ಚಿತ್ರದುರ್ಗ
ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠವು ಹಮ್ಮಿಕೊಂಡಿರುವ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ೧೫೦ನೇ ಜಯಂತ್ಯುತ್ಸವ ಹಾಗೂ ಶರಣಸಂಸ್ಕೃತಿ ಉತ್ಸವ-೨೦೨೪ರ ಅಂಗವಾಗಿ ಇಂದು ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಆರಂಭವಾದ ಜಯದೇವ ಕಪ್ ಕ್ರೀಡಾಜಾತ್ರೆಯಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಚಾಲನೆ ನೀಡಿದರು.
ಕ್ರೀಡಾಕೂಟ ಸಮಿತಿ ಅಧ್ಯಕ್ಷ ಶ್ರೀರಾಮ್, ಪದಾಧಿಕಾರಿಗಳಾದ ಅನೀಸ್, ಕೆ.ಸಿ. ನಾಗರಾಜ್, ದಾಳಿಂಬೆ ಮಂಜು, ಎಸ್. ಪರಮೇಶ್, ಕಾರ್ತಿಕ್, ದೇವೇಂದ್ರಪ್ಪ, ಸಿರಾಜ್, ರವಿಶಂಕರರೆಡ್ಡಿ ಮೊದಲಾದವರಿದ್ದರು.