ಕಲಬುರ್ಗಿ ಕಾಲೇಜುಗಳಲ್ಲಿ ಶರಣತತ್ವ ಉಪನ್ಯಾಸ ಆಯೋಜಿಸಲು ನಿರ್ಣಯ

ಬಸವ ಮೀಡಿಯಾ
ಬಸವ ಮೀಡಿಯಾ

ಗುಲ್ಬರ್ಗ ವಿವಿಯಲ್ಲಿ ಬಸವಾದಿ ಶರಣರ ಸಾಹಿತ್ಯ ಕೇಂದ್ರದ ಸಭೆ

ಕಲಬುರಗಿ :

ಗುಲ್ಬರ್ಗ ವಿಶ್ವವಿದ್ಯಾಲಯದ ಗಳಂಗಳಪ್ಪ ಪಾಟೀಲ (ಎಸ್. ಬಿ. ಪಾಟೀಲ) ಬಸವಾದಿ ಶರಣರ ಸಾಹಿತ್ಯ ಕೇಂದ್ರದ ಸಭೆ ಕುಲಪತಿಗಳಾದ ಡಾ. ಶಶಿಕಾಂತ ಉಡಿಕೇರಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯಲ್ಲಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಸಹಯೋಗದೊಂದಿಗೆ ಶರಣರ ಸಂದೇಶಗಳನ್ನು ಸಾರುವ ಉಪನ್ಯಾಸಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ಗುಲ್ಬರ್ಗ ಆಕಾಶವಾಣಿಯ ಸಹಯೋಗದೊಂದಿಗೆ ರಾಜ್ಯಮಟ್ಟದಲ್ಲಿ ಪ್ರಸಾರವಾಗುವ ಪ್ರಾಯೋಜಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಚರ್ಚೆಯೂ ನಡೆಯಿತು.

ಅಜ್ಞಾತ ಶರಣರ ಕುರಿತಾಗಿರುವ ಸಂಶೋಧನಾತ್ಮಕ ಲೇಖನಗಳನ್ನು ಸಂಪಾದಿಸಿ ಪುಸ್ತಕಗಳನ್ನು ಪ್ರಕಟಿಸಲು ಸಮಾಲೋಚಿಸಲಾಯಿತು.

ವಚನ ಸಾಹಿತ್ಯ ಕುರಿತಾಗಿರುವ ಡಿಪ್ಲೋಮಾ/ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸಲು ಚಿಂತಿಸಲಾಯಿತು.

ಸಭೆಯಲ್ಲಿ ಕುಲಸಚಿವರಾದ ಡಾ. ರಮೇಶ ಲಂಡನಕರ್, ಕೇಂದ್ರದ ನಿರ್ದೇಶಕರಾದ ಡಾ. ಎಸ್. ಎಂ. ಹನಗೂಡಿಮಠ, ಖಾಯಂ ಸದಸ್ಯರಾದ ಬಂಡಪ್ಪ ಕೇಸುರ್, ಡಾ. ವಿ.ಜಿ. ಅಂದಾನಿ, ಕೇಂದ್ರದ ನೂತನ ಸಲಹಾ ಸಮಿತಿ ನಿರ್ದೇಶಕರಾದ ಡಾ. ಆನಂದ ಪಾಟೀಲ ಸಿದ್ಧಾಮಣಿ, ಡಾ. ಗಣಪತಿ ಸಿನ್ನೂರ, ಡಾ. ವೀರಶೆಟ್ಟಿ ಬಿ. ಗಾರಂಪಳ್ಳಿ ಅವರನ್ನು ಸ್ವಾಗತಿಸಿ ಸನ್ಮಾನಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *