ರಾಯಚೂರು
ಬಸವ ಕೇಂದ್ರದ ಗೌರವಾಧ್ಯಕ್ಷರು, ಅಪ್ಪಟ ಬಸವಪರಿಪಾಲಕರಾದ, ಹಾಗೂ ಬಸವ ಕೇಂದ್ರ ಸ್ಥಾಪನೆಯಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸಿದ್ದ, ಹಿರಿಯ ಶರಣ ಶರಣಪ್ಪ ಪಾಟೀಲ, ಮಚನೂರು ಅವರು ಸೋಮವಾರ ಲಿಂಗ್ಯಕ್ಯರಾದರು.

ಮಂಗಳವಾರ ಬೆಳಿಗ್ಗೆ ರಾಯಚೂರು ನಗರ ಬಸವ ಕೇಂದ್ರದಲ್ಲಿ ಲಿಂಗೈಕ್ಯರ ಸೇವೆಯನ್ನು ಸ್ಮರಿಸಿ, ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬಸವ ಕೇಂದ್ರದ ಅಧ್ಯಕ್ಷರಾದ ಶರಣ ರಾಚನಗೌಡ, ಚಂದ್ರಶೇಖರ ಎಂ, ಬಸವರಾಜ್ ಜೆ, ಸಿ.ಬಿ.ಪಾಟೀಲ, ಚನ್ನಬಸವಣ್ಣ, ದೇವಣ್ಣ ನಾಯಕ, ಶಂಕರಗೌಡ, ಮಹದೇವಪ್ಪ ಯೆಗನೂರು, ಅಂಬರೀಶ ಪಾಟೀಲ್, ದಿನ್ನಿ ಶರಣಪ್ಪ, ಗೋನಾಳ ನಾಗೇಶ್ವರಪ್ಪ, ನಾಗರಾಜ್ ಪಾಟೀಲ್, ವೀರೇಶ್ ಹಾಗೂ ಅಕ್ಕನ ಬಳಗದ ಶರಣೆಯರು ಉಪಸ್ಥಿತರಿದ್ದರು.
