ಬೀದರ:
ಅಕ್ಕ ಅನ್ನಪೂರ್ಣತಾಯಿ ಅವರ ದ್ವಿತೀಯ ಸ್ಮರಣೋತ್ಸವ ಅಂಗವಾಗಿ ಲಿಂಗಾಯತ ಮಹಾಮಠದ ವತಿಯಿಂದ ಇಲ್ಲಿಯ ಬಸವಗಿರಿಯಲ್ಲಿ ಮೇ ೨೩ ಮತ್ತು ೨೪ ರಂದು ಬಸವೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಬಸವಣ್ಣನವರಿಗೆ ಜಂಗಮ ಪ್ರಾಣವಾಗಿದ್ದರೆ, ಅಕ್ಕ ಅನ್ನಪೂರ್ಣತಾಯಿ ಅವರಿಗೆ ಬಸವಣ್ಣನವರೇ ಪ್ರಾಣವಾಗಿದ್ದರು. ಹೀಗಾಗಿ ಅವರು ಬಸವಣ್ಣನವರ ತತ್ವ ಹಾಗೂ ವಚನ ಸಾಹಿತ್ಯದ ಪ್ರಚಾರ ಮತ್ತು ಪ್ರಸಾರಕ್ಕೆ ತಮ್ಮ ಬದುಕು ಸಮರ್ಪಿಸಿಕೊಂಡಿದ್ದರು. ಕಾರಣ, ಅಕ್ಕ ಅವರ ಸ್ಮರಣೋತ್ಸವವನ್ನು ಬಸವೋತ್ಸವ ಆಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಬಸವೋತ್ಸವ ಅಂಗವಾಗಿ ಮೂರು ತಿಂಗಳಲ್ಲಿ ಜಿಲ್ಲೆಯ ನೂರು ಗ್ರಾಮಗಳಲ್ಲಿ ಬಸವ ತತ್ವ ಪ್ರಚಾರ ಕೈಗೊಳ್ಳಲಾಗಿದೆ.
ಬಸವೋತ್ಸವದಲ್ಲಿ ಬೀದರ, ನೆರೆಯ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳ ಬಸವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಕ್ಕ ಅನ್ನಪೂರ್ಣ ತಾಯಿ ಅವರಿಗೆ ಗೌರವ ಸಮರ್ಪಿಸಲಿದ್ದಾರೆ ಎಂದು ತಿಳಿಸಿದರು.
೨೩ ರಂದು ಬೆಳಿಗ್ಗೆ ೧೦ಕ್ಕೆ ನಡೆಯುವ ಸಮಾರಂಭದಲ್ಲಿ ರಾಷ್ಟ್ರೀಯ ಬಸವದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಅವರು ಬಸವೋತ್ಸವವನ್ನು ಉದ್ಘಾಟಿಸಲಿದ್ದಾರೆ. ಹಾರಕೂಡದ ಚನ್ನವೀರ ಶಿವಾಚಾರ್ಯರು ಸಾನಿಧ್ಯ, ಉರಿಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಕಲಬುರಗಿಯ ಅಕ್ಕ ಮಹಾದೇವಿ ಆಶ್ರಮದ ಮಾತೆ ಪ್ರಭುಶ್ರೀ ನೇತೃತ್ವ ಹಾಗೂ ಕಲಬುರಗಿಯ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಜಾಗೃತ ಕರ್ನಾಟಕದ ಡಾ. ಎಚ್.ವಿ. ವಾಸು ಮುಖ್ಯ ಅನುಭಾವ ಮಂಡಿಸಲಿದ್ದಾರೆ ಎಂದು ಹೇಳಿದರು.

ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ಸಮಾಜ ಸೇವಕ ನಾಗರಾಜ ಕರ್ಪೂರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ, ಸಂಘದ ರಾಜ್ಯ ಪರಿಷತ್ ಸದಸ್ಯ ರಾಜಕುಮಾರ ಮಾಳಗೆ, ಉದ್ಯಮಿ ವೀರಶೆಟ್ಟಿ ಪಟ್ಟೆ, ನಂಜನಗೂಡಿನ ಅಕ್ಕನ ಬಳಗದ ಎಚ್.ಎಂ. ಮಂಜುಳಾ ಮಧು ಹಾಗೂ ಬೀದರನ ನೀಲಮ್ಮನ ಬಳಗದ ಸಂಗೀತಾ ಆರ್. ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ಇದಕ್ಕೂ ಮುನ್ನ ಬೆಳಿಗ್ಗೆ ೭.೩೦ಕ್ಕೆ ಸಾಮೂಹಿಕ ವಚನ ಪಾರಾಯಣ ಜರುಗಲಿದೆ. ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ, ಬಸವಕಲ್ಯಾಣದ ಅನುಭವ ಮಂಟಪದ ಶಿವಾನಂದ ಸ್ವಾಮೀಜಿ, ಕಲಖೋರಾದ ಅನಿಲ ಮಹಾರಾಜ, ಬಸವಕಲ್ಯಾಣದ ಬಸವ ದೇವರು, ಸಿದ್ರಾಮಪ್ಪ ಕಪಲಾಪುರ ಅವರ ಸಾನಿಧ್ಯ, ಲಿಂಗಾಯತ ಮಹಾಮಠದ ಪರುಷಕಟ್ಟೆ ಚನ್ನಬಸವಣ್ಣ ನೇತೃತ್ವ, ನೀಲಮ್ಮ ಬಳಗದ ಶಾಮಲಾ ಎಲಿ ಅಧ್ಯಕ್ಷತೆ ವಹಿಸುವರು. ಕೊಪ್ಪಳದ ವೀರಭದ್ರಪ್ಪ ನಂದ್ಯಾಳ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿವರು ಎಂದು ಹೇಳಿದರು.
ಗೋರ್ಟಾ(ಬಿ)ದ ಗೋದಾವರಿ ತಾಯಿ, ಸಂಗೀತಾ ಚ. ಗಣಾಚಾರಿ, ಜಗದೇವಿ, ಚಿಮಕೋಡೆ, ಸಂಗೀತಾ ಕಾಡಾದಿ, ನಮ್ರತಾ ಪಾಟೀಲ, ಸುಪ್ರಿಯಾ ಭೂರೆ ಗೌರವ ಉಪಸ್ಥಿತಿ ವಹಿಸುವರು ಎಂದು ತಿಳಿಸಿದರು.
ಅಂದು ಸಂಜೆ ೫ಕ್ಕೆ ಅಕ್ಕನವರ ಸ್ಮರಣೋತ್ಸವ ನಡೆಯಲಿದೆ. ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ನೇತೃತ್ವ, ಕೌಠಾ(ಬಿ) ಬಸವ ಯೋಗಾಶ್ರಮದ ಡಾ. ಸಿದ್ಧರಾಮೇಶ್ವರ ಶರಣರು ಬೆಲ್ದಾಳ, ಬಸವಕಲ್ಯಾಣದ ಬಸವ ಮಹಾಮನೆಯ ಜಗದ್ಗುರು ಸಿದ್ಧರಾಮ ಸ್ವಾಮೀಜಿ, ಕೊಪ್ಪಳದ ಯಳವಂತ ಶರಣರು ಸಾನಿಧ್ಯ ವಹಿಸುವರು ಎಂದು ಹೇಳಿದರು.
ಭಾರತೀಯ ಬಸವ ಬಗಳಗದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಬಸವ ಜಯಂತಿ ಉತ್ಸವ ಸಮಿತಿ ೨೦೨೬ ರ ಅಧ್ಯಕ್ಷ ಡಾ. ರಜನೀಶ ವಾಲಿ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ರೋಟರಿ ಕಲ್ಯಾಣ ಝೂನ್ ಸಹಾಯಕ ಗವರ್ನರ್ ಹಾವಶೆಟ್ಟಿ ಪಾಟೀಲ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಗೋರ್ಟಾ(ಬಿ)ದ ಸೋಮನಾಥಪ್ಪ ರಾಜೇಶ್ವರೆ, ಕೊಪ್ಪಳದ ಅರ್ಚನಾ ಗವೀಶ ಸಸಿಮಠ, ಹುಬ್ಬಳ್ಳಿಯ ಪ್ರಭಾ ಎರೆಸೀಮಿ, ಸಿದ್ಧೇಶ್ವರ ಪಿಕೆಪಿಎಸ್ ಅಧ್ಯಕ್ಷೆ ಶಾಂತಾ ಜೈರಾಜ ಖಂಡ್ರೆ ಗೌರವ ಉಪಸ್ಥಿತಿ ವಹಿಸುವರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ನೀಲಮ್ಮ ರೂಗನ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಮೇ ೨೪ ರಂದು ಬೆಳಿಗ್ಗೆ ೮.೩೦ಕ್ಕೆ ಶಿವನಗರ ಉತ್ತರದ ಬಸವ ಉದ್ಯಾನ ಶಿವ ಮಂದಿರದಿಂದ ಬಸವಗಿರಿವರೆಗೆ ವಚನ ವಿಜಯೋತ್ಸವ ಮೆರವಣಿಗೆ ನಡೆಯಲಿದೆ. ವಿಶೇಷ ಅಲಂಕೃತ ವಾಹನದಲ್ಲಿ ಬಸವಣ್ಣನವರು, ಅಕ್ಕ ಅನ್ನಪೂರ್ಣತಾಯಿ ಅವರ ಬೃಹತ್ ಭಾವಚಿತ್ರ ಹಾಗೂ ಲಿಂಗಾಯತ ಧರ್ಮಗ್ರಂಥ ಗುರು ವಚನ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಲಿವೆ.
ಸಹಸ್ರಾರು ಶರಣ ಶರಣೆಯರು ವಚನ ಸಾಹಿತ್ಯ ತಲೆ ಮೇಲೆ ಇಟ್ಟುಕೊಂಡು ಭಕ್ತಿ ಭಾವದಿಂದ ಹೆಜ್ಜೆ ಹಾಕಲಿದ್ದಾರೆ. ಷಟಸ್ಥಲ ಧ್ವಜಗಳು, ಛತ್ರಿ- ಚಾಮರಗಳು ರಾರಾಜಿಸಲಿವೆ.
ಬೆಳಿಗ್ಗೆ ೧೧ಕ್ಕೆ ಬಸವೋತ್ಸವ, ಸಮವಸ್ತ್ರಧಾರಿ ೭೭೦ ಶರಣ ಶರಣೆಯರಿಂದ ಅಕ್ಕನ ಯೋಗಾಂಗ ತ್ರಿವಿಧಿ ಪಠಣ ಜರುಗಲಿದೆ.
ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಡಾ. ಶಿವಾನಂದ ಸ್ವಾಮೀಜಿ, ಕಾಳಗಿಯ ಗುರುನಂಜೇಶ್ವರ ಸ್ವಾಮೀಜಿ ಸಾನಿಧ್ಯ, ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ನೇತೃತ್ವ ವಹಿಸುವರು ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿ ಉಪಾಧ್ಯಕ್ಷ ಬಸವರಾಜ ಬುಳ್ಳಾ ಉದ್ಘಾಟಿಸುವರು, ಧಾರವಾಡದ ಖ್ಯಾತ ಚಿಂತಕ ಡಾ. ಸಿದ್ಧನಗೌಡ ಪಾಟೀಲ ಮುಖ್ಯ ಅನುಭಾವ ಮಂಡಿಸುವರು. ಹಾರೂರಗೇರಿಯ ಆರ್.ಆರ್. ಮಠಪತಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಎನ್.ಎಸ್.ಎಸ್.ಕೆ. ಅಧ್ಯಕ್ಷ ಸೂಯಕಾಂತ ನಾಗಮಾರಪಳ್ಳಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ದೇವಪ್ಪ, ಮುಖಂಡರಾದ ಶಂಕರಪ್ಪ ಪಾಟೀಲ, ಡಾ. ನಾಗೇಶ ಪಾಟೀಲ, ಅನಿಲಕುಮಾರ ರಗಟೆ, ಭಾರತಿ ಗಂಗಾಧರ ಜೋಗುರ, ನೀತಾ ಎಸ್. ಸುಳಿಭಾವಿ, ಕಮಲಾ ಎಸ್. ಭೂಸನೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಅಂದು ಸಂಜೆ ೪.೩೦ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಆಳಂದದ ಕೋರಣೇಶ್ವರ ಸ್ವಾಮೀಜಿ, ಬಸವಕಲ್ಯಾಣದ ಬಸವಪ್ರಭು ಸ್ವಾಮೀಜಿ, ಸಿಂಧನಕೇರಾದ ಹೊನ್ನಲಿಂಗ ಸ್ವಾಮೀಜಿ ಸಾನಿಧ್ಯ ವಹಿಸುವರು. ಕಲಬುರಗಿಯ ಡಾ. ಕಿರಣ ಗಾಜನೂರು ಮುಖ್ಯ ಅನುಭಾವ ಮಂಡಿಸುವರು. ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ, ಹೈದರಾಬಾದ್‌ನ ನಾಗರಾಜ ಸೋರಳ್ಳಿ, ಜಹೀರಾಬಾದನ ಡಾ. ಬಸವರಾಜ ಮಠಪತಿ, ಡಾ. ದೇವಕಿ ನಾಗೂರೆ, ಜಗನ್ನಾಥ ಇದಲಾಯಿ, ಜಗನ್ನಾಥ ಶೇರಿಕಾರ, ಮಲ್ಲಿಕಾರ್ಜುನ ಸಂಗಮಕರ, ಎಸ್.ಎಸ್. ಪಾರಾ, ಹಲಸಿಯ ಸಂತೋಷ ಪಾಟೀಲ, ಮಲ್ಲಮ್ಮ ಹೆಬ್ಬಾಳೆ, ಅನಿತಾ ಆರ್. ಪಾಟೀಲ, ವಿಜಯಲಕ್ಷ್ಮಿ ರಾಜೋಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬೀರೇಶ್ವರ ಸೌಹಾರ್ದ ಸಹಕಾರಿಯ ಸಲಹಾ ಸಮಿತಿ ಸದಸ್ಯೆ ಜಗದೇವಿ ಪನಸಾಲೆ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಾಹಿತಿ ರಮೇಶ ಮಠಪತಿ, ಪ್ರಮುಖರಾದ ಮಾಣಿಕಪ್ಪ ಗೋರನಾಳೆ, ಚಂದ್ರಶೇಖರ ಹೆಬ್ಬಾಳೆ, ಅಶೋಕ ಎಲಿ, ರಾಜಕುಮಾರ ಪಾಟೀಲ, ವಿ.ಎಸ್. ಬಿರಾದಾರ, ಆರ್.ಕೆ. ಪಾಟೀಲ, ಶಿವಕುಮಾರ ಪಾಖಾಲ್, ಪ್ರಕಾಶ ಮಠಪತಿ, ಚನ್ನಬಸಪ್ಪ ಹಂಗರಗಿ, ಸಿ.ಎಸ್. ಗಣಾಚಾರಿ, ಅಣುವೀರ ಕೂಡಂಬಲ್, ಅಭಿಷೇಕ ಮಠಪತಿ ಮತ್ತಿತರರು ಇದ್ದರು.
ಬಸವ ತತ್ವ ಬೆಳೆಸಿದ್ದ ಅಕ್ಕ
ಅಕ್ಕ ಅನ್ನಪೂರ್ಣತಾಯಿ ಅವರು ನಾಡಿನಲ್ಲಿ ಬಸವ ತತ್ವವನ್ನು ಬೆಳೆಸಿದ್ದರು ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.
ಅಪೂರ್ವ ಪ್ರವಚನಕಾರರಾಗಿದ್ದರು. ಬಸವ ತತ್ವ ಜನಮನದಲ್ಲಿ ನೆಲೆಗೊಳಿಸಲು ವಾರದ ಅನುಭವ ಮಂಟಪ, ಮಾಸಿಕ ಬಸವ ಜ್ಯೋತಿ, ಶರಣ ಸಂಗಮ, ವಚನ ವಿಜಯೋತ್ಸವ, ಸಾಮೂಹಿಕ ವಚನ ಪಾರಾಯಣ ಪರಂಪರೆ ಹುಟ್ಟು ಹಾಕಿದರು ಎಂದು ಹೇಳಿದರು.
ಬಸವಾದಿ ಶರಣರ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಯಲು ಬಸವ ಸೇವಾ ಪ್ರತಿಷ್ಠಾನ, ಲಿಂಗಾಯತ ಮಹಾಮಠ, ನೀಲಮ್ಮನ ಬಳಗ, ಲಿಂಗಾಯತ ಸೇವಾ ದಳ ಸಂಸ್ಥೆಗಳನ್ನು ಕಟ್ಟಿದರು. ಬಸವಗಿರಿಯಲ್ಲಿ ಗುರುವಚನ ಪರುಷ ಕಟ್ಟೆ ಸ್ಥಾಪಿಸಿದರು ಎಂದು ತಿಳಿಸಿದರು.
ನಾಲ್ಕು ದಶಕಗಳ ವರೆಗೆ ಬಸವತತ್ವ ಪ್ರಸಾರಕ್ಕೆ ಬಿಡುವಿಲ್ಲದೆ ಪರಿಶ್ರಮಿಸಿದ್ದರು. ೨೧ನೇ ಶತಮಾನದ ಆಧ್ಯಾತ್ಮ ಲೋಕದ ಮರೆಯಲಾಗದ ಮಾಣಿಕ್ಯವಾಗಿದ್ದರು. ಅವರ ತತ್ವ, ಆದರ್ಶಗಳನ್ನು ಎಲ್ಲರೂ ಪಾಲಿಸಬೇಕಾಗಿದೆ. ಬಸವ ತತ್ವವನ್ನು ಬೆಳೆಸಬೇಕಾಗಿದೆ ಎಂದರು.
‘ಹಸಿದವರಿಗೆ ಅನ್ನ – ಅನ್ನಪೂರ್ಣ ಯೋಜನೆ’
ಹಸಿದವರಿಗೆ ಅನ್ನ – ಸಾರ್ಥಕ ಸೇವೆ – ವರ್ಷದ ಸಂಭ್ರಮ

ಹಸಿದವರ ಹೊಟ್ಟೆ ತಣಿಸಲು ಬೀದರನ ಲಿಂಗಾಯತ ಮಹಾ ಮಠದಿಂದ ಪೂಜ್ಯಶ್ರೀ ಮ.ನಿ.ಪ್ರ. ಡಾ. ಅಕ್ಕ ಅನ್ನಪೂರ್ಣತಾಯಿಯವರ ಸ್ಮರಣಾರ್ಥವಾಗಿ ‘ಹಸಿದವರಿಗೆ ಅನ್ನ – ಅನ್ನಪೂರ್ಣ ಯೋಜನೆ’ ದಿನಾಂಕ ೨೪-೦೫-೨೦೨೫ ರಂದು ಆರಂಭಿಸಲಾಗಿದೆ ಎಂದು ಸಾಹಿತಿ ರಮೇಶ ಮಠಪತಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಯೋಜನೆಯ ಅನುಷ್ಠಾನಕ್ಕೆ ರೋಟರಿ ಕ್ಲಬ್ ಆಫ್ ಬೀದರ ನ್ಯೂ ಸೆಂಚೂರಿ ಸಂಸ್ಥೆಯವರು ಶರಣ ಶಿವಕುಮಾರ ಪಾಖಾಲ ಅವರ ಅಧ್ಯಕ್ಷತೆಯಲ್ಲಿ ವಿದ್ಯುತ್ ಚಾಲಿತ ವಾಹನ ನೀಡುವ ಮೂಲಕ ಕೈಜೋಡಿಸಿದ್ದು ಸ್ಮರಣಾರ್ಹ ಎಂದರು.
ಸರ್ಕಾರಿ ಆಸ್ಪತ್ರೆ ಮತ್ತು ಆಹಾರ ಅಗತ್ಯವಿರುವ ಅನೇಕ ಕಡೆಗಳಲ್ಲಿ ನಿರಂತರ ಪ್ರಸಾದ ದಾಸೋಹಗೈದ ಸಾರ್ಥಕತೆ ಶ್ರೀಮಠ ಹಾಗೂ ರೋಟರಿ ಸಂಸ್ಥೆಯದು. ದಿನಾಲು ನೂರಾರು ಜನರಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿದೆ ಎಂದರು.
‘ಅನ್ನದೇವರ ಮುಂದೆ ಇನ್ನು ದೇವರಿಲ್ಲ’. ರೈತರ ಬೆವರಿನ ಫಲವಾದ ಆಹಾರ ವ್ಯರ್ಥವಾಗದೆ ಹಸಿದವರಿಗೆ ವಿತರಿಸಬೇಕೆಂಬುದು ಈ ಯೋಜನೆಯ ಇನ್ನೊಂದು ಉದ್ದೇಶ. ಮದುವೆ, ಗೃಹ-ಪ್ರವೇಶ ಮುಂತಾದ ಸಮಾರಂಭಗಳಲ್ಲಿ ಹೆಚ್ಚಾದ ಆಹಾರವನ್ನು ಸಂಗ್ರಹಿಸಿ, ಹಸಿದವರಿಗೆ ಉಣಬಡಿಸಲಾಗುತ್ತಿದೆ. ಅನೇಕ ಸಲ ಸಾವಿರಾರು ಹಸಿದ ಹೊಟ್ಟೆಗಳಿಗೆ ಅನ್ನ ಉಣಿಸಿದ ದಾಖಲೆಗಳೂ ಇವೆ. ಇಂತಹ ಮಾನವೀಯ ಕಾರ್ಯಗೈಯ್ಯುತ್ತಿರುವ ‘ಅನ್ನಪೂರ್ಣ’ ಯೋಜನೆಗೆ ಇದೀಗ ವಾರ್ಷಿಕೋತ್ಸವದ ಸಂಭ್ರಮ. ಯಶಸ್ವಿ ಅನುಷ್ಠಾನಕ್ಕೆ ಸಹಕರಿಸಿದ ಸರ್ವ ದಾಸೋಹಿಗಳಿಗೆ ಮತ್ತು ಪರಿಶ್ರಮಿಸಿದವರಿಗೆಲ್ಲ ಹೃತ್ತೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಈ ಅನ್ನ ದಾಸೋಹ ನಿರಂತರವಾಗಿ ಮುಂದುವರೆಸಲು ತಮ್ಮೆಲ್ಲರ ಸಹಕಾರ ಮತ್ತು ದೇಣಿಗೆ ಅವಶ್ಯವಾಗಿದೆ. ಹುಟ್ಟುಹಬ್ಬ, ಮದುವೆ ವಾಷಿಕೋತ್ಸವ, ಹಿರಿಯರ ಸ್ಮರಣೋತ್ಸವ ಮುಂತಾದ ಸಂದರ್ಭಗಳಲ್ಲಿ ಪ್ರಸ್ತುತ ‘ರೋಟರಿ ಫುಡ್ ಆನ್ ವೀಲ್ಸ್ – ಅನ್ನಪೂರ್ಣ’ ಯೋಜನೆಗೆ ದಾಸೋಹಗೈದು ಆಚರಣೆಗಳನ್ನು ಅರ್ಥಪೂರ್ಣವಾಗಿಸಿಕೊಳ್ಳಬಹುದು. ಆದ ಪ್ರಯುಕ್ತ ಇಚ್ಛೆಯುಳ್ಳವರು ಧನ-ಧಾನ್ಯ ಯಾವುದೇ ರೂಪದಲ್ಲಿ ದಾಸೋಹಗೈದು ಮಾನವೀಯ ಸೇವೆಗೆ ಕೈ ಜೋಡಿಸಲು ಮಠಪತಿ ಕರೆ ನೀಡಿದರು.
ಹಸಿದ ಹೊಟ್ಟೆಗಳಿಗೆ ಉಣಿಸಲು ತಮ್ಮ ದಾಸೋಹದ ಸೇವೆಗಾಗಿ ೯೪೪೯೧೩೯೦೦೧, ೯೪೪೯೬೪೭೨೮೧, ೭೭೯೫೩೦೯೫೨೧, ೯೭೪೧೯೯೬೦೩೮, ೯೪೮೨೧೨೩೨೮೨, ೮೧೯೭೪೯೪೫೬೦ ಈ ದೂರವಾಣಿಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.
