ಬೀದರ :
ಪ್ರಾಣಿ, ಪಕ್ಷಿಗಳ ಮೇಲೆ ದಯೆ ತೋರಿಸಿ, ಅವುಗಳಿಗೆ ನೀರು ಒದಗಿಸುವುದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಗಂಗಾಂಬಿಕಾ ಪಾಟೀಲ ಹೇಳಿದರು.
ನಗರದ ಬರೀದ್ ಶಾಹಿ ಉದ್ಯಾನದಲ್ಲಿ ಆಯೋಜಿಸಿದ್ದ ‘ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಅಭಿಯಾನ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಾಣಿ-ಪಕ್ಷಿಗಳು ತಮ್ಮ ಬಾಯಾರಿಕೆಯನ್ನು ಹೇಳಿಕೊಳ್ಳುವುದಿಲ್ಲ. ಆದ್ದರಿಂದ ಮನೆ ಆವರಣ, ಗಿಡಮರಗಳ ಕೆಳಗೆ ಹಾಗೂ ಸಾಧ್ಯವಾದ ಸ್ಥಳಗಳಲ್ಲಿ ನೀರಿನ ಪಾತ್ರೆಗಳನ್ನು ಇಡುವುದು ಅಗತ್ಯವಾಗಿದೆ ಎಂದರು.

ರಾಜ್ಯ ಹಿರಿಯ ನಾಗರಿಕರ ಪ್ರಶಸ್ತಿ ಪುರಸ್ಕೃತ ವೀರಭದ್ರಪ್ಪ ಉಪ್ಪಿನ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಣಿ ಪಕ್ಷಿಗಳು ಮತ್ತು ಪರಿಸರ ಪರಸ್ಪರ ಅವಲಂಬಿತವಾಗಿವೆ. ಪರಿಸರ ಸಮತೋಲನ ಕಾಪಾಡುವಲ್ಲಿ ಪಕ್ಷಿಗಳ ಪಾತ್ರ ಮಹತ್ವದ್ದಾಗಿದೆ.
ಕಳೆದ ಹತ್ತು ವರ್ಷಗಳಿಂದ ನಗರದ ವಿವಿಧ ಸ್ಥಳಗಳಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತಿದ್ದು, ಈ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಡಾ. ಗಂಗಾಂಬಿಕಾ ಅಕ್ಕ ಅವರಿಗೆ ಯೋಗ ತಂಡದಿಂದ ಗೌರವಿಸಲಾಯಿತು. ನಿವೃತ್ತ ಸರಕಾರಿ ಉಪನಿರ್ದೇಶಕ ಗಂಗಪ್ಪ ಸಾವಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಡಾ. ನಂದಕುಮಾರ ತಾಂದಳೆ, ಈಶ್ವರ ಕನೇರಿ, ನ್ಯಾಯವಾದಿ ಮೋಹನ ಏಳನೂರಕರ, ನೀಲಮ್ಮ ರೂಗನ್, ಯೋಗೇಂದ್ರ ಯದಲಾಪುರ, ಪುಷ್ಪಾ ಕಪಲಾಪುರ, ಅರುಣಾ ಪಾಟೀಲ, ಮಲ್ಲಿಕಾರ್ಜುನ ಹಂಡೆ, ಗುರುಸ್ವಾಮಿ, ಸಂಜು ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಅಶೋಕ, ಸಂಜು ಶೀಲವಂತ, ವೀರಶೆಟ್ಟಿ ಅಂತೇಶ್ವರ್ ಶೇಟ್ಕರ್, ನಂದಕುಮಾರ ಕಾವಡಿ, ಚಂದ್ರಪ್ಪ ಬಿರಾದಾರ, ಮಹಾಲಿಂಗಪ್ಪ ಬೆಲ್ದಾಳೆ, ಪ್ರಭುಶೆಟ್ಟಿ ಮೂಲಗೆ, ಪುಣ್ಯವತಿ ವಿಸಾಜಿ, ಮಲ್ಲಿಕಾರ್ಜುನ ಪಂಚಾಕ್ಷರ, ಎಸ್.ಬಿ. ಬಿರಾದಾರ, ಬುಕ್ಕಾ ಸಿದ್ದಯ್ಯ ಕಾವಡಿ, ಜ್ಞಾನೇಶ್, ರಾಚಯ್ಯಸ್ವಾಮಿ, ಶಂಕರ ಚಿದ್ರಿ ಮತ್ತಿತರರಿದ್ದರು.
ಕೃಪೆ : ವಾರ್ತಾ ಭಾರತಿ
