ದಾವಣಗೆರೆ :
ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ರವಿ ಹಂಜ್ ಮತ್ತು ವಿಶ್ವವಾಣಿ ಪತ್ರಿಕೆಯಲ್ಲಿ ಲಿಂಗಾಯತ ಧರ್ಮದ ವಿರುದ್ಧ ಲೇಖನ ಬರೆಸಲು ಪ್ರೇರೇಪಿಸಿ, ತನ್ನ ಚಾನೆಲ್ ನಲ್ಲಿ ಸಂದರ್ಶನ ಮಾಡಿಸಿ ಪ್ರಚೋದಿಸಿದ ವಿಶ್ವೇಶ್ವರ ಭಟ್ಟ ಈರ್ವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಶ್ರೀ ಜಯದೇವ ವೃತ್ತದಲ್ಲಿ ಬಸವ ಭಕ್ತರು, ಲಿಂಗಾಯತ ಧರ್ಮದ ಸಂಘಟನೆಗಳು , ಬಸವ ಅಭಿಮಾನಿಗಳು ಸೇರಿ ರವಿ ಹಂಜ್ ಪ್ರತಿಕೃತಿ ದಹನ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಎಂ. ಶಿವಕುಮಾರ ಮಾತನಾಡಿ, 12ನೆಯ ಶತಮಾನದ ಶಿವಶರಣರ ಕೊಡುಗೆಯಾದ ವಚನ ಸಾಹಿತ್ಯ, ಅನುಭವ ಮಂಟಪ ಈ ಜಗತ್ತಿಗೆ ಮಾದರಿಯಾಗಿದ್ದು, ಲಿಂಗಾಯತವು ವಿಶ್ವಧರ್ಮವಾಗಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಶರಣರ ವಿಚಾರಧಾರೆಗಳನ್ನು ಹತ್ತಿಕುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದ್ದು ಕೆಲವು ಸ್ವಾರ್ಥ ಲಿಂಗಾಯತರನ್ನು ಬಳಸಿಕೊಂಡು ಇಂತಹ ನೀಚ ಕೆಲಸ ಮಾಡಿಸಲಾಗುತ್ತಿದೆ. ಈ ಕೃತ್ಯ ಸಂಘಟನೆಯು ಉಗ್ರವಾಗಿ ಖಂಡಿಸುತ್ತದೆ. ಈ ಕೂಡಲೇ ರವಿ ಹಂಜ, ವಿಶ್ವೇಶ್ವರ ಭಟ್ಟನನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಬಸವ ಮಂಟಪದ ಜಿ.ಹೆಚ್. ರಾಜಶೇಖರಪ್ಪ ಮಾತನಾಡಿ, ತಪ್ಪು ಯಾರೇ ಮಾಡಿದ್ದರೂ ಅದು ತಪ್ಪು. ಅವರನ್ನು ಈ ಸಮಾಜ ಕ್ಷಮಿಸುವುದಿಲ್ಲ. ಲಿಂಗಾಯತರು ವಚನ ಸಾಹಿತ್ಯ ಅಧ್ಯಯನ ಮಾಡದೆ, ನಮ್ಮ ಧರ್ಮ ಸಂವಿಧಾನಗಳಾದ ಅಷ್ಟಾವರಣ, ಷಟಸ್ಥಳ, ಪಂಚಾಚಾರಗಳನ್ನು ಸರಿಯಾಗಿ ತಿಳಿಯದೆ ಅನ್ಯರ ಕೈಗೆ ತಮ್ಮ ಮೆದುಳನ್ನು ಅಡ ಇಟ್ಟು , ಕುಖ್ಯಾತಿ ಗಳಿಸಲು ಇಂಥ ಕೃತ್ಯಗಳನ್ನು ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶ್ರೀಗುರು ಬಸವ ಮಂಟಪ, ರಾಷ್ಟ್ರೀಯ ಬಸವದಳ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕಲಾ ಲೋಕ, ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್, ಕದಳಿ ವೇದಿಕೆಯ ಪದಾಧಿಕಾರಿಗಳು , ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ನಂತರ ಬಡಾವಣೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲಾಯಿತು. ಆನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

ರವಿ ಹಂಜ ಮತ್ತು ವಿಶ್ವೇಶ್ವರ ಭಟ್ ವಿರುದ್ಧ ಎಫ ಐ ಆರ್ ಹಾಕಿ ಬಂಧಿಸಿ ಜೈ ಬಸವ ಶರಣು ಶರಣಾರ್ಥಿ