ಕನ್ನೇರಿ ಸ್ವಾಮಿ ಸಮಾವೇಶ ವಿರುದ್ಧ ಪ್ರಗತಿಪರ ಸಂಘಟನೆಗಳ ಬೃಹತ್ ಪ್ರತಿಭಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ಕೋಮು ಸೌಹಾರ್ದತೆ, ಸಾಮಾಜಿಕ ಶಾಂತಿ ಕಾಪಾಡಲು ಸರಕಾರಕ್ಕೆ ಆಗ್ರಹ

ಗಂಗಾವತಿ :

ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ಶಾಂತಿಯನ್ನು ಕಾಪಾಡಲು, ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಜಿಲ್ಲಾಡಳಿತ ಅನುಮತಿ ನೀಡದಂತೆ ಒತ್ತಾಯಿಸಿ ರೈತ, ಕಾರ್ಮಿಕ, ಬಸವಪರ ಸಂಘಟನೆಗಳು ಶನಿವಾರ ಬೃಹತ್ ಪ್ರತಿಭಟನೆ ಮಾಡಿ ಒತ್ತಾಯಿಸಿದವು.

ನಗರದ ಇಸ್ಲಾಂಪುರ ವೃತ್ತದಲ್ಲಿ ಸಂಘಟನೆಗಳು ಪ್ರತಿಭಟಿಸಿದವು. ಸಭೆ ನಡೆಸಿ ಮಾನ್ಯ ತಹಶೀಲ್ದಾರ್ ಅವರ ಮುಖಾಂತರ ಜಿಲ್ಲಾಧಿಕಾರಿಗಳು, ಕೊಪ್ಪಳ ಅವರಿಗೆ ಮನವಿ ಸಲ್ಲಿಸಿದವು.

ಮಹಾರಾಷ್ಟ್ರದ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ನವೆಂಬರ್ 3ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಹಿಂದೂ ಸಮಾವೇಶ ಆಯೋಜಿಸಲು ಉದ್ದೇಶಿಸಿರುವುದು ನಗರದ ಐತಿಹಾಸಿಕ ಭಾವೈಕ್ಯತೆ ಮತ್ತು ಸಾಮಾಜಿಕ ಸಾಮರಸ್ಯದ ದೃಷ್ಟಿಯಿಂದ ಆತಂಕಕ್ಕೆ ಕಾರಣವಾಗಿದೆ. ಈ ಸಮಾವೇಶಕ್ಕೆ ಜಿಲ್ಲಾಡಳಿತ ಅನುಮತಿ ನೀಡಬಾರದೆಂದು ಸಂಘಟನೆಗಳು ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿವೆ.

ಪ್ರತಿಭಟನೆಯಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಬಸವಪರ ಸಂಘಟನೆಗಳ ಒಕ್ಕೂಟ, ಕರ್ನಾಟಕ ಪ್ರಾಂತ ರೈತ ಸಂಘ (ಎಐಕೆಎಸ್), ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ (ಎಐಎಡಬ್ಲ್ಯುಯು), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಮತ್ತಿತರ ಸಂಘಟನೆಗಳ ನೂರಾರು ಸದಸ್ಯರು ಭಾಗವಹಿಸಿದ್ದರು.

ಹೋರಾಟದ ನೇತೃತ್ವವನ್ನು ನಿರುಪಾದಿ ಬೆಣಕಲ್, ಬಸವರಾಜ ಎಂ., ಶ್ರೀನಿವಾಸ ಹೊಸಳ್ಳಿ, ಮಂಜುನಾಥ ಡಗ್ಗಿ, ಹುಸೇನಪ್ಪ ಕೆ., ಶಿವಣ್ಣ ಬೆಣಕಲ್, ಬಾಳಪ್ಪ ಹುಲಿಹೈದರ, ಕೆ. ಬಸವರಾಜ, ಎ.ಕೆ. ಮಹೇಶಕುಮಾರ, ಹನುಮೇಶ ಕಲ್ಮಂಗಿ, ಅಮರೇಶ ಕಡಗದ, ಹುಲಿಗೆಮ್ಮ, ಪ್ರದೀಪಕುಮಾರ ವಂದಾಲ ಮತ್ತಿತರರು ವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *