಲಿ ಅಸಮಾನತೆ ಹೊಗಲಾಡಿಸಲು ಪ್ರಯತ್ನ ಮಾಡಿದರು. ಸಕಲ ಜೀವಾತ್ಮರಿಗೂ ಲೇಸನೇ ಬಯಸಿದವರು ಶರಣರು ಎಂದು ಉಪನ್ಯಾಸಕಿ ಕುಮಾರಿ ಬಿಂದು ಅವರು ತಮ್ಮ ಉಪನ್ಯಾಸದಲ್ಲಿ ಹೇಳಿದರು

ಪ್ರಜಾಪ್ರಭುತ್ವದ ಮೂಲ ಸ್ಥಾಪಕ ಬಸವಣ್ಣನವರ ಎಲ್ಲಾ ಸಾಧನೆಗೆ ಬೆಂಬಲವಾಗಿ ಜೊತೆಯಲ್ಲಿ ನಿಂತು ಬಸವಣ್ಣನವರಿಗೆ ಆಪ್ತನಾಗಿ ಸಹಕರಿಸಿದವರು ಹಡಪದ ಅಪ್ಪಣ್ಣನವರು ಎಂದು ವಿಶ್ವೇಶ್ವರಯ್ಯ ಬಿಎಂ ಹೆಮ್ಮನಬೇತೂರು ಹೇಳಿದರು.

ನಮ್ಮೊಳಗೆ ದೇವರು ಇದ್ದಾನೆ ಬಾಹ್ಯ ದೇವರುಗಳು ನಮಗೆ ಏನನ್ನೂ ಸಹಾಯ ಮಾಡುವುದಿಲ್ಲ ನಮ್ಮೊಳಗಿನ ಚೈತನ್ಯ ನಮಗೆ ದೇವರು ಬಸವಣ್ಣನವರ ಬಗ್ಗೆ ತಿಳಿದ ನಂತರ ನಮ್ಮ ಮನೆಯಲ್ಲಿ ಇದ್ದ ದೇವರ ಭಾವಚಿತ್ರಗಳನ್ನು ತೆಗೆದು ಹಾಕಿದ್ದೇವೆ ಎಂದು ಶರಣ ಮಂಜುನಾಥ ಪಟೇಲ್ ತಿಳಿಸಿದರು

ಶರಣರ ವಿಚಾರಗಳು ಮಕ್ಕಳ ವ್ಯಕ್ತಿತ್ವ ಬೆಳವಣಿಗೆ ತುಂಬಾ ಉಪಯುಕ್ತವಾದವುಗಳು ಇಂಥಹ ಕಾರ್ಯಕ್ರಮ ಇನ್ನು ಹೆಚ್ಚು ಹೆಚ್ಚು ಆಗಲಿ ಎಂದು ಹಡಪದ ಅಪ್ಪಣ್ಣನವರ ಜಯಂತಿಯ ಉದ್ಘಾಟನೆ ಮಾಡಿ ಮಾತನಾಡಿದ ಶರಣ ಶ್ಯಾಮಸುಂದರ ಅವರು ಆಶಿಸಿದರು.

ಗ್ರಾಮದ ಮುಖಂಡರಾದ ಹನುಮಂತಪ್ಪನವರು ಮಾತನಾಡಿ ನಮಗೆ ಮೊದಲು ಬಸವಣ್ಣನವರ ಬಗ್ಗೆ ತಿಳಿದಿರಲಿಲ್ಲ ಈಗೀಗ ತಿಳಿಯುತ್ತಾ ಇದೆ ಈ ಕಾರ್ಯಕ್ರಮ ನಮಗೆ ಶರಣರನ್ನು ಪರಿಚಯ ಮಾಡಿದೆ ಎಂದರು.

ನಂತರ ಮಕ್ಕಳ ಜೊತೆಗೆ ವಚನಗಳ ಕುರಿತು ಸಂವಾದ ನಡೆಯಿತು ಮಕ್ಕಳು ಧಾರ್ಮಿಕ ಮೂಢನಂಬಿಕೆ ಕುರಿತು ಪ್ರಶ್ನೆಗಳನ್ನು ಕೇಳಿದರು. ಅವುಗಳಿಗೆ ವೇದಿಕೆ ಮೇಲಿನ ಅತಿಥಿಗಳು ವಚನಗಳ ಹಿನ್ನೆಲೆಯಲ್ಲಿ ಸೂಕ್ತ ಉತ್ತರ ನೀಡಿದರು ಸಮಾರಂಭ ಅತ್ಯಂತ ರೋಚಕವಾಗಿ ಮುಕ್ತಾಯವಾಯಿತು.

ಆರಂಭದಲ್ಲಿ ಮಕ್ಕಳು ವಚನಗೀತೆ ಹಾಡಿದರು, ಸಹ ಶಿಕ್ಷಕರಾದ ಶರಣ ರವಿಂದ್ರಕುಮಾರ್ ಅವರು ಎಲ್ಲರನ್ನೂ ಸ್ವಾಗತಿಸಿದರೆ, ಶರಣ ಟಿ ಎಂ ಶಿವಮೂರ್ತಯ್ಯ ಅವರು ನಿರೂಪಣೆ ಮಾಡಿದರು. ಕೊನೆಯಲ್ಲಿ ಶರಣ ಸಿ ಶಿವಕುಮಾರ್ ಅವರು ಎಲ್ಲರಿಗೂ ಶರಣು ಸಮರ್ಪಣೆ ಮಾಡಿದರು

ಸಭೆಯಲ್ಲಿ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ಶರಣ ಆವರಗೆರೆ ರುದ್ರಮುನಿ ಅವರು ಜಿಲ್ಲಾ ಹಡಪದ ಸಮಾಜದ ಜಿಲ್ಲಾಧ್ಯಕ್ಷರಾದ ಶರಣ ಶಶಿಧರ ಬಸಾಪುರ ಅವರು ಮಾನವ ಬಂದುತ್ವ ವೇದಿಕೆಯ ತಾಲ್ಲೂಕು ಸಂಚಾರದ ಶರಣ ಹನುಮಂತಪ್ಪ ಅವರು ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ ಹಳೆಬಾತಿ ಹಾಗೂ ಮಲ್ಲೇಶಪ್ಪ ಹಳೆಬಾತಿ ಬಸವರಾಜ ಹಾಗೂ ಶಾಲೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು