ರಾಯಚೂರು ಬಸವ ಉತ್ಸವ: ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ರಾಯಚೂರು

ಜುಲೈ 25, 26 ನಡೆಯಲಿರುವ ರಾಷ್ಟ್ರೀಯ ಬಸವ ದಳದ ಮೂರನೇ ಬೃಹತ್ ಬಸವ ಉತ್ಸವವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಸವ ಉತ್ಸವ ಉದ್ಘಾಟಿಸುವರು ಎಂದು ಬಸವ ದಳದ ಅಧ್ಯಕ್ಷ ಸಿದ್ದರಾಮಪ್ಪ ತಿಳಿಸಿದರು.

ನಗರದಲ್ಲಿ ಬುಧವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ ಎನ್.ಎಸ್ ಬೋಸರಾಜು ವಹಿಸುವರು ಎಂದರು.

ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠ ಬಸವ ಗಂಗೋತ್ರಿ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ, ಬಸವಕಲ್ಯಾಣದ ಗುಣತೀರ್ಥವಾಡಿ ಬಸವ ಮಹಾಮನೆ ಮಹಾಮಠದ ಬಸವ ಪ್ರಭು ಸ್ವಾಮೀಜಿ, ಚಿಕ್ಕಮಗಳೂರು ಜಯಬಸವ ವನದ ಮಹಾಶಿವಶರಣ ಬಸವ ಹರಳಯ್ಯ ಸ್ವಾಮೀಜಿ, ಬಳ್ಳಾರಿ ಬಿಷಪ್ ರೆವಡೆಂಟ್ ಹೆನ್ರಿ ಡಿಸೋಜಾ, ಸೂಫಿ ಸಂತ ಸೈಯದ್ ಅಬ್ದುಲ್ ರಜಾಕ್, ಇಲಕಲ್‌ನ ಪ್ರವಚನಕಾರ ಲಾಲ್‌ ಹುಸೇನಸಾನ್ ಕಂದಕಲ್, ಚಿಕ್ಕಮುನಹಳ್ಳಿ ಸಿದ್ದಾರೂಢ ಮಠದ ಶಿವಪುತ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಧ್ವಜಾರೋಹಣವನ್ನು ಮಾಜಿ ಶಾಸಕ ಎ.ಪಾಪಾರೆಡ್ಡಿ ನೇರವೆರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಶಿವರಾಜ ಪಾಟೀಲ, ಬಸನಗೌಡ ಬಾದರ್ಲಿ, ಹಂಪಯ್ಯ ನಾಯಕ, ಕೇಂದ್ರ ದ ಮಾಜಿ ಸಚಿವ ಬಸವರಾಜ ಪಾಟೀಲ ಆನ್ವರಿ, ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ಕಾಂಗ್ರೆಸ್ ಮುಖಂಡ ರವಿ ಬೋಸರಾಜು, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಪಿ.ರುದ್ರಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಗುರುನಾಥ ಆಗಮಿಸಲಿದ್ದಾರೆ ಎಂದರು.

25ರಂದು ಸಂಜೆ.4.30ಕ್ಕೆ ಯುವ ಸಮಾವೇಶ ನಡೆಯಲಿದೆ. ಚನ್ನಬಸವ ನಾಂದ ಸ್ವಾಮೀಜಿ, ಬೀದರ್ ಬಸವ ಮಂಟಪದ ಸತ್ಯಾದೇವಿ, ಬಸವ ಮಹಾಮನೆಯ ಬಸವ ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಉದ್ಘಾಟಿಸುವರು. ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಜು.26ರಂದು ಗುರುಬಸವ ಪೂಜೆ ಮತ್ತು ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಲಿದೆ. ಚನ್ನಬಸವಾನಂದ ಸ್ವಾಮೀಜಿ ನಡೆಸಿಕೊಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ಈರಪ್ಪಗೌಡ ಯರಮರಸ್, ಶಂಶಾಲಂ, ಸೂಗುರೆಡ್ಡಿ, ಭೀಮಣ್ಣ, ಸತ್ಯನಾರಾಯಣ ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *