ಹುಲಸೂರ :
ತಾಲ್ಲೂಕಿನ ಬೇಲೂರ ಗ್ರಾಮದ ಶರಣ ಉರಿಲಿಂಗ ಪೆದ್ದಿಮಠ ಹಾಗೂ ಶರಣ ಉರಿಲಿಂಗಪೆದ್ದಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಯುಕ್ತಾಶ್ರಯದಲ್ಲಿ ‘ಬುದ್ದ ಪೂರ್ಣಿಮೆ’ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಉರಿಲಿಂಗ ಪೆದ್ದಿ ಮಠದ ಪೂಜ್ಯ ಪಂಚಾಕ್ಷರಿ ಸ್ವಾಮಿಜಿ ವಹಿಸಿ ಮಾತನಾಡುತ್ತ, ತಥಾಗತ ಗೌತಮ ಬುದ್ಧರ ತತ್ವಗಳು ಜಗತ್ತಿಗೆ ಬೆಳಕಾಗಿವೆ. ಅವರ ಜಯಂತಿಯ ಈ ಸಂದರ್ಭದಲ್ಲಿ ಅವರ ವಿಚಾರಗಳನ್ನು ಅರಿತು ಬದುಕಿನಲ್ಲಿ ಆಚರಿಸಬೇಕು. ಬುದ್ಧ, ಬಸವರು ಮನುಕುಲ ಉದ್ಧಾರಕ್ಕೆಂದೇ ಬಂದವರು.
ಪರಿಕ್ಷೆಯಲ್ಲಿ ಉತ್ತಿರ್ಣರಾದ ಗ್ರಾಮದ ಮಕ್ಕಳಿಗೆ ಶುಭ ಕೋರುತ್ತಾ, ಸಾಮಾಜಿಕ ಶಾಂತಿಯ ಶರಣರ ನಾಡಿನ ಗ್ರಾಮದಲ್ಲಿ ಶೈಕ್ಷಣಿಕ ಕ್ರಾಂತಿ ಆಗುತ್ತಿರುವದು ಸಂತೋಷದ ವಿಷಯವಾಗಿದೆ. ನಮ್ಮ ಗ್ರಾಮದಲ್ಲಿ ಎಸ್ ಎಸ್ ಎಲ್ ಸಿ ಪರಿಕ್ಷೆಯಲ್ಲಿ ಶಾಲೆಯು ಪ್ರತಿಶತ ನೂರರಷ್ಟು ಫಲಿತಾಂಶ ಪಡೆದಿದ್ದು, ಮಕ್ಕಳೆಲ್ಲ ಮುಂದಿನ ವಿದ್ಯಾಭ್ಯಾಸ ಉತ್ತಮವಾಗಿ ಮಾಡಿ, ವಿವಿಧ ಹುದ್ದೆಗಳನ್ನು ಪಡೆದು ಸಾಮಾಜಿಕ, ಸಾಂಸ್ಕೃತಿಕ ಸೇವೆ ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಹುಲಸೂರ ತಹಸೀಲ್ದಾರರಾದ ಶಿವಾನಂದ ಮೇತ್ರೆ ಅವರು, ಬೇಲೂರ ಗ್ರಾಮದ ಉರಿಲಿಂಗಪೆದ್ದಿ ಮಠವು ರಾಜ್ಯದಾದ್ಯಂತ ಹೆಸರುವಾಸಿಯಾಗಿದೆ. ಮಠದ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಸನ್ಮಾರ್ಗದ ಕಡೆ ನಡೆಯುತ್ತಿದ್ದಾರೆ ಎಂದರು.
ಬೇಲೂರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಬಸಪ್ಪ ಬಿರಾದಾರ ಅವರು, 25 ವರ್ಷಗಳ ನಂತರ ಶೇ. ನೂರು ಫಲಿತಾಂಶ ಬಂದಿದೆ, ಇದಕ್ಕೆ ವಿದ್ಯಾರ್ಥಿಗಳು ಹಾಗೂ ಪಾಲಕರ ಶ್ರಮ ತುಂಬಾ ಮಹತ್ವದ್ದಾಗಿದೆ. ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಜೀವಕುಮಾರ ನಡುಕರ ಶಿಕ್ಷಕರು ಮಾತನಾಡುತ್ತಾ, ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಂಡು ಗೌತಮ ಬುದ್ಧರ ತತ್ವಾದರ್ಶಗಳ ಪಾಲನೆ ಮಾಡಲಿ ಅಂದರು.
ಅಧ್ಯಕ್ಷತೆ ವಹಿಸಿದ್ದ ಹುಲಸೂರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾದೇವ ಲಕ್ಷ್ಮಣ ಜೆಮ್ಮು ಮಾತನಾಡಿ, ಕಲ್ಯಾಣ ಕರ್ನಾಟಕ ಶೈಕ್ಷಣಿಕ, ಆರ್ಥಿಕವಾಗಿ ಮುಂದೆ ಸಾಗುತ್ತಿದೆ ಎಂದರು.
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸಪ್ಪ ಖಡ್ಡೆ, ನ್ಯಾಯವಾದಿ ಸಂಜೀವಕುಮಾರ ಖೇಲೆ, ಶರಣಪ್ಪ ಗದಲೇಗಾಂವ, ಗುರುನಾಥ ವಿಠ್ಠಲ ವಾಗ್ಮಾರೆ, ಅಶೋಕ ರಾಜೋಳೆ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಗ್ರಾಮದ ಮಕ್ಕಳನ್ನು ಸನ್ಮಾನಿಸಲಾಯಿತು.
ಭಿಮಶ್ಯಾ ವಾಗ್ಮಾರೆ ಸ್ವಾಗತಿಸಿದರು, ಮಹಾಲಿಂಗ ದೇವರು ನಿರೂಪಿಸಿದರು, ಗಣೇಶ ರಾಧು ವಂದಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M
